ಮಕ್ಕಳು ತಂದೆತಾಯಂದಿರ ಆಸೆಯನ್ನು ಪೂರ್ಣಗೊಳಿಸಿ ಜೀವನದಲ್ಲಿ ಮುಂದೆ ಬನ್ನಿ: ಶ್ರೀನಾಥ್

1 year ago

ಬಿಬಿಎಂಪಿ ನೌಕರರ ಸಹಕಾರ ಸಂಘದ 111ನೇ ಸಂಸ್ಥಾಪನಾ ದಿನಾಚರಣೆ

ಪ್ರತಿಭಾ ಪುರಸ್ಕಾರ ಸಮಾರಂಭ

ಬೆಂಗಳೂರು: ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತದ ವತಿಯಿಂದ 111ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸ್ನೇಹಲ್ ಆರ್ ಮತ್ತು ಹಿರಿಯ ಚಲನಚಿತ್ರ ನಟ ಶ್ರೀನಾಥ್, ಹಿರಿಯ ಚಲನಚಿತ್ರ ನಟಿ ವಿನಯ ಪ್ರಸಾದ್, ಆಡಳಿತ ಮಂಡಳಿ ಅಧ್ಯಕ್ಷ ಎ. ಅಮೃತ್‌ರಾಜ್, ಉಪಾಧ್ಯಕ್ಷರಾದ ರವಿ ಕೆ.ಜಿ. ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಪ್ರಣಯರಾಜ ನಟ ಶ್ರೀನಾಥ್ ಮಾತನಾಡಿ, ನಮ್ಮ ನೀತಿ ಬದುಕು ಆದರ್ಶವಾಗಿರಬೇಕು. ವಿಶ್ವಾಸ ಪ್ರೀತಿ ಬೆಳಸಿಕೊಳ್ಳಬೇಕು. ಯುವ ಸಮುದಾಯ ಒಂದೇ ಗುರಿ ಇಟ್ಟುಕೊಳ್ಳಿ, ಏನಾಗಬೇಕು ಎಂದು ನಿರ್ಧಾರ ಮಾಡಿದರೆ ಯಶಸ್ವಿಯಾಗಲು ಸಾಧ್ಯ ಎಂದರು.

ನಾನು ಶಾಲೆಯಲ್ಲಿ ಶೇಕಡ 90ರಷ್ಟು ಗೈರುಹಾಜರಿಯಾಗಿದ್ದೆ, ನಾನು ಶಿಕ್ಷಣ ಪಡೆದಿದ್ದರೆ ಉನ್ನತ ಅಧಿಕಾರಿಯಾಗಬಹುದಿತ್ತು. ಮಕ್ಕಳು ಗಮನಿಸಬೇಕು ತಂದೆ, ತಾಯಿ ನಿಮ್ಮ ಮೇಲೆ ಬಹಳ ಆಸೆಯಿಟ್ಟುಕೊಂಡಿರುತ್ತಾರೆ. ಅದನ್ನ  ಪೂರ್ಣಗೊಳಿಸಿ, ಜೀವನದಲ್ಲಿ ಮುಂದೆ ಬನ್ನಿ ಎಂದರು.

ನಟಿ ವಿನಯ ಪ್ರಸಾದ್ ಮಾತನಾಡಿ, ಇಂದಿನದು ಎಲ್ಲದಕ್ಕೂ ಪ್ರಚಾರ ಸಿಗುವ ಕಾಲವಾಗಿದೆ. ನನ್ನ ಕೆಲಸ ಮುಖ್ಯ ಎಂದು ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದರೆ ಸಾಕು ಅಧಿಕಾರ ಕೀರ್ತಿ ತಾನಗೆ ಹುಡುಕಿಕೊಂಡು ಬರುತ್ತದೆ ಎಂದರು.

ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು, ಇಂದಿನ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವಿದೆ, ಆದರೆ ಶಿಕ್ಷಕರು ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡವಾಗಲಿ, ಶಿಕ್ಷೆ ಕೊಡಲು ಬರುವುದಿಲ್ಲ. ಗುರು, ಹಿರಿಯರು ಮತ್ತು ತಂದೆ, ತಾಯಿಯ ಮಾತನ್ನು ವಿದ್ಯಾರ್ಥಿಗಳು ಕೇಳಬೇಕು. ಯುವಕ, ಯುವತಿಯರು ಶಿಕ್ಷಣದ ಜೊತೆಯಲ್ಲಿ ವಿಧೇಯತೆ ಬೆಳಸಿಕೊಳ್ಳಿ, ಸೌಹರ್ದತೆಯಿಂದ ಎಲ್ಲರು ಬದುಕು ಸಾಗಿಸಬೇಕು ಎಂದರು.

ಎ.ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿಯಲ್ಲಿ ಅಧಿಕಾರಿ ಮತ್ತು ನೌಕರರ ಮಕ್ಕಳು ಐ.ಎ.ಎಸ್. ಮತ್ತು ಇಂಜನಿಯರ್, ವೈದ್ಯರಾಗಿ ಸಮಾಜದ ಉನ್ನತಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಧನೆಗೆಲ್ಲ  ಕಾರಣ ಬಿಬಿಎಂಪಿ ಎಂದು ಹೇಳಬಹುದು. ಸಂಘಕ್ಕೆ 111ವರ್ಷವಾಗಿದೆ ಎಂದರೆ ಇದರೆ ಹಿಂದೆ ಹಲವಾರು ಮಹನೀಯರುಗಳು ಶ್ರಮವಿದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸುವ ಮೂಲಕ ಅವರು ಇನ್ನೂ ಹೆಚ್ಚು ಉತ್ತಮ ಸ್ಥಾನಗಳಿಸಲಿ ಎಂದು ಪ್ರೋತ್ಸಹಿಸುವ ಕಾರ್ಯಕ್ರಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಹಾಗೂ ಸ್ನಾತಕೋತ್ತರ ಪದವಿ ಗಳಿಸಿದ ಪ್ರತಿಭಾವಂತ 172 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಭಾಗ್ಯಶ್ರೀ ಗೌಡರವರಿಂದ ಸಂಗೀತ ಸಂಜೆ ಮತ್ತು ಮಿಮಿಕ್ರಿ ಗೋಪಿರವರಿಂದ ಹಾಸ್ಯಸಂಜೆ ಹಾಗೂ ಶುಭಲಕ್ಷ್ಮಿರವರಿಂದ ಸ್ಯಾಕ್ಸ್ ಪೋನ್ ವಾದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗೌರವ ಸಲಹೆಗಾರ ಸಾಯಿಶಂಕರ್, ಎ.ಜೆ.ಬಾಬಣ್ಣ, ಸಮಿತಿ ಸದಸ್ಯರುಗಳಾದ ಗಂಗಾಧರ್ (ಲಾಲಿ), ವಿನಯ್‌ಕುಮಾರ್ ಕೆ.ಎನ್., ಮಹೇಶ್ ಎಂ., ಹರೀಶ್ ಕುಮಾರ್ ಎನ್.ಸಿ.ಎಂ. ಮುನಿರಾಜು, ಮಂಜುನಾಥ್ ಎಲ್.ಆರ್, ಆರ್.ಪಿ. ವಾಣಿ, ಅಕ್ಕಮಹಾದೇವಿ ಎನ್., ಮಹಾದೇವಿ ಸಂಗಪ್ಪ ಗಾಣಿಗೇರ, ರಾಜಶೇಖರ್ ಡಿ., ಮಂಜುನಾಥ್ ಜಿ. ಮೊದಲಾದವರು ಉಪಸ್ಥಿತರಿದ್ದರು.

Leave a Reply