ರಾಮನಗರ: ಬಂಜಾರರ ಸಂಸ್ಕೃತಿ ವಿಶ್ವದ ಸಾಂಸ್ಕೃತಿಕ ಚಿನ್ಹೆ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಕಾಡೆಮಿ ಹಾಗೂ ಸರ್ಕಾರದ ಯೋಜನೆಗೆ ಅಭೂತ ಪೂರ್ವ ಪ್ರಶಂಸೆʼ
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕರ್ನಾಟಕ ಸರ್ಕಾರದ ವತಿಯಿಂದ 2025-26 ಸಾಲಿನ ಯೋಜನೆಯಲ್ಲಿ ಬಂಜಾರ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕುರಿತು ಜಾಗೃತಿಗಾಗಿ ʻʻ ಬಂಜಾರ ಅಕಾಡೆಮಿಯ ನಡೆ ತಾಂಡದ ಕಡೆ-2025-26 ಅಭಿಯಾನʼʼದ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಪ್ರಯುಕ್ತ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಚೌಕಸಂದ್ರ ತಾಂಡದಿಂದ ಬಂಜಾರ ಅಕಾಡೆಮಿ ಅಧ್ಯಕ್ಷ ಹಾಗೂ ರಂಗ ತಜ್ಞ ಡಾ.ಎ.ಆರ್.ಗೋವಿಂದ ಸ್ವಾಮಿ ಅಭಿಯಾನ ಉದ್ಘಾಟಿಸಿ ಚಾಲನೆ ನೀಡಿದರು.
ಸಮಾರಂಭದಲ್ಲಿ ನಾಟಕ ನಿರ್ದೇಶಕ ಹಾಗೂ ಟಿ.ವಿ.ಕಲಾವಿದ ನರೇಶ್ ನಾಯ್ಕ್, ಪತ್ರ ಕರ್ತ ಜಯರಾಮ್ ನಾಯ್ಕ್, ಕಲಾವಿದ ಬಾಲನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಬಂಜಾರ ಅಕಾಡೆಮಿಯ ನಡೆ ತಾಂಡ ಕಡೆ: 2025-26 ಅಭಿಯಾನಕ್ಕೆ ಚಾಲನೆ: ಸಂತ ಸೇವಾಲಾಲರ ಛಾಯಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಿ ಡಾ.ಎ.ಆರ್.ಗೋವಿಂದ ಸ್ವಾಮಿ ಅವರು ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಸ್ವಸ್ಥ ಸಮಾಜ ಹಾಗೂ ಪ್ರಬುದ್ಧ ಸಮಾಜ ಕಟ್ಟುತ್ತದೆ. ಹೀಗಾಗಿ ಬಂಜಾರ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ʻʻಅಕಾಡೆಮಿ ನಡೆ ತಾಂಡ ಕಡೆ 2025-26 ಅಭಿಯಾನʼʼದ ಮೂಲಕ ಬಂಜಾರ ತಾಂಡಾದ ಯುವ ಸಮುದಾಯ ಹಾಗೂ ಇತರರನ್ನು ಬಂಜಾರ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದ ಕಡೆ ಮುಖ ಮಾಡುವಂತೆ ಮತ್ತು ಹೆಚ್ಚಿನ ಜಾಗೃತಿ ಮೂಡಿಸುವುದಾಗಿದೆ ಎಂದರು.
ಈ ಮೂಲಕ ಓರಿಯಂಟೇಷನ್ ಮಾಡಿ ಜಾಗತಿಕವಾದ ಆಧುನಿಕ ಸವಾಲುಗಳನ್ನು ಎದುರಿಸಲು, ಸಾಂಸ್ಕೃತಿಕ ನಾಯಕತ್ವ ವಹಿಸಲು ಬಂಜಾರರನ್ನು ಸಜ್ಜುಗೊಳಿಸುವುದು, ಜಾಗೃತಿ ಮೂಡಿಸುವ ಉದ್ದೇಶ ಇದೆ ಎಂದರು.
