ಹೊಸಬೆಳಕು ಕುಟುಂಬದಿಂದ 9ನೇ ನೇತ್ರದಾನ

3 years ago

#eyedonation #hosabelaku #family

ಬೆಂಗಳೂರು: ಅಂಗಾಂಗ ದಾನ, ರಕ್ತದಾನ ನೇತ್ರದಾನ ಸಮಾಜ ಸೇವೆಗೆ ಹೆಸರಾದ ಹೊಸಬೆಳಕು ಟ್ರಸ್ಟಿನ ಜಿಗಣಿ ರಾಮಕೃಷ್ಣ ಅವರ ಚಿಕ್ಕಮ್ಮ ಮುನಿತಾಯಮ್ಮ 78 ವರ್ಷ ಅವರು ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯ(ಬೊಮ್ಮಸಂದ್ರ)ಕ್ಕೆ ದಾನ ಮಾಡಲಾಗಿದೆ.

ಈ ವೇಳೆ ಮೃತರ ಮಗಳು ಮುನಿರತ್ನಮ್ಮ ಮಾತನಾಡಿ, ನಮ್ಮ ಕುಟುಂಬದಿಂದ ಇದು 9ನೇ ನೇತ್ರದಾನ (18ಕಣ್ಣುಗಳು) ನನ್ನ ತಾಯಿಯ ನೇತ್ರದಾನ ಮಾಡುತ್ತಿರುವುದು ನಮಗೆ ಹೆಮ್ಮೆ ಮತ್ತು ಗೌರವ ತಂದಿದೆ. ನನ್ನ ತಂದೆ ಮುನಿಕರಗಪ್ಪನವರು ಕೋವಿಡ್ ಸಮಯದಲ್ಲಿ ತಿರಿಕೊಂಡಿದ್ದರಿಂದ ನೇತ್ರದಾನ ಮಾಡಲು ಆಗಲಿಲ್ಲ, ನೇತ್ರದಾನ ನಮ್ಮೆಲ್ಲರ ಕುಟುಂಬಗಳ ಸಂಪ್ರದಾಯವಾಗಿಸೋಣ ಎಂದರು.

ಮೃತರ ಕಣ್ಣುಗಳನ್ನು ಹೊಸಬೆಳಕು ಟ್ರಸ್ಟ್ ನ ಮುಖಾಂತರ ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿಸಿ ಕಡುಬಡತನದ ಕುಟುಂಬ ಸಾವಿನಲ್ಲೂ ಮಾನವೀಯತೆಯನ್ನು ಮೆರೆದು ಜಗಕೆ ಮಾದರಿಯಾಗಿದ್ದಾರೆ ಮಗ ಶ್ರೀರಾಮ ಮತ್ತು ಕುಟುಂಬ.

ಇಡೀ ದೇಶವೇ ಹೆಮ್ಮಾರಿ ಕೊರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಜಿಗಣಿ ರಾಮಕೃಷ್ಣ ಅವರು ಮನವಿ ಮಾಡಿದ್ದಾರೆ.

ನೇತ್ರದಾನದ ಸಮಯ ಬಂದಾಗ ಹತ್ತಿರದ ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) ಅಥವಾ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ 9945028899 ಸಂಪರ್ಕಿಸಬಹುದಾಗಿದೆ.

Leave a Reply