ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ
ಬೆಂಗಳೂರು: ಶ್ರೀರಾಮಸೇವಾ ಮಂಡಳಿ ಮತ್ತು ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ನಲ್ಲಾನ್ ಚಕ್ರವರ್ತಿ ಟ್ರಸ್ಟ್ ವತಿಯಿಂದ 16ನೇ ವರ್ಷದ ಮೂರು ದಿನಗಳ ಕಾಲ ಕನಕ ಪುರಂದರ ಸಂಗೀತ ಉತ್ಸವ ಹಾಗೂ ಸಾಧಕ ಸಂಗೀತ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ಆರಂಭವಾಯಿತು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಕೇಶವಪ್ರಸಾದ್, ಲೇಖಕ ಡಾ||ಗುರುರಾಜ್ ಪೋಶೆಟ್ಟಿಹಳ್ಳಿ, ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್.ಶ್ರೀಧರ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಆದಿಶಕ್ತಿ ಮಹಿಳಾ ಭಜನ ಮಂಡಳಿಯ ನಿರ್ದೇಶಕಿ ಎ.ಉಷಾರಾಣಿರವರಿಗೆ ಗಾನಚೇತನ ಪ್ರಶಸ್ತಿ ಮತ್ತು 5 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೇಶವಪ್ರಸಾದ್ ಮಾತನಾಡಿ, ಸನಾತನ ಧರ್ಮ ಉಳಿಸುವುದು ಮತ್ತು ಧಾರ್ಮಿಕ ಜೀವನ ನಡೆಸುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಕನಕದಾಸರ, ಪುರಂದಾಸರು ಕೊಡುಗೆ ಅಪಾರ ಎಂದರು.
ವಿದೇಶಿ ವ್ಯಾಮೋಹ ಹೆಚ್ಚಾಗಿದೆ. ಇಂದು ನಾಡಿನ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಕಷ್ಟಸಾಧ್ಯ. ಭಗವಂತನನ್ನು ನಂಬಿದರೆ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದರು.
ಹಿಂದಿನ ಕಾಲದಲ್ಲಿ ಯಾವುದೇ ವಾಹನ ವ್ಯವಸ್ಥೆ ಇಲ್ಲದೇ ಹೋದರು, ಸಾಧು ಸಂತರು ಬರಿಗಾಲಿನಲ್ಲಿ ನಡೆದುಕೊಂಡು ಹಿಂದೂ ಧರ್ಮ ಉಳಿಯವುದಕ್ಕಾಗಿ ಶ್ರಮಿಸಿದರು ಎಂದರು.
ಕನಕದಾಸರು ಹೆಚ್ಚು ಕೀರ್ತನೆ ರಚಿಸಿದ್ದರು ಎಂಬುದು ಆಶ್ಚರ್ಯವಾಗುತ್ತದೆ, ಪುರಂದರ ದಾಸರನ್ನು ನವಕೋಟಿ ನಾರಾಯಣ ಎಂದು ಕರೆಯುತ್ತಿದ್ದರು. ವಜ್ರ ವ್ಯಾಪಾರಿಯಾಗಿದ್ದ ಪುರಂದಾಸರು ನಂತರ ದೈವಭಕ್ತರಾಗಿ ಮುಂದೆ ದಾಸರಾಗಿ ನಾಡಿಗೆ ಕೀರ್ತಿ ತಂದರು ಎಂದರು.
ಇದೇ ಸಂದರ್ಭದಲ್ಲಿ ಕೆ.ಎಸ್.ಶ್ರೀಧರ್ ಮಾತನಾಡಿ, ಕನಕದಾಸರು, ಪುರಂದರದಾಸರು ನಾಡು ಕಂಡ ದಾಸಶೇಷ್ಟರು. ಕನಕದಾಸರು ವ್ಯಾಸತೀರ್ಥರ ಶಿಷ್ಯರಾಗಿದ್ದರು, ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನೆ ಹಿಮ್ಮುಖವಾಗಿ ತಿರುಗಿ ದರ್ಶನ ನೀಡಿ ಇಂದು ಕನಕನ ಕಿಂಡಿ ಎಂದೇ ಪ್ರಸಿದ್ದಿ ಪಡೆದಿದೆ ಎಂದರು.
ಜಾತಿಯ ವಿರುದ್ದ ಹೋರಾಡಿ ಮಾಡಿದ ಮಹಾನ್ ಸಂತ ಕನಕದಾಸರು. ಶ್ರೀಪುರಂದಾಸರು ಸಹ ದಾಸಶೇಷ್ಠರು ಹರಿದಾಸ ಸಾಹಿತ್ಯಕ್ಕೆ ಅಮೂಲ್ಯರತ್ನರಾಗಿದ್ದರು. ನಾಡಿಗೆ ದಾಸ ಶೇಷ್ಠರು ನೀಡಿದ ಕೊಡುಗೆ ಸ್ಮರಣೆ ಮಾಡಲು ಮೂರು ದಿನಗಳ ಕನಕ, ಪರಂದರ ಸಂಗೀತ ಉತ್ಸವ ಅಚರಿಸಲಾಗುತ್ತಿದೆ ಎಂದರು.
ಜಗದೀಶ್ವರಿ ಮಹಿಳಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲ ಸಂಗೀತ, ನೃತ್ಯ ಉಪನ್ಯಾಸ, ದೇವರನಾಮ, ಭಜನೆ ಕಾರ್ಯಕ್ರಮಗಳು ಜರುಗಲಿವೆ.
ಸಂಘದ ಪದಾಧಿಕಾರಿಗಳಾದ ಜಯರಾಮ್, ಎಸ್.ಮಹೇಶ್, ವೆಂಕಟೇಶ್ ಬಾಬು, ಮಂಜುನಾಥಸ್ವಾಮಿ, ಸುದರ್ಶನ್, ರುಕ್ಮಿಣಿ, ಮದನ್ ರಾವ್, ಬಸವರಾಜು,ರವೀಂದ್ರ, ಎನ್.ಬಾಬು, ಹೆಚ್.ಕೃಷ್ಣಮೂರ್ತಿ ಮೊದಲಾದವರು ಹಾಜರಿದ್ದರು.



