ಈಗಾಗಲೇ ಹಾವುಗಳು ಸೇರಿದಂತೆ ಅನೇಕ ವಿಷ ಜಂತುಗಳ ಕಾಟವೇ ಸಾಕಾಗಿದೆ, ಇನ್ನು ವಿಷಕಾರಿ ಅಂಶಗಳು ಭೂಮಿಯ ಸೇರುತ್ತದೆ, ತಿನ್ನುವ ಆಹಾರ ಪದಾರ್ಥಗಳು ವಿಷವಾಗುತ್ತಿದೆ, ಉಸಿರಾಡುವ ಗಾಳಿಯು ಮಲಿನಗೊಂಡಿದೆ, ಇದರ ಜೊತೆಗೆ ನಾಯಕರುಗಳ ಮಾತಿನಲ್ಲಿ ವಿಷವು ಉಕ್ಕಿ ಹರಿಯುತ್ತಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ದೇಶ ಆಳುತ್ತಿರುವವರು ಸತ್ಯಹರಿಶ್ಚಂದ್ರರು ಅಲ್ಲ, ಮಾತನಾಡುತ್ತಿರುವವರು ಎಲ್ಲರೂ ಹಾಲಿನಷ್ಟು ಶುದ್ಧರಲ್ಲ, ಇನ್ನು ಗಾಂಧೀಜಿಯವರಷ್ಟು ನೈತಿಕತೆಯ ವ್ಯಕ್ತಿಗಳು ಅಲ್ಲ, ಎಲ್ಲರೂ ಗಾಜಿನ ಮನೆಯಲ್ಲಿ ಕುಳಿತು ಪರಸ್ಪರ ಕಲ್ಲು ಬಿಸುತಿದ್ದೀರಿ, ಎಲ್ಲರ ಮುಖವಾಡಗಳು ಕಳಚಿ ಬೀಳುತ್ತಿವೆ.
ದೇಹ ಶುದ್ಧವಾದರೆ ಸಾಲದು, ನಿಮ್ಮ ಕಿವಿಗಳು ಶುದ್ಧವಾಗಿರಲಿ, ನಿಮ್ಮ ನಾಲಿಗೆಗಳು ಶುದ್ಧವಾಗಿರಲಿ, ನಿಮ್ಮ ಹೃದಯಗಳು ಶುದ್ಧವಾಗಿರಲಿ , ಮೆತ್ತಿರುವ ಹೊಲಸನ್ನು ತೊಳೆಯುವ ಪ್ರಯತ್ನ ಮಾಡಿ, ನಿಮ್ಮ ಕಣ್ಣಿನ ನೋಟಗಳು ಶುಭ್ರವಾಗಿರಲಿ.
ಹುಟ್ಟಿದವರು ನಿರ್ಗಮಿಸಲೇಬೇಕು ಹಾಗೆ ಸಿಂಹಾಸನವನ್ನೇರಿದ ಎಲ್ಲರೂ ಒಂದಲ್ಲ ಒಂದು ಕಾರಣದಿ, ಅಲ್ಲಿಂದ ನಿರ್ಗಮಿಸಲೇಬೇಕು, ಸ್ಮಶಾನಕ್ಕೆ ಹೊತ್ತು ಹೋಗುವುದು ದೇಹಗಳನ್ನು ಅಷ್ಟೇ ಹೊರತು ನೀವು ಕುಳಿತ ಕುರ್ಚಿಗಳನ್ನಲ್ಲ ಎಂಬುದು ನೆನಪಿರಲಿ.
ಹಗಲಿನಲ್ಲಿ ನಿಮ್ಮ ಲೋಪಗಳ ಕಂಡಿದ್ದೇವೆ, ಕತ್ತಲಲ್ಲಿ ಕುಳಿತು ಆರ್ಭಟಿಸಿದ ಮಾತ್ರಕ್ಕೆ ನೀವು ಶುದ್ಧರೆಂದು ನಂಬಲು ಇಲ್ಲಿ ಯಾರು ಮೂರ್ಖರಲ್ಲ, ಎಲ್ಲರ ಬದುಕಿನ ಹಿಂದಿನ ಪುಟಗಳ ಪರಿಚಯ ಬಹಳಷ್ಟು ಮಂದಿಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




