ಯುವ ಸಮೂಹ ಎತ್ತ ಸಾಗುತ್ತಿದೆ ಎಂದು ಸಮಾಜ ಚಿಂತನೆ ಮಾಡಬೇಕು: ಕೆ.ಎನ್.ಫಣೀಂದ್ರ

3 years ago

ಬೆಂಗಳೂರು: ಯುವ ಸಮೂಹ ಎತ್ತ ಸಾಗುತ್ತಿದೆ ಎಂದು ಸಮಾಜ ಚಿಂತನೆ ಮಾಡಬೇಕು ಎಂದು ನ್ಯಾಯಮೂರ್ತಿ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತ ವತಿಯಿಂದ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮೇರು ಸಂತ ಸಿದ್ದೇಶ್ವರ ಸ್ವಾಮೀಜಿರವರು ಆಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದರು.

ಸರ್ಕಾರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು, ದೇಶದ ಉಜ್ವಲ ಭವಿಷ್ಯ ಮಕ್ಕಳಲ್ಲಿ ಅಡಗಿದೆ. ಕೆಟ್ಟವರು, ಒಳ್ಳೆಯವರು ಸಮಾಜದಲ್ಲಿ ಇರುತ್ತಾರೆ. ಅಣ್ಣತಮ್ಮಂದಿರ ನಡುವೆ ವೈಮನಸ್ಸು ಇರುತ್ತದೆ. ಆಡಳಿತದಲ್ಲಿ ವ್ಯವಸ್ಥೆಯಲ್ಲಿಯೂ ಸಹಜ ಎಂದರು.

ಯುವ ಸಮೂಹ ಎತ್ತ ಕಡೆ ಸಾಗುತ್ತಿದೆ ಎಂಬ ಚಿಂತನೆ ಸಮಾಜ ಮಾಡಬೇಕಾಗುತ್ತದೆ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ತಾಯಿ ಮೊದಲ ಗುರುವಾಗಿ ಕಾಣುತ್ತಾಳೆ. ತಂದೆಯು ಮಕ್ಕಳಿಗೆ ಶಿಸ್ತುಬದ್ಧವಾಗಿ ಕಲಿಸುವ ಜವಾಬ್ಬಾರಿ ಇರುತ್ತದೆ. ತಂದೆತಾಯಿಗಿಂತ ಮೀಗಿಲಾದ ಸ್ಥಾನವನ್ನು ಗುರುವಿಗೆ ನೀಡಿದೆ ಎಂದರು.

ವಿದ್ಯೆ ಕಲಿತ ಯಶ್ವಸಿಯಾದ ವಿದ್ಯಾರ್ಥಿಯನ್ನ ಸಮಾಜ ಕಾಪಾಡಬೇಕು. ಸಮಾಜದಿಂದ ಎಲ್ಲವನ್ನು ಪಡೆದೆವು, ಸಮಾಜಕ್ಕಾಗಿ ನಾವು ಏನು ಕೊಟ್ಟೆವು ಎಂಬ ದೇಶಭಕ್ತಿ ಕಲಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟಿದ ನಂತರ ಕರ್ತವ್ಯ ನಿಭಾಯಿಸಬೇಕು. ಪ್ರಾಮಾಣಿಕವಾಗಿ ಜೀವನ ಸಾಗಿಸದರೆ ಸಾಕು. ದೇಶದಲ್ಲಿ ಪ್ರಾಮಾಣಿಕತೆ ಹೆಚ್ಚಾಗಬೇಕು, ಅಪ್ರಮಾಣಿಕತೆ ಕಡಿಮೆಯಾಗಬೇಕು ಆಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಬಾಳು ಬಾಳಲು ಸಂವಿಧಾನ ಎಲ್ಲರಿಗೂ ಅವಕಾಶ ಕೊಟ್ಟಿದೆ. ಮಕ್ಕಳು ವಿದ್ಯೆ ಕಲಿತರೆ, ಜೀವನದಲ್ಲಿ ವಿನಯ ಬರುತ್ತದೆ, ವಿನಯ ಇದ್ದಾಗ ವಿಶ್ವವನ್ನೆ ಗೆಲ್ಲುವ ಶಕ್ತಿ ಬರುತ್ತದೆ ಎಂದು ಹೇಳಿದರು.

ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಮಹತ್ವವಾದ ಸಾಧನೆ ಮಾಡಿದ.  ಗದಗ ಜಿಲ್ಲೆಯಿಂದ ಸಹಕಾರ ಕ್ರಾಂತಿ ಆರಂಭವಾಯಿತು. ನಿಗದಿತ ಠೇವಣಿ ಹಣವನ್ನು ಉತ್ತಮ ಬಡ್ಡಿ ದರ ನೀಡುತ್ತಿದ್ದಾರೆ. ಅತ್ಯಂತ ಕಡಿಮೆ ವೆಚ್ಚೆದಲ್ಲಿ ಆಡಳಿತ ನಿರ್ವಹಣೆ ಮಾಡಿ ಉತ್ತಮ ಸಾಧನೆಯತ್ತ ಸಹಕಾರ ಯಶ್ವಸಿಯತ್ತ ಸಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನಿಮ್ಮ ಭವಿಷ್ಯ  ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, 16ರಿಂದ 22 ವಯಸ್ಸು ಬಹಳ ಜಾಗೃತೆಯಿಂದ ಸಾಗಬೇಕು. ಜೀವನ ಬದಲಾವಣೆ ಸಮಯ ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳ ಜೊತೆಯಲ್ಲಿ  ಅವರ ತಂದೆ, ತಾಯಿರವರಿಗೂ ಸಹ ಅಭಿನಂದನೆ ಸಲ್ಲಿಸಬೇಕು. ಕೆಲಸದ ಒತ್ತಡದ ನಡುವೆ ಮಕ್ಕಳ ವಿದ್ಯಾಭ್ಯಾಸಕ್ಕೆ ತಂದೆ, ತಾಯಿ ಹೆಚ್ಚಿನ ಗಮನ ನೀಡಿರುವುದು ಉತ್ತಮ ವಿಷಯ ಎಂದರು.

ಚಿತ್ರನಟಿ ಪ್ರೇಮಾ ಮಾತನಾಡಿ, ಕಲಾವಿದರಿಗೆ ಜನ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರದ ಸೇವೆ ಮಾಡುವಂತಾಗಲಿ ಎಂದು ಹೇಳಿದರು.

ಇದೇ ವೇಳೆ ಪ್ರತಿಭಾವಂತ 140ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

ಭಾ.ಆ.ಸೇ. ಸಹಕಾರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ವಕೀಲ ಶ್ರೀನಿವಾಸ್, ಸಹಕಾರ ಸಂಘದ ಕೆ.ಜಿ.ರವಿ, ಎಸ್.ಜಿ.ಸುರೇಶ್, ಮಾರೇಗೌಡ, ರಾಜಶೇಖರ್, ಶಂಕರ್, ರಾಮಚಂದ್ರ, ಕಾಂಚನಾ, ಹನುಮಂತಪ್ಪ, ಮಂಜುನಾಥ್, ಲಕ್ಷ್ಮೀ, ವಾಣಿ ಮೊದಲಾದವರು ಹಾಜರಿದ್ದರು.

Leave a Reply