ದೇಶದ ಒಳಗಿನ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ Anti-paper leak bill ಅನ್ನು ಮಂಡಿಸಿ ಅದನ್ನು ಅಂಗೀಕರಿಸಿದೆ. ಆದರೆ ಯಾವುದೇ ಮಸೂದೆಯನ್ನು ಜಾರಿಗೊಳಿಸುವಾಗ ಅದನ್ನು ಸದನದಲ್ಲಿ ಮಂಡಿಸಿ, ಕಾಯ್ದೆಯ ಕುರಿತಾಗಿ ವಿಪಕ್ಷದ ನಾಯಕರ ಅಭಿಪ್ರಾಯವನ್ನು ಆಲಿಸಿ, ನಂತರದಲ್ಲಿ ಸದನದ ಸದಸ್ಯರ ಅನುಮೋದನೆಯೊಂದಿಗೆ ಮಸೂದೆಯು ಅಂಗೀಕಾರಗೊಳ್ಳುತ್ತದೆ.
- ಕಾವೇರಿ ವಿಚಾರವಾಗಿ ವಿಪಕ್ಷಗಳ ನಾಯಕ ವಿಶ್ವಾಸದ ಬಳಿಕ ಮುಂದಿನ ತೀರ್ಮಾನ: ಡಿ.ಕೆ.ಶಿವಕುಮಾರ್
- ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಯ್ದೆ ಕಾನೂನುಗಳು ಚರ್ಚಿತವಾಗಬೇಕು: ಡಾ.ಎಚ್.ಸಿ.ಮಹದೇವಪ್ಪ
- ನೀಟ್ NEET ಹೋರಾಟದ ನಡುವೆ ವೈರಲ್ ಆದ ರಾಹುಲ್ ಗಾಂಧಿ, ದೀಪ್ಕೆ, ಗ್ರೆಟಾ, ಸೊರೊಸ್ ಫೋಟೋ!
- ಸಾವಯವ ರೈತರನ್ನು ಬೆಂಬಲಿಸಲು ಸಾವಯವ ಸಂತೆಯಲ್ಲಿ ಪಾಲ್ಗೊಳ್ಳಿ: ದರ್ಶನ್ ಪುಟ್ಟಣ್ಣಯ್ಯ
- ಕನಿಷ್ಠ ವೇತನ ಕೂಡಲೇ ಜಾರಿಗೊಳಿಸದಿದ್ದರೆ ತೀವ್ರ ಪ್ರತಿರೋಧ: ಜೆ ಬಾಲಕೃಷ್ಣ ಶೆಟ್ಟಿ
ಭಾರತ ದೇಶದೊಳಗೆ ಆಡಳಿತ ನಡೆಸಿದ ಮತ್ತು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಆಡಳಿತ ನಡೆಸುವ ಎಲ್ಲಾ ಸರ್ಕಾರಗಳೂ ಕೂಡಾ ಮಸೂದೆಯನ್ನು ಪಾಲಿಸುವಾಗ ಸದನದಲ್ಲಿ ಚರ್ಚೆ ನಡೆಸುತ್ತವೆ. ಇದು ಸಂಸದೀಯ ಪ್ರಜಾಪ್ರಭುತ್ವದ ಕರ್ತವ್ಯ ಕೂಡಾ. ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂಬ ಸಂಗತಿಯನ್ನೇ ಮರೆತಿರುವ ಕೇಂದ್ರ ಸರ್ಕಾರವು ತನ್ನ ಎಂದಿನ ಅರಾಜಕತೆ ಮತ್ತು ಸರ್ವಾಧಿಕಾರಿ ಮನಸ್ಥಿತಿಯಿಂದ ಯಾವುದೇ ಚರ್ಚೆ ಮಾಡದೇ ಮಸೂದೆ ಜಾರಿಗೊಳಿಸಿರುವುದು ಅನುಮಾನಾಸ್ಪದವಾಗಿದೆ.
ಎಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯವಾಗಿ ರೂಪಿಸಬೇಕಾದ ಕಾಯ್ದೆಯನ್ನು ಚರ್ಚಿಸದೇ ಜಾರಿ ಮಾಡಿರುವ ಉದ್ದೇಶವಾದರೂ ಏನು? ಪ್ರಶ್ನಿಸುವ ಯುವಕರನ್ನೇ ದೇಶದ್ರೋಹಿಗಳು ಎಂದು ಕರೆದ ಬಿಜೆಪಿಗರು ಮಸೂದೆಯನ್ನು ಚರ್ಚಿಸದೇ ಯಾವ ಸಂಗತಿಯನ್ನು ಮರೆ ಮಾಚಲು ಹೊರಟಿದೆ ಎಂಬುದರ ಬಗ್ಗೆ ಅನುಮಾನವಾಗಿದೆ.
ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಯ್ದೆ ಕಾನೂನುಗಳು ಚರ್ಚಿತವಾಗಬೇಕು ಮತ್ತು ಈ ಸರಳ ಸಂಗತಿಯು ಕೇಂದ್ರ ಸರ್ಕಾರಕ್ಕೆ ಅರ್ಥವಾಗಬೇಕು.
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ




