ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಅಂತರರಾಷ್ಟ್ರೀಯ ಸಮ್ಮೇಳನ: ಡಾ.ಎ.ಆರ್.ಗೋವಿಂದಸ್ವಾಮಿ
ಚಾಮರಾಜನಗರ: ಬುಡಕಟ್ಟು ಸಮುದಾಯವಾದ ಬಂಜಾರಾ ಸಮಾಜದಲ್ಲಿ ಮದುವೆಯ ಸಂಪ್ರದಾಯ ಮೂರು ತಿಂಗಳ ಕಾಲ ನಡೆಯುತ್ತಿದ್ದವು. ಆದರೆ ಇಂದು ಕೇವಲ ಮೂರು ದಿನಗಳ ಕಾಲ ನಡೆಯುತ್ತಿವೆ. ಕಾರಣ ಹಿಂದೆ ಅಲೆಮಾರಿ ಬಂಜಾರ ಹೆಣ್ಣು ಮಕ್ಕಳು ಮದುವೆಯಾದ ನಂತರ ಕುಟುಂಬದ ಎಲ್ಲಾ ಬಾಂಧವ್ಯವನ್ನು ಬಿಟ್ಟು ಗಂಡನ ಮನೆಗೆ ಹಿಂದಿರುಗದೆ ಹೋಗುವ ಕಾರಣ ಮದುವೆ ಸಮಾರಂಭಗಳನ್ನುಧೀರ್ಘ ಆಚರಣೆಯಾಗಿ ನೆರವೇರಿಸುತ್ತಿದ್ದರು. ಅದರ ಹಿನ್ನೆಲೆಯಲ್ಲಿ ನಿರಂತರವಾಗಿ ಮೂರು ತಿಂಗಳ ಕಾಲ ಒಂದಲ್ಲ ಒಂದು ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸುತ್ತಿದ್ದರು. ಆದರೆ ಇಂದು ಆಧುನಿಕತೆಯ ಪ್ರಭಾವದಿಂದ ಮದುವೆ ಸಮಾರಂಭಗಳು ಕೇವಲ ಮೂರು ದಿನಕ್ಕೆ ಸೀಮಿತಗೊಂಡಿದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ ಎಆರ್ ಗೋವಿಂದಸ್ವಾಮಿ ಕಳವಳ ವ್ಯಕ್ತಪಡಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗು ಚಾಮರಾಜನಗರ ಜಿಲ್ಲಾ ಲಂಬಾಣಿ ಶಾಸ್ತ್ರಗಳ ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರ ಸಂಸ್ಕೃತಿ ಎಲ್ಲಾ ಜಾಲತಾಣಗಳಲ್ಲಿ ಮತ್ತು ಬಂಜಾರರ ಕಲೆ ಸಾಹಿತ್ಯ ಮೂಡಿಬರಬೇಕು. ಅದರ ಜೊತೆಗೆ ಯುಟ್ಯೂಬ್ ನಲ್ಲಿ ಬಂಜಾರರ ಭಾಷೆಯ ಕಲಿಕೆ ಪಾಠ ನಿರಂತರವಾಗಿ ಪ್ರಸಾರವಾಗಲು ಕ್ರಮವಹಿಸಲಾಗುವುದು ಮತ್ತು ವಿಶ್ವಕೋಶ ರಚಿಸಲಾಗುವುದು ಎಂದರು.
ಬಂಜಾರ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ಹೆಣ್ಣು ಮಗಳು ತನ್ನ ತವರನ್ನು ಕುರಿತು ಹೇಳುವಂತಹ ವಾಕ್ಯಗಳು ಮನ ಕಲಕುವಂಥವು “ತನ್ನ ತಾಯಿ 9 ತಿಂಗಳು ಗರ್ಭದಲ್ಲಿ ಇಟ್ಟು ಎತ್ತು ಹೊತ್ತು ಸಾಕಿ ಸಲಹಿ ಪ್ರೀತಿಯಿಂದ ತನ್ನ ಜೀವನವನ್ನು ರೂಪಿಸುತ್ತಾಳೆ. ತಂದೆ ಮಹಾರಾಣಿಯಂತೆ ತನಗೆ ಯಾವುದೇ ಕೊರತೆಯಾಗದಂತೆ ತನ್ನ ಇಷ್ಟದಂತೆ ಎಲ್ಲಾ ಬೇಕು ಬೇಡಗಳನ್ನ ಪೂರೈಸುತ್ತಾ ನಮ್ಮ ಜೀವನವನ್ನು ರೂಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ಬಾಂಧವ್ಯವನ್ನು ಬಿಟ್ಟು ಗಂಡನ ಮನೆಗೆ ಹೋಗುವಂತಹ ಸಂದರ್ಭದಲ್ಲಿ ತನ್ನ ಮನದಾಳದ ಅಳಲನ್ನು ತೋಡಿಕೊಳ್ಳುವಂತಹ ಒಂದು ಪದ್ಧತಿ ಢವಲೋ. ಇದು ಎಲ್ಲಾ ಬಂಜಾರ ಸಮುದಾಯದ ಹೆಣ್ಣು ಮಕ್ಕಳು ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ನೋವನ್ನು ವ್ಯಕ್ತಪಡಿಸುವಂತಹ ರೀತಿಯ ಒಂದು ಪದ್ಧತಿಯಾಗಿದೆ ಎಂದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಕೈಗೊಳ್ಳುತ್ತಿರುವಂತಹ ಕಾರ್ಯಕ್ರಮಗಳು ರೂಪರೇಷೆಗಳನನ್ನು ತಿಳಿಸುತ್ತಾ ಪ್ರಸ್ತುತ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಬಂಜಾರ ಬಂಜಾರ ವಿಶ್ವಕೋಶವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಹಾಗೂ ಬಂಜಾರ ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಮಾಡುವಂತಹ ಸಂಶೋಧಕರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ಅಕಾಡೆಮಿ ನೀಡುತ್ತಾ ಬಂದಿದೆ ಎಂದರು.
