ಬಡಿಗೆ ಕೊಟ್ಟು ಬಡಿಸಿಕೊಂಡು ಬಿಜೆಪಿ ನಾಯಕ ಪ್ರತಾಪ್ ಸಿಂಹ
ಆರ್ಥಿಕ ನೀತಿಗಳ ವಿರುದ್ಧ ಭಾರಿ ಆಕ್ರೋಶ!
ಮೈಸೂರು: ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ‘ಮೋದಿ ಸರ್ಕಾರ ದೇಶಭ್ರಷ್ಟರನ್ನು ಬಿಡುವುದಿಲ್ಲ’ ಎಂಬ ಸಾಧನೆಯ ಪೋಸ್ಟ್‌ಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ಅತ್ಯಂತ ಕಟುವಾದ ಪದಗಳಲ್ಲಿ ಪ್ರತಿಕ್ರಿಯಿಸಿದ್ದು, ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳ ವಿರುದ್ಧವೂ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್‌ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದೇನು?: 2019ರಿಂದ 2026ರ ಜುಲೈವರೆಗೆ 274 ದೇಶಭ್ರಷ್ಟರನ್ನು ಭಾರತಕ್ಕೆ ಮರಳಿಸಲಾಗಿದೆ, ₹17,874 ಕೋಟಿ ಆಸ್ತಿ ಜಪ್ತಿ ಮಾಡಲಾಗಿದೆ ಮತ್ತು ₹18,762 ಕೋಟಿ ಮರುಪಡೆಯಲಾಗಿದೆ ಎಂದು ಪ್ರತಾಪ್ ಸಿಂಹ ಮೋದಿ ಸರ್ಕಾರದ ಭ್ರಷ್ಟಾಚಾರ ವಿರೋಧಿ ಕ್ರಮವನ್ನು ಶ್ಲಾಘಿಸಿದ್ದರು.
ಕಾಮೆಂಟ್ ಬಾಕ್ಸ್‌ನಲ್ಲಿ ವ್ಯಕ್ತವಾದ ಪ್ರಮುಖ ಆಕ್ಷೇಪಗಳು ಹಾಗೂ ಪ್ರಶ್ನೆಗಳು:
* ಪಾರ್ಟಿ ಫಂಡ್ & ಜಪ್ತಿಯಾದ ಹಣದ ಲೆಕ್ಕ: ಜಪ್ತಿ ಮಾಡಲಾದ ₹17,874 ಕೋಟಿ ಅಥವಾ ಮರುಪಡೆಯಲಾದ ₹18,762 ಕೋಟಿ ಹಣ ಯಾರ ಖಾತೆಗೆ ತಲುಪಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. “ಈ ಹಣವೆಲ್ಲಾ ಬಿಜೆಪಿ ಪಾರ್ಟಿ ಫಂಡ್‌ಗೆ ಹೋಯ್ತಾ? ಕಳೆದ 12 ವರ್ಷಗಳಲ್ಲಿ ಪಾರ್ಟಿ ಫಂಡ್ ಇಷ್ಟೊಂದು ಹೆಚ್ಚಾಗಲು ಕಾರಣವೇನು?” ಎಂದು ನೇರ ಪ್ರಶ್ನೆ ತೂರಿದ್ದಾರೆ.
* ತಿಮಿಂಗಿಲಗಳನ್ನು ಬಿಟ್ಟು ಬಂಗುಡ ಮೀನು ಹಿಡಿದರು: ಸಾಮಾನ್ಯ ಚಿಕ್ಕ-ಪುಟ್ಟ ಅಪರಾಧಿಗಳನ್ನು ಹಿಡಿದು ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ನೀರವ್ ಮೋದಿ, ವಿಜಯ್ ಮಲ್ಯ, ಲಲಿತ್ ಮೋದಿ, ಮೆಹುಲ್ ಚೋಕ್ಸಿಯಂತಹ ದೊಡ್ಡ ‘ತಿಮಿಂಗಿಲಗಳನ್ನು’ ಹಿಡಿಯಲು ನಿಮ್ಮಿಂದ ಸಾಧ್ಯವಾಗಿಲ್ಲ. ಅವರು ಯಮಲೋಕದಲ್ಲಿದ್ದಾರೋ ಅಥವಾ ‘ಮೋದಿ’ ಎಂಬ ಸರ್ ನೇಮ್ ಇರುವುದಕ್ಕೆ ವಿನಾಯಿತಿ ನೀಡಲಾಗಿದೆಯೋ ಎಂದು ನೆಟ್ಟಿಗರು ಹಿಗ್ಗಾಮಗ್ಗಾ ಕಾಲೆಳೆದಿದ್ದಾರೆ.
