ಬೆಂಗಳೂರು: 2011ರಿಂದ ಜನಸಂಸ್ಕೃತಿ ಮತ್ತು ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಕಿರಂ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮ 2026ರ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಎಂದಿನಂತೆ ಈ ಬಾರಿ ಕೂಡ ಕಾರ್ಯಕ್ರಮದಲ್ಲಿ ಕವಿಗಳಿಂದ ಕವಿತೆ ವಾಚನ ಆಯೋಜಿಸಲಾಗುತ್ತಿದೆ. ಕರ್ನಾಟಕ ಮತ್ತು ಹೊರ ರಾಜ್ಯ, ದೇಶಗಳಲ್ಲಿರುವ ಕವಿಗಳು ಕವಿತೆಗಳನ್ನು ಕಳಿಸಬಹುದು. ಆದರೆ, ಆಗಸ್ಟ್ 7, 2026ರಂದು ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದಲ್ಲಿ ಖುದ್ದು ಭಾಗವಹಿಸಿ ಕವಿತೆಯನ್ನು ವಾಚಿಸಬೇಕು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕವಿಗಳು ಕವಿತೆಗಳನ್ನು ಕಳುಹಿಸಬಾರದು.
- ಪಿತೃಪ್ರಧಾನ ವ್ಯವಸ್ಥೆಯ ಧ್ವಂಸ ಮತ್ತು ಪಿತೃಪ್ರಧಾನತೆಯ ಉತ್ತೇಜನ
- ರಾಜನಾಗದ ರಾಜಕುಮಾರ ನೇಮಾರ್
- ಕಿಚ್ಚ ಸುದೀಪ್ರಿಂದ ಅಭಿಮಾನಿಗಳಿಗೆ ಭಾವುಕ ಪತ್ರ
- ನೇಪಾಳ ದುರಂತದಲ್ಲಿ ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರದ ಮನವಿ
- ಅಸಾಧಾರಣ ಸಾಧಕ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ವಿಶೇಷ ಸೂಚನೆಗಳು :-
1. ಒಬ್ಬರು ಒಂದು ಕವಿತೆಯನ್ನು ಮಾತ್ರ ಕಳಿಸಬೇಕು
2. ಸ್ವರಚಿತ ಕನ್ನಡ ಕವಿತೆಯಾಗಿರಬೇಕು
3. ಭಾವಾನುವಾದ ಅಥವಾ ಭಾಷಾಂತರ ಕವಿತೆಯಾಗಿರಬಾರದು
4. ಕವಿತೆಯನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿ ಕಳಿಸಬೇಕು
5. ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಹೊರ ತರುವ ರಾಜ್ಯ ಮಟ್ಟದ ಕವಿತೆಗಳ ಸಂಕಲನದಲ್ಲಿ ಪ್ರಕಟಿಸಲಾಗುವುದು ಮತ್ತು ಬೆಂಗಳೂರಿನಲ್ಲಿ ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿಗಳನ್ನು ಆಹ್ವಾನಿಸಲಾಗುವುದು.
6. ಕವಿಗಳು ಕವಿತೆಗಳನ್ನು ಕಳುಹಿಸುವಾಗ ಕಡ್ಡಾಯವಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು.
7. ಕವಿತೆಗಳನ್ನು ಈ ಕೆಳಗಿನ ಮಿಂಚಂಚೆಯ ಅಥವಾ ವಾಟ್ಸಪ್ ಮೂಲಕ ಜುಲೈ 20, 2026ರ ಒಳಗೆ ನಮಗೆ ಕಳುಹಿಸಬೇಕು.
8. ಕವಿತೆಯ ಆಯ್ಕೆ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಬಿಟ್ಟದ್ದು, ಈ ಕುರಿತು ಯಾವುದೇ ಪತ್ರ, ದೂರವಾಣಿ ವ್ಯವಹಾರಕ್ಕೆ ಅವಕಾಶವಿಲ್ಲ.
9. ಕವಿತೆಗಳನ್ನು ತಿರಸ್ಕರಿಸುವ ಅಥವಾ ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಸೇರಿದೆ.
ವಾಟ್ಸಪ್ ನಲ್ಲಿ ಕಳುಹಿಸುವವರಿಗೆ: 9900733141
ಮಿಂಚಂಚೆ: narayankkyasamballi@gmail.com




