ಅನ್ಯ ಜಾತಿಗಳು ಅಕ್ರಮವಾಗಿ ಒಳ ನುಸುಳುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಿ: ದಾಸನೂರು ಕೂಸಣ್ಣ
ಬಿಜೆಇಸಿಟಿ/01/ ಪ.ಜಾ / ಸಮೀಕ್ಷೆ/2025 ದಿ:20-04-2025
ದಾಸನೂರು ಕೂಸಣ್ಣ,
ಟ್ರಸ್ಟನ ಕಾರ್ಯದರ್ಶಿಗಳು ಮತ್ತು ಸಾಹಿತಿಗಳು
ಗೆ
ನ್ಯಾಯಮೂರ್ತಿ ಶ್ರೀ ಹೆಚ್. ಎನ್.ನಾಗಮೋಹನ ದಾಸ್
ಅಧ್ಯಕ್ಷರು, ಏಕ ಸದಸ್ಯ ವಿಚಾರಣಾ ಆಯೋಗ
ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು-560001
ಮತ್ತು
ಶ್ರೀ ಕೆ.ರಾಕೇಶ್ ಕುಮಾರ್, ಭಾ.ಆಸೇ.
ಆಯುಕ್ತರು, ಹಾಗೂ ಸದಸ್ಯ ಕಾರ್ಯದರ್ಶಿಗಳು
ಏಕ ಸದಸ್ಯ ವಿಚಾರಣಾ ಆಯೋಗದ ರಾಜ್ಯ ಮಟ್ಟದ ಸಮನ್ವಯ ಸಮಿತಿ
ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು-560001
ಮಾನ್ಯರೆ,
ವಿಷಯ: ಒಳ ಮೀಸಲಾತಿ ನಿರ್ಧರಿಸುವ ದತ್ತಾಂಶಗಳಿಗೆ ಸಮೀಕ್ಷೆ ಆಯೋಜನೆಯಾಗಿರುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಉಪ ಜಾತಿಗಳ ಸಮನಾಂತರ ಅಥವಾ ಅನ್ವರ್ಥ ನಾಮಾವಳಿಗಳಡಿ ಅನ್ಯ ಜಾತಿಗಳು ಅಕ್ರಮವಾಗಿ ಒಳ ನುಸುಳುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು.
ಉಲ್ಲೇಖ: ಸರ್ಕಾರದ ಆದೇಶ ಸಂಖ್ಯೆ:ಎಸ್.ಡಬ್ಲೂ.ಡಿ/8/ ಎಸ್ ಎಲ್ ಪಿ/2024 ದಿ:09-04-2025
***
ಒಳ ಮೀಸಲಾತಿ ಜಾರಿ ಸಂಬಂಧವಾಗಿ ದತ್ತಾಂಶಗಳ ಕ್ರೋಢೀಕರಣ ಸಂಬಂಧವಾಗಿ ಮನೆ ಮನೆ ಸಮೀಕ್ಷೆ ನಡೆಸಲು ಆಯೋಗ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ. ಈ ಸಂಬಂಧವಾಗಿ ಸಕಲ ಪೂರ್ವಸಿದ್ಧತೆ ನಡೆಸಿರುವುದು ಸಾರ್ವಜನಿಕವಾಗಿ ಸಾದರಗೊಂಡಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯಮಾಡುವಾಗ ಸುಳ್ಳು ಪರಿಶಿಷ್ಟ ಜಾತಿಗಳು ನುಸುಳದಂತೆ ಕ್ರಮಹಿಸಬೇಕಾದ ಅನಿವಾರ್ಯತೆಗಳಿವೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
1. ವೀರ ಶೈವ ಜಂಗಮರು, ಲಿಂಗಾಯತ ಜಂಗಮರು , ಜಂಗಮರು, ಆರಾಧ್ಯ ಹಾಗೂ ಮಠಪತಿಗಳು ಮೂಲತಃ ಹಿಂದುಳಿದ ವರ್ಗಗಳ ಮೀಸಲಾತಿ ಅಡಿ ಬರುತ್ತಿವೆ. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಬೇಡ(ಬುಡ್ಗ) ಜಂಗಮ/ಮಾಲ ಜಂಗಮ ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978 ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದುದರಿಂದ ಮನ ಮನೆ ಸಮೀಕ್ಷೆ ಸಂದರ್ಭದಲ್ಲಿ ಈ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