* ಪ್ರಧಾನಿ ವಿದೇಶ ಪ್ರವಾಸ & ದೇಶದ ಸಾಲದ ಹೊರೆ: ಕಳೆದ 12 ವರ್ಷಗಳಲ್ಲಿ ಪ್ರಧಾನಿಯವರು 82 ದೇಶಗಳನ್ನು ಸುತ್ತಿ ಸುಮಾರು ₹5,987 ಕೋಟಿ ಸರ್ಕಾರಿ ಹಣ ವೆಚ್ಚ ಮಾಡಿದ್ದಾರೆ, ಆದರೆ ವಿದೇಶಿ ನೀತಿಗಳಿಂದ ಆದ ಪ್ರಯೋಜನ ಶೂನ್ಯ ಎಂದು ಬಳಕೆದಾರರೊಬ್ಬರು ಟೀಕಿಸಿದ್ದಾರೆ. ದೇಶದ ಸಾಲದ ಹೊರೆ ಶತಕೋಟಿ ರೂಪಾಯಿಗಳನ್ನು ತಲುಪಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ ಎಂದು ಆರ್ಥಿಕ ಸ್ಥಿತಿಯನ್ನು ಪ್ರಶ್ನಿಸಿದ್ದಾರೆ.
* ಬಿಜೆಪಿಗೆ ಸೇರಿಸಿಕೊಳ್ಳುವ ಯಂತ್ರ: ಹೊರಗಿನಿಂದ ಕರೆತಂದವರನ್ನೂ ಹಾಗೂ ದೇಶದೊಳಗಿರುವ ಭ್ರಷ್ಟರನ್ನೂ ಬಿಜೆಪಿ ಪಕ್ಷಕ್ಕೇ ಸೇರಿಸಿಕೊಳ್ಳಲಾಗುತ್ತಿದೆ ಎಂಬ ‘ವಾಷಿಂಗ್ ಮೆಷಿನ್’ ಮಾದರಿಯ ವ್ಯಂಗ್ಯಗಳು ವ್ಯಾಪಕವಾಗಿ ಕಂಡುಬಂದಿವೆ.
* ಸಂಸತ್ತಿನ ಭದ್ರತಾ ಲೋಪದ ನೆನಪು: ಪಾಸ್ ನೀಡಿ ಪಾರ್ಲಿಮೆಂಟ್ ಒಳಗೆ ಕಳುಹಿಸಿ ಹೊಗೆ ಬಾಂಬ್ ಹಾಕಿಸಿದ ಘಟನೆಯನ್ನು ಪ್ರತಾಪ್ ಸಿಂಹ ಅವರಿಗೆ ನೆಟ್ಟಿಗರೊಬ್ಬರು ನೆನಪಿಸಿ ಚಾಟಿ ಬೀಸಿದ್ದಾರೆ.
* ಸ್ಥಳೀಯ ಸಮಸ್ಯೆ ನಿರ್ಲಕ್ಷ್ಯ: ಮೈಸೂರಿನ ಜೋಡಿ ತೆಂಗಿನ ಮರ ರಸ್ತೆಯಲ್ಲಿರುವ ಹಿಂದೂ ಸ್ಮಶಾನದ ಕಾಂಪೌಂಡ್ ಗೋಡೆ ಕುಸಿದುಬಿದ್ದರೂ ಯಾರೂ ಗಮನಿಸುತ್ತಿಲ್ಲ, ಇಂತಹ ಬೊಗಳೆ ಮಾತುಗಳಿಗಿಂತ ಸ್ಥಳೀಯ ಸಮಸ್ಯೆ ಬಗೆಹರಿಸಿ ಎಂದು ಸ್ಥಳೀಯ ನಿವಾಸಿಯೊಬ್ಬರು ಸವಾಲೆಸೆದಿದ್ದಾರೆ.
* ಒಂದೂ ಪಾಸಿಟಿವ್ ಕಾಮೆಂಟ್ ಇಲ್ಲ!: ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಒಂದೇ ಒಂದು ಸಕಾರಾತ್ಮಕ ಕಾಮೆಂಟ್ ಕೂಡ ಇಲ್ಲದಿರುವುದನ್ನು ಬೆಟ್ಟು ಮಾಡಿ ತೋರಿಸಿರುವ ನೆಟ್ಟಿಗರು, “ಇನ್ಬಾಕ್ಸ್ ನೋಡಿ ಸರ್, ಒಂದೂ ಪಾಸಿಟಿವ್ ಕಾಮೆಂಟ್ ಇಲ್ಲ, ಬುಲೆಟ್ ಟ್ರೈನ್ ಬಿಡುತ್ತೇವೆ ಎಂದು ಹೇಳಿ ಈಗ ಬುರುಡೆ ಟ್ರೈನ್ ಬಿಡುತ್ತಿದ್ದೀರಿ” ಎಂದು ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಸಾಧನೆಯನ್ನು ಬಿಂಬಿಸಲು ಹೊರಟ ಮಾಜಿ ಸಂಸದರಿಗೆ, ಸಾರ್ವಜನಿಕರ ಈ ಕಟು ಪ್ರಶ್ನೆಗಳು ಹಾಗೂ ಆಕ್ರೋಶದ ಕಾಮೆಂಟ್‌ಗಳು ದೊಡ್ಡ ಮುಜುಗರವನ್ನು ತಂದೊಡ್ಡಿವೆ.






