ಅಭಯಸೇವಾ ಫೌಂಡೇಷನ್ ವತಿಯಿಂದ ಆಯೋಜನೆ
ಬೆಂಗಳೂರು: ಅಭಯ ಸೇವಾ ಫೌಂಡೇಷನ್ ವತಿಯಿಂದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಡಿಸೆಂಬರ್ 19, 20 ಮತ್ತು 21ರಂದು ಧಾರ್ಮಿಕ, ಸಾಮಾಜಿಕ , ಸಾಂಸ್ಕೃತಿಕ ವಾರ್ಷಿಕೋತ್ಸವ ಸಮಾರಂಭದ ಪೊಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಅಭಯ ಸೇವಾ ಫೌಂಡೇಷನ್ ಅಧ್ಯಕ್ಷ ಎಂ.ಬಿ.ಉಮೇಶ್ ಶೆಟ್ಟಿ ಮತ್ತು ವಸಂತ್ ಗಿಳಿಯಾರ್, ಅಜಿತ್ ಶೆಟ್ಟಿ, ರಾಘವೇಂದ್ರಶೆಟ್ಟಿ , ಪ್ರವೀಣ್ ಸಾಕ್ಷಿಮಠ್ ರವರು ಪೊಸ್ಟರ್ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಎಂ.ಬಿ.ಉಮೇಶ್ ಶೆಟ್ಟಿ ಮಾತನಾಡಿ ರಾಜಾಜಿನಗರ, ಶ್ರೀರಾಮಮಂದಿರ ಆಟದ ಮೈದಾನದಲ್ಲಿ ನಾಡಿನ ಖ್ಯಾತ ಉತ್ತಮ ಶಿಕ್ಷಕಿ ಎಂಬ ಕೀರ್ತಿಗೆ ಪಾತ್ರರಾದ ಸುಶೀಲಮ್ಮ ವೇದಿಕೆಯಲ್ಲಿ ಡಿಸೆಂಬರ್ 19, 20, 21ರಂದು ಸೇವಾ ಸಂಕಲ್ಪ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾಜ ಏನು ಕೊಟ್ಟಿದೆ ಅನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಆದರ್ಶ ಚಿಂತನೆ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ ಮತ್ತು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
19ನೇ ತಾರೀಖು ಸಂಜೆ 5ಗಂಟೆಗೆ ಪೂಜಾವಿಧಿ ಕಂಕಣಧಾರಣೆ ಹಾಗೂ ಡಿಸೆಂಬರ್ 20ರಂದು ಮಧ್ಯಾಹ್ನ 2ಗಂಟೆಗೆ ನವದುರ್ಗಾ ದೀಪ ನಮಸ್ಕಾರ, 108 ಕಳಸ ಪೂಜೆ ಸಂಕೀರ್ತನೆ, ಭರತನಾಟ್ಯ ಕಾರ್ಯಕ್ರಮ, ನವಶಕ್ತಿ ನೃತ್ಯ ವೈಭವ ಕಾರ್ಯಕ್ರಮ, ಡಿಸೆಂಬರ್ 21ರಂದು ಬೆಳಗ್ಗೆ 7ಗಂಟೆಗೆ ಗಣಪತಿಪೂಜೆ, ನೃತ್ಯ ಸ್ಪರ್ಧೆ ಹಾಗೂ ಹುಲಿಹೆಜ್ಜೆ ಕುಣಿತ, ಬೆಳಗ್ಗೆ 11 ಗಂಟೆಗೆ ಸೇವಾ ಸಂಕಲ್ಪ ಮೆರವಣಿಗೆ, ಶ್ರೀಗಳ ಪಾದಪೂಜೆ ಆಶೀರ್ವಚನ ಕಾರ್ಯಕ್ರಮ ಇವೆ ಎಂದರು.
ಮಧ್ಯಾಹ್ನ 1ಗಂಟೆಗೆ ಜಾನಪದ ಜಾತ್ರೆ, ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ, 3 ಗಂಟೆಗೆ ಸವಿತಕ್ಕನ ಅಳ್ಳಿ ಬ್ಯಾಂಡ್ ತಂಡದವರಿಂದ ಜಾನಪದ ಗೀತೆ ಕಾರ್ಯಕ್ರಮ, ಸಂಜೆ 5ಗಂಟೆಗೆ ಅದ್ದೂರಿ ಪಂಚಿನ ಮೆರವಣಿಗೆ, 6-30ಕ್ಕೆ ಸಮಾರೋಪ ಕಾರ್ಯಕ್ರಮ, 8 ಗಂಟೆಗೆ ಧರ್ಮಸಂಸ್ಥಾಪಕನಾರ್ತಾಯ ಸಂಭವಾಮಿ ಯುಗೇ, ಯುಗೇ ನೃತ್ಯರೂಪಕ, 8:30 ಬೀಟ್ ಗುರಸ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು
ಮೂರು ದಿನಗಳ ಕಾಲ ಅನ್ನ ಸಂತರ್ಪಣೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಸಮಾರಂಭದಲ್ಲಿ ನಾಡಿನ ಹೆಸರಾಂತ ಸ್ವಾಮೀಜಿಗಳು ಚಿಂತಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಮತ್ತು ಗಣ್ಯ ಮಹನೀಯರು ಭಾಗವಹಿಸಲಿದ್ದಾರೆ. ಮೂರು ದಿನಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಡಗರ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರು ಆಗಮಿಸಬೇಕಾಗಿ ವಿನಂತಿಸಿದರು.




