ಮಕ್ಕಳಿಗೆ ಅರಿವು ಮೂಡಿಸಲು ಸಾಂಸ್ಕೃತಿಕ ಕಾರ್ಯಕ್ರಮ

1 year ago

ದೇಶದ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸಲು ಮತ್ತು ಮಕ್ಕಳಿಗೆ ಅರಿವು ಮೂಡಿಸಲು ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು: ಬಸವೇಶ್ವರನಗರದ ಇಂಜಿನಿಯರ್ಸ್ ಅಕಾಡೆಮಿ ಸಭಾಂಗಣದಲ್ಲಿ ಆಟ-ಪಾಟ ಪ್ರಿ ಸ್ಕೂಲ್ ವತಿಯಿಂದ ಶಾಲೆಯ ಮಕ್ಕಳಿಗೆ ಸಂಸ್ಕೃತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇಂಡಿಯನ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಸುಧಾಕರ್, ಶಿವದೇವಾಲಯದ ಅಧ್ಯಕ್ಷ ಮನೋಹರ್ ಮತ್ತು ಆಟ-ಪಾಟ ಶಾಲೆಯ ಅಧ್ಯಕ್ಷ ಶಶಿಕುಮಾರ್, ಪ್ರಾಂಶುಪಾಲರಾದ ನಂದಾ, ಇಂಡಿಯನ್ ಹೈಸ್ಕೂಲ್ ಪ್ರಾಂಶುಪಾಲರಾದ ನಿತ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ಮಕ್ಕಳಿಂದ ಭಾರತೀಯ ಕಲೆ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು, ಭರತನಾಟ್ಯ, ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸುಧಾಕರ್ ಮಾತನಾಡಿ, ತಂದೆ ತಾಯಂದಿರು ಮಕ್ಕಳನ್ನು ದೇವರಂತೆ ಕಾಣುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಗುರುಗಳ ಮಾರ್ಗದರ್ಶನ ಸಿಕ್ಕರೆ ದೇಶದ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ. ದೇಶದ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ದೇಶದ ಸಂಸ್ಕೃತಿಯ ಪಾಠ ಕಲಿಸಬೇಕು ಎಂದರು.

ಶಶಿಕುಮಾರ್ ಮಾತನಾಡಿ, ಆಟ ಮತ್ತು ಪಾಠದ ಜತೆಯಲ್ಲಿ ಮಕ್ಕಳಿಗೆ ದೇಶದ ಸಂಸ್ಕೃತಿ ಸಂಪ್ರದಾಯ ಕಲಿಸಬೇಕು. ನಮ್ಮ  ಮಾತೃಭಾಷೆಯಾದ ಕನ್ನಡವನ್ನು ಪ್ರತಿಯೊಂದು ಮಗುವಿಗೆ ಕಲಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು, ರೈತರು ಮತ್ತು ದೇಶ ಸೇವೆ ಮಾಡುತ್ತಿರುವ ಸೈನಿಕರು ಹಾಗೂ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಅವರಿಗೆ ಅರಿವು ಮೂಡಿಸಬೇಕು ಇದರಿಂದ ಅವರಿಗೆ ದೇಶಭಿಮಾನ ಬೆಳಯುತ್ತದೆ. ಮಕ್ಕಳು ತಪ್ಪು ಮಾಡುವುದು ಸಹಜ, ಮಕ್ಕಳ ತಪ್ಪುಗಳನ್ನು ತಿದ್ದಿ ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸಲು ಶಿಕ್ಷಕರ ಪಾತ್ರ ದೊಡ್ಡದು ಎಂದರು.

ನಂದಾ ಮಾತನಾಡಿ, ಯಶಸ್ಸು ಎನ್ನುವುದು ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಶಿಕ್ಷಕರಿಂದ ಉತ್ತಮ ಪ್ರಪಂಚ ನಿರ್ಮಾಣ ಮಾಡಲು ಸಾಧ್ಯ. ಏಕಲವ್ಯ ನಿರಂತರ ಸಾಧನೆಯಿಂದ, ಗುರುಗಳ ಆಶೀರ್ವಾದದಿಂದ ಉತ್ತಮ ಬಿಲ್ಲುಗಾರಿಕೆ ಕಲಿಯಲು ಸಾಧ್ಯವಾಯಿತು ಎಂದರು.

ಶಾಲೆಯ ಶಿಕ್ಷಕಿಯರಾದ ಲಲಿತ, ಮಂಜುಳ, ಅರ್ಪಿತ, ಶಾಂತಿ ಸುಚಿತ್ರ ಮೊದಲಾದವರು ಉಪಸ್ಥಿತರಿದ್ದರು.

Leave a Reply