ಸೇವೆ ಮಾಡಬೇಕೆಂಬ ಕಾರಣಕ್ಕೆ ಹೆತ್ತವರನ್ನು ಆಶ್ರಮಗಳ ಸೇರಿಸಿ ಕೈ ತೊಳೆದುಕೊಳ್ಳುವ ಕರ್ತವ್ಯ ಹೀನ ವ್ಯಕ್ತಿಗಳ ನಡುವೆ ನಾವಿಂದು.
ಮಕ್ಕಳು ತುಂಟಾಟ ಮಾಡುತ್ತಾರೆ, ಚೇಷ್ಟೆ ಮಾಡುತ್ತಾರೆ ಅವರನ್ನ ನೋಡಿಕೊಳ್ಳುವುದು ಕಷ್ಟವೆಂದು ವಸತಿ ಶಾಲೆಗಳಿಗೆ ಸೇರಿಸಿ ಮಕ್ಕಳಿಗೆ ಪ್ರೀತಿಯನ್ನ ಹಂಚದೇ ಹೋಗುತ್ತಿರುವ ತಂದೆ ತಾಯಿಗಳ ನಡುವೆ ನಾವಿಂದು.
ಬದುಕಿನಲ್ಲಿ ಒಮ್ಮೆಯೂ ಹಸುವಿನ ಸೇವೆ ಮಾಡದವರು, ಹಸು ಸಾಕಾಣಿಕೆಯ ಸಮಸ್ಯೆಗಳ ಅರಿವಿಲ್ಲದವರು, ಗೋರಕ್ಷಕರೆಂದು, ತಮ್ಮನ್ನು ತಾವು ಬಿಂಬಿಸಿಕೊಂಡಿರುವ ಆಧುನಿಕ ನಾಯಕರ ನಡುವೆ ನಾವಿಂದು.
ಸ್ನೇಹವನ್ನು ಮಾಡುವಾಗ ಲಾಭದ ಲೆಕ್ಕಾಚಾರ ಹಾಕುವ ಸ್ವಾರ್ಥ ಜನರ ನಡುವೆ ಸ್ನೇಹ ವಿಶ್ವಾಸವನ್ನ ಹುಡುಕುತ್ತಿರುವ ಮನಸ್ಸುಗಳ ನಡುವೆ ನಾವಿಂದು.
ಅಸಮಾನತೆಯ ವಿರುದ್ಧ ಧ್ವನಿಯತ್ತದವರು, ಅಸ್ಪೃಶ್ಯತೆಯ ಆರಾಧಿಸುವವರು, ಮರ್ಯಾದ ಹತ್ಯೆಗಳ ವಿರುದ್ಧ ಎಂದೂ ಬಾಯಿ ಬಿಡದವರು, ಧರ್ಮರಕ್ಷಕರಾಗಿದ್ದಾರೆ, ಇಂಥವರ ನಡುವೆ ನಾವಿಂದು.
ವಿದ್ಯಾವಂತ ಪೋಷಕರು, ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣದ ವ್ಯವಸ್ಥೆ, ಶಾಲೆಯ ಮೇಲಿನ ಬೋಧನೆಯ ಅವಿಶ್ವಾಸದ ಕಾರಣದಿಂದಲೂ, ಮಗುವಿನ ಕಲಿಕೆಯ ಮೇಲಿನ ಭರವಸೆಯ ಕೊರತೆಯೂ, ಖಾಸಗಿ ಪಾಠದ ವ್ಯವಸ್ಥೆಯನ್ನ ಮಾಡಿ, ಮಕ್ಕಳ ಪುಸ್ತಕದ ಹುಳುಗಳನ್ನಾಗಿಸುತ್ತಿರುವ ಆಧುನಿಕ ಪೋಷಕರ ನಡುವೆ ನಾವಿಂದು.
ಊಟದಲ್ಲಿ, ಪ್ರವೇಶದಲ್ಲಿ, ತಾರತಮ್ಯ ಭಕ್ತಿ ಮಂದಿರಗಳಲ್ಲಿ, ಪ್ರವೇಶವಾಯಿತು ಜಾತಿ, ಮತ, ಧರ್ಮಗಳು ಶಿಕ್ಷಣ ಸಂಸ್ಥೆಗಳಲ್ಲಿ ಸದ್ಯ ಇನ್ನು ಜಾತಿಗೊಂದು, ಧರ್ಮಕ್ಕೊಂದು ಆಸ್ಪತ್ರೆಗಳು, ರಕ್ತ ಸಂಗ್ರಹ ಕೇಂದ್ರಗಳು ಸ್ಥಾಪನೆಯಾಗದ ನೆಮ್ಮದಿಯ ಸ್ಥಿತಿಯಲ್ಲಿ ನಾವಿಂದು.
– ಕೆ ಎಸ್ ನಾಗರಾಜ್, ಬೆಂಗಳೂರು