ಇದರ ಜೊತೆಗೆ ರಾಜ್ಯದಲ್ಲಿ ಸುಮಾರು 12 ವಿಶ್ವವಿದ್ಯಾಲಯಗಳಲ್ಲಿ ವಿಚಾರಗೋಷ್ಠಿಗಳು ನಡೆದಿದ್ದು ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾದ ಕಾರ್ಯ ಚಟುವಟಿಕೆಯನ್ನು ತೊಡಗಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಬಂಜಾರ ಕಸೂತಿ ತರಬೇತಿ, ಬಂಜಾರ ಆಭರಣಗಳ ತಯಾರಿಕಾ ಕಾರ್ಯಾಗಾರ, ನಾಟಕ ರಚನಾ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದರು.
ಬಂಜಾರರ ಹಬ್ಬ ಹರಿದಿನ ಆಚಾರ ವಿಚಾರ ಆಚರಣೆ ಮೂಲಕ ಸಾಹಿತ್ಯ ಕಲೆ ಸಾಂಸ್ಕೃತಿಕ ಸಾಂಸ್ಕೃತಿಕತೆಯನ್ನ ಸಾರುವ ನಾಟಕಗಳ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಬಂಜಾರ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತಹ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಬಂಜಾರ ಸಮುದಾಯದ ಇತಿಹಾಸವನ್ನು ಹುಡುಕುತ್ತಾ ಹೋದಂಗೆಲ್ಲ ಬಂಜಾರರು ಬುದ್ಧ ಹಾಗೂ ಯೇಸುವಿನ ಕಾಲದಿಂದಲೂ ಇರುವಂತಹ ಒಂದು ಸಮುದಾಯವಾಗಿದ್ದು ವಿಶ್ವದ 116 ರಾಷ್ಟ್ರಗಳಲ್ಲಿ ಬಂಜಾರ ಸಮುದಾಯದ ಜನರು ನೆಲೆ ನಿಂತಿದ್ದಾರೆ. ಅದೇ ರೀತಿ ಚಾರ್ಲಿ ಚಾಪ್ಲಿನ್ ಅವರು ಕೂಡ ಬಂಜಾರ ಸಮುದಾಯಕ್ಕೆ ಸೇರಿದವರಾಗಿದ್ದು ಅದು ಬಂಜಾರ ಸಮುದಾಯದ ಹೆಮ್ಮೆಯ ವಿಷಯ ಎಂದರು.
ಮುಂದಿನ ದಿನಗಳಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಲು ಸಿದ್ಧತೆ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ವಿಶ್ವದ ಬೇರೆಬೇರೆ ದೇಶಗಳಲ್ಲಿ ನೆಲೆ ನಿಂತಿರುವ ಬಂಜಾರ ವಿದ್ವಾಂಸರು ಸಾಹಿತಿಗಳು ಪ್ರಾಧ್ಯಾಪಕರನ್ನು ಸಂಪರ್ಕಿಸುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಚಂದ್ರಶೇಖರ್, ಬಂಜಾರರ ಐತಿಹಾಸಿಕ ಮಾನ್ಯತೆ ಬಂಜಾರರಿಗೆ ಐತಿಹಾಸಿಕ ಮಾನ್ಯತೆ ಇದ್ದು ಇಡೀ ವಿಶ್ವದಲ್ಲಿ ಬಂಜಾರ ಸಮುದಾಯ ಕಡಿಮೆ ಸಮಾರಂಭಗಳನ್ನು ನಡೆಸುತ್ತಾ ಬರುತ್ತಿದೆ ಎಂದರು.
ಬಂಜಾರ ಸಮಾರಂಭಗಳಲ್ಲಿ ಇರುವಂತಹ ಅಳು ನಗು ಊಟ ನೆಂಟರು ಹೇಗೆ ಭಾಗವಹಿಸುತ್ತಾರೆ ಎಂದು ಬಂಜಾರರ ಸಂಸ್ಕೃತಿಯನ್ನು ಆಳವಾಗಿ ವಿವರಿಸಿದರು.
