ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!

4 hours ago

ಕನ್ನಡ ಮಾಧ್ಯಮ ಮೀಸಲಾತಿಗೆ 25 ರ ಬೆಳ್ಳಿ ಸಂಭ್ರಮ

ತುಮಕೂರಿನಲ್ಲಿ ಆಗಸ್ಟ್ 9ಕ್ಕೆ ಬೃಹತ್ ‘ಚಿಂತನ ಸಮಾವೇಶ

ತುಮಕೂರು: ನಾಡಿನಲ್ಲಿ ಕನ್ನಡ ಮಾಧ್ಯಮ ಕಲಿಕೆಯನ್ನು ಪ್ರೋತ್ಸಾಹಿಸಲು ಹಾಗೂ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಉದ್ಯೋಗ ಮತ್ತು ಶಿಕ್ಷಣ ಭವಿಷ್ಯಕ್ಕೆ ಭದ್ರತೆ ಒದಗಿಸಲು ಜಾರಿಗೆ ಬಂದ ‘ಕನ್ನಡ ಮಾಧ್ಯಮ ಮೀಸಲಾತಿ’ಗೆ ಈಗ ಯಶಸ್ವಿ 25 ವರ್ಷಗಳ ಸಂಭ್ರಮ!

ಈ ಐತಿಹಾಸಿಕ ಮೈಲಿಗಲ್ಲಿನ ಹಿನ್ನೆಲೆಯಲ್ಲಿ ‘ಕನ್ನಡಪರ ಚಿಂತನ ವೇದಿಕೆ, ತುಮಕೂರು’ ವತಿಯಿಂದ ಆಗಸ್ಟ್ 9ರ ಭಾನುವಾರ ನಗರದ ಕನ್ನಡ ಭವನದಲ್ಲಿ ವಿಶೇಷ ‘ಚಿಂತನ ಸಮಾವೇಶ’ ಹಾಗೂ ಸಂವಾದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಆತ್ಮವಿಶ್ವಾಸ ಮೂಡಿಸಲು ಹಾಗೂ ವೃತ್ತಿಪರ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶಗಳನ್ನು ವಿಸ್ತರಿಸಲು 2001-2003 ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಮಹತ್ವದ ಶ್ರಮ ವಹಿಸಿದ್ದರು.

ಅಂದಿನ ಸರ್ಕಾರದ ಜೊತೆ ನಿರಂತರ ಸಂವಾದ ನಡೆಸಿ, 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ MBBS, BE ಹಾಗೂ ದಂತ ವೈದ್ಯಕೀಯ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 5ರಷ್ಟು ಒಳಮೀಸಲಾತಿ ಜಾರಿಗೆ ತರಲಾಯಿತು. ತದನಂತರ, ಈ ಮೀಸಲಾತಿಯನ್ನು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳಿಗೂ ವಿಸ್ತರಿಸಲಾಯಿತು. ಇಂದು ಸಾಮಾನ್ಯ ವರ್ಗ ಸೇರಿದಂತೆ ಲಕ್ಷಾಂತರ ಕನ್ನಡಿಗರು ಈ ಮೀಸಲಾತಿಯ ಫಲಾನುಭವಿಗಳಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಸಾರ್ಥಕ ಯಾನದ 25 ವರ್ಷಗಳ ನೆನಪಿಗಾಗಿ ಈ ಚಿಂತನ ಸಮಾವೇಶ ಆಯೋಜನೆಗೊಂಡಿದೆ.

ಕಾರ್ಯಕ್ರಮದ ರೂಪುರೇಷೆ ಹಾಗೂ ಗಣ್ಯರ ಉಪಸ್ಥಿತಿ:
1. ಉದ್ಘಾಟನಾ ಸಮಾರಂಭ (ಬೆಳಿಗ್ಗೆ 10:30):
ಉದ್ಘಾಟನೆ: ಡಾ. ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಅಧ್ಯಕ್ಷತೆ: ಕೆ.ಎನ್. ರಾಜಣ್ಣ, ಮಾಜಿ ಸಚಿವರು ಹಾಗೂ ಶಾಸಕರು
ಆಶಯನುಡಿ: ಪ್ರೊ. ಬರಗೂರು ರಾಮಚಂದ್ರಪ್ಪ, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

2. ವಿಶೇಷ ಸಂವಾದ ಗೋಷ್ಠಿ – ಮಧ್ಯಾಹ್ನ 12:00 ಗಂಟೆಗೆ
ಕನ್ನಡ ಮಾಧ್ಯಮ ಒಳಮೀಸಲಾತಿಯ ನಿಜವಾದ ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅಪರೂಪದ ಸಂವಾದ ಗೋಷ್ಠಿ ನಡೆಯಲಿದೆ.
ಅಧ್ಯಕ್ಷತೆ: ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಸಂವಾದ ಸಮನ್ವಯಕಾರರು: ಡಾ. ರಾಜಪ್ಪ ದಳವಾಯಿ, ಪ್ರಸಿದ್ಧ ಲೇಖಕರು
ಗೌರವಾನ್ವಿತ ಅತಿಥಿಗಳು
ಡಾ. ಎಚ್. ನಟರಾಜ್, ವ್ಯವಸ್ಥಾಪಕ ನಿರ್ದೇಶಕರು, ಲಿಡ್ಕರ್, ಕರ್ನಾಟಕ ಸರ್ಕಾರ
ಡಾ. ಶಮಾ ಬಿ.ಆರ್., ಮನೋವೈದ್ಯರು, ಆರೋಗ್ಯ ಇಲಾಖೆ
ದೇವಲ ನಾಯ್ಕ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ
ಡಾ. ಟಿಪ್ಪು ಸುಲ್ತಾನ್, ವೈದ್ಯಾಧಿಕಾರಿ, ನಾಗಮಂಗಲ
ಕೆ.ಎಸ್. ಮಧುಸೂದನ್, ಅಧಿಕಾರಿ, ಶಿಕ್ಷಣ ಇಲಾಖೆ

ಸಂಘ-ಸಂಸ್ಥೆಗಳ ಅಭೂತಪೂರ್ವ ಬೆಂಬಲ: ಈ ಸಮಾವೇಶಕ್ಕೆ ತುಮಕೂರು ಜಿಲ್ಲೆಯ ವಿವಿಧ ಪ್ರಮುಖ ಸಂಘಟನೆಗಳಾದ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಲೇಖಕಿಯರ ಸಂಘ, ನಿವೃತ್ತ ನೌಕರರ ಸಂಘ, ಜೈನ ಅಧ್ಯಯನ ಕೇಂದ್ರ, ಕಾಲೇಜು ಪ್ರಾಧ್ಯಾಪಕರ ಸಂಘ, ರೈತ ಸಂಘ, ಯುವ ಬರಹಗಾರರ ಒಕ್ಕೂಟ ಹಾಗೂ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿ ಕೈಜೋಡಿಸಿವೆ.

ಕನ್ನಡ ಮಾಧ್ಯಮದ ಭವಿಷ್ಯ ಹಾಗೂ ಮಾತೃಭಾಷಾ ಶಿಕ್ಷಣದ ಹಕ್ಕುಗಳ ಕುರಿತು ನಡೆಯಲಿರುವ ಈ ಐತಿಹಾಸಿಕ ಚಿಂತನ ಮಂಥನಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ‘ಕನ್ನಡಪರ ಚಿಂತನ ವೇದಿಕೆ’ ಕೋರಿದೆ.

Leave a Reply