2. ಮೇಲಿನಂತೆ ಪ್ರವರ್ಗ -1ರಲ್ಲಿರುವ ಕ್ರ.ಸಂ-05. ಬೈರಾಗಿ, ಅದರ ಉಪ ಸಮುದಾಯಗಳು ಬಾಳಸಂತೋಷಿ, ಬಹುರೂಪಿಗಳೂ ಸಹ ಅತಿ ಹಿಂದುಳಿದ ವರ್ಗಳಿಗೆ ಸೇರಿದವರು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಬೇಡ(ಬುಡ್ಗ) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978 ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದುದರಿಂದ ಮನೆಮನೆ ಸಮೀಕ್ಷೆ ಸಂದರ್ಭದಲ್ಲಿ ಈ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
3. ಮೇಲಿನಂತೆ ಪ್ರವರ್ಗ -11 (ಎ) ರಲ್ಲಿರುವ ಕ್ರ.ಸಂ-93. ಕೋಟೆಗಾರ ಮತ್ತು ಅದರ ಉಪ ಸಮುದಾಯಗಳು ಅತಿ ಹಿಂದುಳಿದ ವರ್ಗಳಿಗೆ ಸೇರಿದವರು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಕೋಟೆಗಾರ (ಮೇತ್ರಿ) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ಕರ್ನಾಟಕದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾಬಂದಿದ್ದಾರೆ. ಆದುದರಿಂದ ಮನ ಮನೆ ಸಮೀಕ್ಷೆ ಸಂದರ್ಭದಲ್ಲಿ ಈ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
4. ಮೇಲಿನಂತೆ ಪ್ರವರ್ಗ -1ರಲ್ಲಿರುವ ಕ್ರ.ಸಂ-12 ದಾಸರಿ ಮತ್ತು ಅದರ ಉಪ ಸಮುದಾಯಗಳು ಸಹ ಅತಿ ಹಿಂದುಳಿದ ವರ್ಗಳಿಗೆ ಸೇರಿದವರು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಚನ್ನದಾಸರ್/ಹೊಲೆಯ ದಾಸರ್ ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978 ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾಬಂದಿದ್ದಾರೆ. ಆದುದರಿಂದ ಮನ ಮನೆ ಸಮೀಕ್ಷೆ ಸಂದರ್ಭದಲ್ಲಿ ದಾಸರಿ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
5. ಮೇಲಿನಂತೆ ಪ್ರವರ್ಗ -1ರಲ್ಲಿರುವ ಕ್ರ.ಸಂ-05 (ಹೆಚ್) ಗೋಸಾಯಿ ಮತ್ತು (ಐ) ಗುಸಾಯಿ ಉಪ ಸಮುದಾಯಗಳು ಸಹ ಅತಿ ಹಿಂದುಳಿದ ವರ್ಗಳಿಗೆ ಸೇರಿದವರು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಗೋಸಂಗಿ (ಮಾಲ ಉಪ ಜಾತಿ) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978 ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾಬಂದಿದ್ದಾರೆ. ಆದುದರಿಂದ ಮನ ಮನೆ ಸಮೀಕ್ಷೆ ಸಂದರ್ಭದಲ್ಲಿ ಗೋಸಾಯಿ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