ಚಾಮನಗರ ಚಾಮರಾಜನಗರ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಯಲ್ ಮಾತನಾಡಿ, ಬಂಜಾರರು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವಂತಹ ಜನಾಂಗವಾಗಿದ್ದು ಇವರ ಭಾಷೆ ಆಚಾರ-ವಿಚಾರಗಳು ವಿಶ್ವದಾದ್ಯಂತ ಮಾನ್ಯತೆಯನ್ನ ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾನಪದ ಕಲಾವಿದರದಂತಹ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು. ಮಲೆ ಮಹದೇಶ್ವರ ಮಂಟೇಸ್ವಾಮಿ ನೆಲೆಸಿರುವ ಪುಣ್ಯ ಭೂಮಿ. ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬಂಜಾರ ಸಮುದಾಯದವರ ಬಗ್ಗೆ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು.
ಬಂಜಾರ ಸಮುದಾಯದವರು ಸುಮಾರು ಹದಿನೆಂಟು ಸಾವಿರ ಜನರಿದ್ದು ಇವರು ಬಂಜಾರ ಸಂಸ್ಕೃತಿ ಮತ್ತು ಭಾಷೆ ಉಳಿಸುವ ಕಾರ್ಯಗಳನ್ನು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಬಿ ಟಿ ಲಲಿತಾ ನಾಯಕ್, ಕಾಲದಿಂದ ಕಾಲಕ್ಕೆ ಜನರು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಸ್ಕರಿಸುತ್ತ ಬದುಕಬೇಕು. ಇಂದು ಸಮಾಜದಲ್ಲಿ ಬಹಳಷ್ಟು ಬಡ ಕುಟುಂಬಗಳು ಬದುವಾಸಿಸುತ್ತಿದ್ದು ಅವರು ತಮ್ಮ ಮದುವೆ ಮುಂಜಿ ಕಾರ್ಯಕ್ರಮಕ್ಕೋಸ್ಕರ ತಮ್ಮ ಹೊಲಮನೆಗಳನ್ನ ಮಾರಿಕೊಳ್ಳುವಂತಹ ಒಡವೆಗಳನ್ನು ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಆ ಕಾರಣಕ್ಕೆ ವಿಜೃಂಭಣೆಯಿಂದ ನೆರವೇರಿಸಿದಂತಹ ಮದುವೆ ಸಮಾರಂಭಗಳ ಬದಲಾಗಿ ಸರಳ ವಿವಾಹ ಹಾಗೂ ಸರಳ ಕಾರ್ಯಕ್ರಮಗಳನ್ನ ಮೈಗೂಡಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಹೋದಂಗೆಲ್ಲ ಅವರು ಆ ಕುಟುಂಬಗಳು ಆಗುತ್ತದೆ ಎಂದರು.
ಸಮಾಜ ಇಂದು ಗಾಂಧಿ ಗಾಂಧಿ ಬಸವಣ್ಣ ಅಂಬೇಡ್ಕರ್ ಸೇವಾಲಾಲ್ ಇವರುಗಳ ಬದುಕನ್ನ ನೆನೆಯುತ್ತಾ ಕೇವಲ ಮಾಲಾರ್ಪಣೆ ಪುಷ್ಪಾರ್ಪಣೆಗೆ ಮಾತ್ರ ಸೀಮಿತಗೊಳಿಸದೆ ಈ ಮಹನೀಯರ ದಾರ್ಶನಿಕರ ಆಚಾರ ವಿಚಾರಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಂತಹ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜನೆ ಅಧಿಕಾರಿ, ಡಾ.ಪಳನಿ ಸ್ವಾಮಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಡಾ ಉತ್ತಮ್ ಕೆ ಹೆಚ್, ಸಂಪನ್ಮೂಲ ವ್ಯಕ್ತಿಗಳಾದಂತಹ ರವಿ ನಾಯಕ್ ಚೌಹಾಣ್, ಪ್ರೊ. ಚಂದ್ರಶೇಖರ್. ಸುದೀತಾ ಗಟ್ಟಿ ಮಂದೇಲಾ, ಚಂದ್ರಕಲಾಭಾಯಿ, ಎಂ ಶಾಂತರಾಜು, ಸಿ ಎಂ ಸುಂದರ್, ಕೆ ಶಾಂತಕುಮಾರ್, ಕೃಷ್ಣ ನಾಯಕ್, ನರಸಿಂಹಮೂರ್ತಿ, ಜಗದೀಶ್ ನಾಯಕ್, ಸಿವಾಜಿ ನಾಯಕ್, ಚಂದ್ರಪ್ರಕಾಶ್, ಮೇಘ, ಬಾಲು ನಾಯಕ್, ಶ್ರೀರಾಮ್ ನಾಯಕ್ ಹಾಜರಿದ್ದರು.




