ಹೊಸಬೆಳಕು ಟ್ರಸ್ಟ್ ಕುಟುಂಬದಿಂದ ನೇತ್ರದಾನ

4 years ago

ಬೆಂಗಳೂರು: ರಕ್ತದಾನ, ನೇತ್ರದಾನ ಸಮಾಜ ಸೇವೆಗೆ ಹೆಸರಾದ ಹೊಸಬೆಳಕು ಟ್ರಸ್ಟಿನ ಜಿಗಣಿ ರಾಮಕೃಷ್ಣ ಅವರ ನಾದಿನಿ ಸರಸ್ವತಿ (46) ಅವರು ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯ(ಬೊಮ್ಮಸಂದ್ರ)ಕ್ಕೆ ದಾನ ಮಾಡಲಾಗಿದೆ.

ಮೃತರ ಕಣ್ಣುಗಳನ್ನು ಹೊಸಬೆಳಕು ಟ್ರಸ್ಟ್ನ ಮುಖಾಂತರ ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿಸಿ ಕಡುಬಡತನದ ಸರಸ್ವತಿಯವರ ಪತಿ ಶ್ರೀರಾಮ ಮತ್ತು ಕುಟುಂಬ ಸಾವಿನಲ್ಲೂ ಮಾನವೀಯತೆಯನ್ನು ಮೆರೆದು ಮಾದರಿಯಾಗಿದೆ.

ನೇತ್ರದಾನದ ನಂತರ ಪ್ರತಿಕ್ರಿಯಿಸಿದ ಶ್ರೀರಾಮ, ನಮ್ಮಕುಟುಂಬದಿAದ ಇದು 8ನೇ ನೇತ್ರದಾನ. ನನ್ನ ಪತ್ನಿಯ ನೇತ್ರದಾನ ಮಾಡುತ್ತಿರುವುದು ನಮಗೆ ಹೆಮ್ಮೆ ಮತ್ತು ಗೌರವ ತಂದಿದೆ. ನೇತ್ರದಾನವನ್ನು ನಮ್ಮೆಲ್ಲರ ಕುಟುಂಬಗಳ ಸಂಪ್ರದಾಯವಾಗಿಸೋಣ ಎಂದರು.

ಇಡೀ ದೇಶವೇ ಕೊರೊನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದೆ. ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣುಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಜಿಗಣಿ ರಾಮಕೃಷ್ಣ ಮನವಿ ಮಾಡಿದರು.

ನೇತ್ರದಾನದ ಸಮಯ ಬಂದಾಗ ಹತ್ತಿರದ ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) ಅಥವಾ ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್ 9945028899 ಸಂಪರ್ಕಿಸಬಹುದಾಗಿದೆ.

Leave a Reply