6. ಮೇಲಿನಂತೆ ಪ್ರವರ್ಗ -1ರಲ್ಲಿರುವ ಕ್ರ.ಸಂ-06 (ಎಇ) ಮೋಗೆರ್ ಉಪ ಸಮುದಾಯಗಳು ಬೆಸ್ತರ ಅತಿ ಹಿಂದುಳಿದ ವರ್ಗಗಳಿಗೆ ಸೇರಿದವರು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಮುಗೇರ ಅಥವಾ ಮುಗ್ಗೇರ ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978 ರಿಂದ ಕರ್ನಾಟಕದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದುದರಿಂದ ಮನೆಮನೆ ಸಮೀಕ್ಷೆ ಸಂದರ್ಭದಲ್ಲಿ ಮೀನುಗಾರ ಮುಗೇರ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು
7. ವೀರಶೈವರು ಮತ್ತು ಲಿಂಗವಂತರು ಮೂಲತಃ ಹಿಂದುಳಿದ ವರ್ಗಗಳ ಮೀಸಲಾತಿ ಅಡಿ ಬರುತ್ತಿವೆ. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಲಿಂಗದೇರ್ (ಲಿಂಗಡೋರ್-ಡೋರ್ ಉಪ ಸಮುದಾಯ) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪ್ರತಗಳನ್ನು ಲಿಂಗಧಾರಿ ಎಂದು ದುರುಪಯೋಗ ಮಾಡಿಕೊಳ್ಳುತ್ತಾಬಂದಿದ್ದಾರೆ. ಆದುದರಿಂದ ಮನ ಮನೆ ಸಮೀಕ್ಷೆ ಸಂದರ್ಭದಲ್ಲಿ ಈ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
ಈ ರೀತಿಯಲ್ಲಿ ಹಲವಾರು ಉಪ ಜಾತಿಗಳು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಉಪ ಸಮುದಾಯಗಳ ಸಮನಾಂತರ ಪದಗಳಡಿ ಅನೇಕ ಹಿಂದುಳಿದ ಸಮುದಾಯಗಳು ಮೀಸಲಾತಿ ದುರುಪಯೋಗ ಮಾಡಿಕೊಳ್ಳುತ್ತಾ ಬಂದಿವೆ.
ಒಳ ಮೀಸಲಾತಿ ನಿರ್ಧರಿಸುವ ದತ್ತಾಂಶಗಳಿಗೆ ಸಮೀಕ್ಷೆ ಆಯೋಜನೆಯಾಗಿರುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಉಪ ಜಾತಿಗಳ ಸಮನಾಂತರ ಅಥವಾ ಅನ್ವರ್ಥ ನಾಮಾವಳಿಗಳಡಿ ಅನ್ಯ ಹಿಂದುಳಿದ ಜಾತಿಗಳು ಅಕ್ರಮವಾಗಿ ಒಳ ನುಸುಳುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯಾಂಗದ ನಿಲುವುಗಳನ್ನು ಮಾನ್ಯ ಮಾಡಬೇಕಿದೆ. ಇಲ್ಲದೆ ಹೋದರೆ ವ್ಯತಿರಿಕ್ತ ಮಾಹಿತಿಗಳ ಸೃಜನೆಗೆ ಅನುವು ಮಾಡಿದಾಗ ಒಳ ಮೀಸಲಾತಿ ದತ್ತಾಂಶಗಳ ಸ್ಥಿರಿಕರೀಸುವಾಗ ತಾಂತ್ರಿಕ ತೊಂದರೆಗಳು ಎದುರಾಗುತ್ತವೆ.
ಆದುದರಿಂದ ಯಾವುದೇ ಸಮುದಾಯಗಳು ಕಾನೂನುಬದ್ಧವಾಗಿ 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಸ್ಥಾನಮಾನ ಪಡೆಯದವರ ಕುಟುಂಬಗಳ ಸಮೀಕ್ಷೆ ಮಾಡಬಾರದೆಂದು ಈ ಮೂಲಕ ತಮ್ಮನ್ನು ಕೋರುವೆ.
ವಂದನೆಗಳೊಂದಿಗೆ ತಮ್ಮ ನಂಬುಗೆಯ
– ದಾಸನೂರು ಕೂಸಣ್ಣ, ಟ್ರಸ್ಟ್ ನ ಕಾರ್ಯದರ್ಶಿ




