8ನೇ ವರ್ಷದ ಲಕ್ಷ ದೀಪೋತ್ಸವ
ಬೆಂಗಳೂರು: ಶ್ರೀರಾಮಾಂಜನೇಯ ಮೂರ್ತಿ ಮುಂಭಾಗದಲ್ಲಿ ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಶ್ರೀ ರಾಮ ಸೇವಾ ಮಂಡಳಿ ಮತ್ತು ನಲ್ಲಾನ್ ಚಕ್ರವರ್ತಿ ಟ್ರಸ್ಟ್ (ರಿ) ಕಾರ್ತಿಕ ಮಾಸದ ಸೋಮವಾರದಂದು 8ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
63 ಅಡಿ ಶ್ರೀರಾಮಾಂಜನೇಯ ಮೂರ್ತಿ ಮುಂಭಾಗದಲ್ಲಿ ಸಾವಿರಾರು ಭಕ್ತಾದಿಗಳು ದೀಪಗಳನ್ನು ಬೆಳಗಿಸಿದರು.
ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ.ಎಸ್.ಶ್ರೀಧರ್ ರವರು ಮಾತನಾಡಿ, ಹನ್ನೆರಡು ಮಾಸಗಳಲ್ಲಿ ಎಂಟನೇ ಮಾಸವಾದ ಕಾರ್ತಿಕ ಮಾಸವು ಬಹಳ ಶ್ರೇಷ್ಠವಾದದ್ದು ಎಂದರು.
ಈ ಮಾಸವು ಶಿವ ಹಾಗೂ ವಿಷ್ಣು ಇಬ್ಬರಿಗೂ ಬಹಳ ಪ್ರಿಯವಾದ ಮಾಸವಾಗಿದ್ದು ಎಲ್ಲರೂ ಒಂದುಗೂಡಿ ದೀಪವನ್ನು ಹಚ್ಚುವ ಮೂಲಕ ಹಿಂದಿನ ಪಾಪ ಮತ್ತು ತಪ್ಪುಗಳೆಂಬ ಕತ್ತಲಿನಿಂದ ಮುಕ್ತಿ ಪಡೆದು ದೇವರ ಕೃಪೆಗೆ ಪಾತ್ರರಾಗಿ ಬೆಳಕಿನೆಡೆಗೆ ಅಂದರೆ ಅಜ್ಞಾನದಿಂದ ಜ್ಞಾನದೆಡೆಗೆ ನಡೆಯುವೆವು ಎಂಬ ನಂಬಿಕೆ ಇದೆ ಎಂದು ಹೇಳಿದರು.
ಶಿವ ಮತ್ತು ವಿಷ್ಣುವಿನ ಧ್ಯಾನದ ಮೂಲಕ ದೀಪ ಬೆಳಗುವುದರಿಂದ ಕುಟುಂಬದಲ್ಲಿ ಬಂದ ಸಂಕಷ್ಟಗಳು ದೂರವಾಗಿ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.
ಮಾಗಡಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ, ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ಶ್ರೀರಾಮಸೇವಾ ಮಂಡಳಿಯ ಪದಾಧಿಕಾರಿಗಳಾದ ಎಸ್.ಮಹೇಶ್, ವೆಂಕಟೇಶ್ ಬಾಬು, ಡಾ.ಮಂಜುನಾಥಸ್ವಾಮಿ, ಎಂ.ಜಿ.ಜಯರತ್ನ, ಭಾಗ್ಯಲಕ್ಷ್ಮಿ, ಬಾಬು, ವಿಜಯರಾಘವನ್, ಭರತ್, ಬೈಜುರಾಮ್, ಸುರೇಶ್, ಎನ್.ಜಯರಾಮ್, ಶಿವರಾಜ್, ಬಸವರಾಜು ಮೊದಲಾದವರು ಇದ್ದರು.



