ಕ್ರಿಯಾಶೀಲತೆ ಜೀವಂತಿಕೆಯ ಲಕ್ಷಣ

12 months ago

ಕ್ರಿಯಾಶೀಲತೆ ಜೀವಂತಿಕೆಯ ಲಕ್ಷಣ

ಬಿಳಿಯ ಕಾಗದ ತಾನು ಸ್ವಚ್ಛವಾಗಿ ಇರಬೇಕೆಂದು  ಸದಾ ಬಯಸಿದರೆ,
ಅದು ಮೂಲೆಯಲ್ಲಿಯೇ ಇರುತ್ತದೆ
ಮುದ್ರಣವಾದರೆ ಅದರ ಮೇಲೆ ಅಕ್ಷರಗಳು ಅದಕ್ಕೆ ಮಹತ್ವ.

ಸುತ್ತಿಗೆಯ ಪೆಟ್ಟು ತಿನ್ನಬಾರದೆಂದು ಶಿಲೆ ಶಿಲ್ಪವಾಗದಿದ್ದರೆ,
ಅದಕ್ಕಿಲ್ಲ  ಗೌರವದ, ಭಕ್ತಿಯ ಮನ್ನಣೆ.

ಚಿನ್ನ ಮಣ್ಣಿನಿಂದ ಬೇರ್ಪಟ್ಟು ಸಾಕಷ್ಟು ನೋವು ಅನುಭವಿಸದಿದ್ದರೆ,
ಆಭರಣವಾಗುವುದಿಲ್ಲ, ಆಭರಣವಾದರೆ ಮಾತ್ರವೇ ಅದಕ್ಕೆ ಬೆಲೆ.

ಗಿಡದಲ್ಲಿ ಹೂವು  ಬೇರ್ಪಟ್ಟು, ಮಾಲೆಯಾಗಿ ದೇವರಿಗೆ ಅರ್ಪಿತವಾಗದಿದ್ದರೆ,
ನೆಲಕ್ಕೆ ಬಿದ್ದು ಕಸವಾಗ ಬೇಕಷ್ಟೇ.

ನಮಗೇಕೆ ಅದರ ಚಿಂತೆ ಎಂದು, ನಮ್ಮ ಸುತ್ತಲೂ ನಡೆಯುವ
ಘಟನೆಗಳಿಗೆ ಸ್ಪಂದಿಸದೆ ಮೌನವಾಗಿದ್ದರೆ,
ಬಳಕೆಯಾಗದ ಹಾಳೆಯಂತೆ,
ಮಣ್ಣಿನಿಂದ ಬೇರ್ಪಡದ ಚಿನ್ನದಂತೆ,
ಗಿಡದಿಂದ ಹೊರಬರದ ಹೂವಿನಂತೆ,
ಚಲನಶೀಲತೆ ಇಲ್ಲದ ಬಂಡೆಯಂತೆ ಬದುಕು.

ಬೀಳಬಹುದೆಂದು ನಡೆಯದೆ ಇರುವುದು,
ಟೀಕೆಗಳಿಗೆ ಅಂಜಿ ಏನನ್ನು ಮಾಡದೆ ಸುಮ್ಮನಿರುವುದು,
ಜೀವವಿರುವ ಶವಗಳ ರೀತಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply