ಹೊಸಬೆಳಕು ಟ್ರಸ್ಟ್ ಕುಟುಂಬದಿಂದ 12ನೇ ನೇತ್ರದಾನ

5 months ago

ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರನಿಧಿಗೆ ದಾನ
 
ಬೆಂಗಳೂರು: ನಾಯಂಡಹಳ್ಳಿಯಲ್ಲಿ ಹೊಸಬೆಳಕು ಟ್ರಸ್ಟ್ ನ ಜಿಗಣಿ ರಾಮಕೃಷ್ಣ ಅವರ ಚಿಕ್ಕಮ್ಮ ಕರಗಮ್ಮ (82 ವರ್ಷ) ವಯೋಸಹಜವಾಗಿ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಮುಂಜಾನೆ 6 ಗಂಟೆಯ ಸಮಯದಲ್ಲಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.

ಮೃತರ ಮಗಳು ಮಗಳು ಸರಸ್ವತಿ ಕಂಬನಿ ಮಿಡಿಯುತ್ತಾ ನನ್ನ ತಾಯಿಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ. ಜಗದ ಬೆಳಕು ಭಗವಾನ್ ಬುದ್ಧರು ನಮಗೆ ದಾರಿ ದೀಪ ಮತ್ತು ನೇತ್ರದಾನಿ ಪುನಿತ್‌ರಾಜಕುಮಾರ್ ನಮಗೆ ಮಾದರಿ. ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ. ನಾವು ಕಳೆದುಕೊಂಡಿದ್ದು ನಮ್ಮ ಅಮ್ಮ ಒಬ್ಬರನ್ನು. ಆದರೆ ಅವರ ಕಣ್ಣುಗಳು ನಾಲ್ಕು ಜನರಲ್ಲಿ ಬದುಕಿರುತ್ತವೆ. ನೇತ್ರದಾನಕ್ಕೆ ಡಾ.ರಾಜಕುಮಾರ್ ಕುಟುಂಬ ನಮಗೆ ಸ್ಪೂರ್ತಿ ಎಂದರು.

ಮೃತರ ಮತ್ತೊಬ್ಬ ಮಗಳು ಶಿಕ್ಷಕಿ ಶಾಂತಾ ೩ ವರ್ಷದ ಹಿಂದೆ ನನ್ನ ತಂದೆ ನಾರಾಯಣಪ್ಪನವರು, ದೊಡ್ದಮ್ಮ ಸೊಣ್ಣಮ್ಮ, ಮಾವ ಕರಗಪ್ಪ, ಅಕ್ಕ ಕರಗಮ್ಮ ತೀರಿಕೊಂಡಾಗ ನೇತ್ರದಾನ ಮಾಡಿಸಿದ್ದು ನಮ್ಮ ಕುಟುಂಬದ ಹೆಮ್ಮೆ ಎಂದರು.

ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಮೃತರ ಮಗ ರವಿ ಶ್ರೀನಿವಾಸ್ ಕಳಕಳಿಯಿಂದ ಪ್ರಾರ್ಥಿಸಿದರು.

ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ಮೃತರ ಮಕ್ಕಳಾದ ಸರಸ್ವತಿ, ಶಾಂತ, ರವಿ, ಶ್ರೀನಿವಾಸ್, ಮೊಮ್ಮಕ್ಕಳು, ಸೊಸೆಯಂದಿರು, ಹೊಸಬೆಳಕು ಟ್ರಸ್ಟಿನ ಜಿಗಣಿ ರಾಮಕೃಷ್ಣ, ಮಂಜುಳಾ ರಾಮಕೃಷ್ಣ, ನಾರಾಯಣ ನೇತ್ರಾಲಯದ ವೈದ್ಯರು ಕುಟುಂಬಸ್ಥರು ಹಾಜರಿದ್ದರು.

ನೇತ್ರದಾನ– ಅಂಗಾಂಗ ದಾನ–ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ 24/7  ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದು.
 
ನೇತ್ರದಾನ– ಅಂಗಾಂಗ ದಾನ–ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.

2 ಕಣ್ಣುಗಳನ್ನು ಹಸ್ತಾಂತರಿಸುತ್ತಿರುವ ಸರಸ್ವತಿ, ರವಿ, ಶ್ರೀನಿವಾಸ್, ಹಿಮಾ, ವಿಕ್ಕಿ, ನಾರಾಯಣ ನೇತ್ರಾಲಯದ ವೈದ್ಯರು ಇದ್ದಾರೆ.

Leave a Reply