ಬಂಜಾರ ಕಲೆ ಮೌಖಿಕ ಸಾಹಿತ್ಯ, ಬಂಜಾರ ವಸ್ತ್ರ ಮತ್ತು ಭಾಷೆ ಬಗ್ಗೆ ಅಭಿಮಾನ ಹೊಂದುವಂತೆ ಮಾಡುವುದಾಗಿದೆ. ಪ್ರತಿ ತಾಂಡದಿಂದ ಕನಿಷ್ಟ ಇಬ್ಬರು ಜಾಗೃತರಾದರೂ ಅಕಾಡೆಮಿ ಹಾಗೂ ಸರ್ಕಾರದ ಉದ್ದೇಶ ಸಫಲ. ಪಠ್ಯೇತರ ಚಟುವಟಿಕೆಗಳಾದ ಸಂಸ್ಕೃತಿ, ಸಾಹಿತ್ಯಕ್ಕೆ ವಿದ್ಯಾರ್ಥಿಗಳು ಬಂದರೆ, ಓದಿನಲ್ಲೂ ಮುಂದೆ ಇರುತ್ತಾರೆ ವಿದ್ಯಾರ್ಥಿಗಳು ಹೆಚ್ಚಿನ ಆತ್ಮ ವಿಶ್ವಾಸ, ವ್ಯಕ್ತಿತ್ವ ವಿಕಾಸ ಹೊಂದಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಜಯರಾಮನಾಯ್ಕ ಮಾತನಾಡಿ, ಬಂಜಾರರು ತಮ್ಮ ಭಾಷೆ, ವಸ್ತ್ರ ಸಂಹಿತೆ ಮರೆಯುತ್ತಿರುವ ಮತ್ತು ಈ ಸಂದರ್ಭದಲ್ಲಿ ಬಂಜಾರರ ಉತ್ತಮ ಕಸೂತಿ ಧರಿಸುವುದು ಅವಮಾನ ಎಂದು ಭಾವಿಸುತ್ತಿರುವ ಸಂದರ್ಭದಲ್ಲಿ ಬಂಜಾರ ಅಕಾಡೆಮಿ ಈ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ರಂಗಕರ್ಮಿ ನರೇಶ್ ಮಯ್ಯ ಮಾತನಾಡಿ, ಬಂಜಾರ ಅಕಾಡೆಮಿ ಬಂಜಾರ ಭಾಷೆ, ಸಂಸ್ಕೃತಿ ಸಾಹಿತ್ಯವನ್ನು ನೂತನವಾಗಿ ಕಟ್ಟುತ್ತಿದೆ. 60-70 ಕ್ಕೂ ಹೆಚ್ಚು ಜನರಿಗೆ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿಗಳು, ಸಂತ ಸೇವಾಲಾಲ್ ಹೆಸರಿನಲ್ಲಿ ಒಂದು ಲಕ್ಷ ಮೊತ್ತದ ಪ್ರಶಸ್ತಿ ಅಧ್ಯಕ್ಷರು ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ. ಅಕಾಡೆಮಿ ಇತರೆ ಅಕಾಡೆಮಿಗಿಂತ ಕ್ರಿಯಾತ್ಮಕವಾಗಿ ಕೆಲಸಮಾಡಿ ಗುರುತಿಸಿಕೊಳ್ಲುತ್ತಿರುವುದು ತಳಸಮುದಾಯಕ್ಕೆ ಸಿಕ್ಕ ಸ್ವಾತಂತ್ರ್ಯ ಎನ್ನಬಹುದು ಎಂದರು.
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು ಹಾಗೂ ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ ವರಲಕ್ಷ್ಮಿ.ಎನ್, ವಕೀಲರಾದ ಶಂಕರ್ ನಾಯ್ಕ್, ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಣ್ಣ, ಸ್ಥಳೀಯ ಮುಖಂಡರಾದ ಲಲಿತಾಬಾಯಿ ಮಹದೇವ್ ನಾಯ್ಕ್, ಶಾಂತ ಬಾಯಿ ರವಿನಾಯ್ಕ್, ಪೂಜಾರಿ ಗೋಪಾಲನಾಯ್ಕ್ ಸದಸ್ಯ ಗಿರೀಶ್ ನಾಯ್ಕ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ಮುಂತಾದವರು ಉಪಸ್ಥಿತರಿದ್ದರು.




