ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿಯವರ 75ನೇ ಜನ್ಮದಿನದ ಆಚರಣೆ ಹಾಗೂ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತಮ್ಮ ಮನೆಯ ಬಳಿ ಹಮ್ಮಿಕೊಂಡಿದ್ದರು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಇದೇ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟ್ ತನ್ನ ಸೇವೆಯನ್ನು ಇಪ್ಪತ್ತು ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿ ಹೊಸ ಬೆಳಕು ಟ್ರಸ್ಟ್ ಕತ್ತಲಿನಿಂದ ಬೆಳಕಿನಡೆಗಿನ ಪಯಣದಲ್ಲಿ ಸೇವೆಯನ್ನು ಜನರಿಗೆ ತಲುಪಿಸಲು ಬೆನ್ನೆಲುಬಾಗಿ ನಿಂತ ಸಾಧಕರಿಗೆ ಹೊಸಬೆಳಕು ಸದ್ಭಾವನಾ ಪ್ರಶಸ್ತಿ 2025ಅನ್ನು ಸಾಧಕರ ಮನೆಬಾಗಿಲಲ್ಲೇ ನೀಡಲು ನಿರ್ಧರಿಸಿದ್ದು ಮೋಹನ ಭರಣಿ ಮತ್ತು ಸುಭಾಷ್ ಭರಣಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಭರಣಿ ಮಾತನಾಡಿ, 20 ವರ್ಷ ಒಂದು ಟ್ರಸ್ಟನ್ನು ನಡೆಸಿಕೊಂಡು ಅಂಧತ್ವ ನಿವಾರಣೆ, ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನ, ಅಂಗಾಂಗದಾನ ಸೇವೆ ಮಾಡುತ್ತಾ ಬಂದಿರುವುದು ತುಂಬಾ ಸಂತಸದ ವಿಚಾರ ಎಂದರು.
ಹತ್ತು ವರ್ಷದ ಹಿಂದೆ ನಾನು ಒಂದು 50 ಕನ್ನಡಕ ಉಚಿತವಾಗಿ ಕೊಡಿಸಿದ್ದೆ. ಮುಂದೆಯೂ ನನ್ನ ಸಹಕಾರ ಇರುತ್ತದೆ. ಹೊಸಬೆಳಕು ನೀಡುವ ಕಾಯಕ ಮುಂದುವರೆಯಲಿ, ಒಳಿತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟಿನ ಸಂಸ್ಥಾಪಕ ಡಾ. ರಾಮಕೃಷ್ಣ, ಭರಣಿ ನ್ಯೂಸ್‍ನ ಶಿವರಾಜ್ ಭರಣಿ, ಮುನಿರಾಮು, ಮಂಜುಳಾ, ಸರಸ್ವತಿ ಇತರರು ಹಾಜರಿದ್ದರು.



