ಒಳ ಮೀಸಲಾತಿ ಜಾರಿಗೆ ತರಲು ಮಾದಿಗ ಸಮುದಾಯ ಸುರಿಸಿದ ಬೆವರು ರಾಜ್ಯಾದ್ಯಂತ ಹರಿದಿದೆ. ಆದರೆ ರಾಜ್ಯಮಟ್ಟದ ಸಮನ್ವಯ ಸಮಿತಿ ಬಗ್ಗೆ ಮಾದಿಗರಿಲ್ಲ ಎಂಬ ಪುಕಾರು ಎದ್ದಿದೆ. ರಾಜ್ಯ ಸರ್ಕಾರ ಯಾವುದೇ ಪರಿಶಿಷ್ಟ ಜಾತಿ ಜನರನ್ನು ನೇಮಿಸಬಾರದೆಂದು ನಿರ್ಧಾರ ಕೈಗೊಂಡಿದೆ. ಅಧಿಕಾರೇತರ ಸದಸ್ಯರ ಪೈಕಿ ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅನುಭವ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ. ಅವರೂ ಸಮ್ಮತಿ ಇರಲಿಲ್ಲ. ಅನೇಕ ದಲಿತ ಸಂಘಟನೆಗಳ ಒತ್ತಾಯ ಮೇರೆಗೆ ಹೋಗಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಇನ್ನು ಡಿ.ಎನ್.ನಾಯಕ್ ಮೂಲತಃ ಹಿಂದುಳಿದ ವರ್ಗಗಳ ಸಮುದಾಯದ ಅಧಿಕಾರಿ. ಅವರಿಗೆ ಅಪಾರ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಬಿ.ಎಸ್. ಹಿರೇಮಠ ಅವರು ನಿವೃತ್ತ ಸಾಂಖ್ಯಿಕ ನಿರ್ದೇಶಕರು. ಅವರಿಗೆ ಅಂಕಿಅಂಶಗಳ ಬಗ್ಗೆ ಸುದೀರ್ಘ ಮಾಹಿತಿಗಳನ್ನು ಹೊಂದಿರುವ ಕಾರಣ ಸೇರಿದ್ದಾರೆ. ಈ.ವೆಂಕಟಯ್ಯ ಅವರು ವಿಶೇಷ ಘಟಕ ಉಸ್ತುವಾರಿ. ಅವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಲಾಗಿದೆ. ಪಿ.ಮಣಿವಣ್ಣನ್ ಸಮಾಜ ಕಲ್ಯಾಣ ಇಲಾಖೆ ಪದನಿಮಿತ್ತ ಕಾರ್ಯದರ್ಶಿಗಳು. ಇನ್ನು ಆಯುಕ್ತರಾದ ರಾಕೇಶ್ ಕುಮಾರ್ ಸಮನ್ವಯ ಸಮಿತಿ ಸದಸ್ಯ ಕಾರ್ಯದರ್ಶಿ ಅಂದರೆ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರಿ.
ಇವರಾರೂ ನೇರವಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಉಮಾ ಮಹಾದೇವನ್ ಇದ್ದಾರೆ. ಅವರು ಯಾವುದೇ ಸಮುದಾಯದ ಪರ ನಿಲುವು ತಾಳಿದ ಉದಾಹರಣೆ ಇಲ್ಲ. ನಿಸ್ವಾರ್ಥವಾಗಿ ನಡೆದು ಬಂದ ಅಧಿಕಾರಿಗಳು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮನ್ವಯ ಸಮಿತಿ ಇದೆ ಅದಕ್ಕೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 10 ಇಲಾಖೆಗಳ ಪದನಿಮಿತ್ತ ಅಧಿಕಾರಿಗಳು ನಿಯೋಜನೆ ಆಗಿದೆ. ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಆರು ಅಧಿಕಾರಿಗಳು ಇದ್ದಾರೆ. ಸಮೀಕ್ಷೆ ಮೇಲ್ವಿಚಾರಣೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೇಲ್ವಿಚಾರಣೆ ಹೊಣೆಗಾರಿಕೆಗಳನ್ನು ನೀಡಲು ನಿರ್ಣಯ ಕೈಗೊಳ್ಳಲಾಗಿದೆ.
ಅನೇಕರು ಹೇಳಿದಂತೆ ಡಿ.ಚಂದ್ರಶೇಖರಯ್ಯ ಅವರನ್ನು ಸರ್ಕಾರ ಎಲ್ಲಿಯೂ ನೇರವಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಒಂದುವೇಳೆ ಹೇಳಿದ್ದರೂ ಅದು ಸರ್ಕಾರದ ಕರ್ತವ್ಯವಾಗಿದೆ ಎಂದು ಟೀಕಾಕಾರರು ಮನಗಾಣಬೇಕು.
ನನಗೆ ಅನೇಕರು ಹೇಳಿದರು, ಬಲಗೈ ಸಮಾಜದ ಅಧಿಕಾರಿಗಳು ಪ್ರತ್ಯೇಕ ಖಾಸಗಿ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು. ಹೌದು ಅದು ಅವರ ಸಮುದಾಯದ ವೈಯಕ್ತಿಕ ತೀರ್ಮಾನವೇ ಹೊರತು ಸರ್ಕಾರದ ಕುಮ್ಮಕ್ಕು ನೀಡಿದೆ ಎಂದರೆ ಬಾಲಿಶ ಹೇಳಿಕೆ ಆಗುತ್ತದೆ.
ಮಾದಿಗರ ಮಂತ್ರಿಗಳು ಹೇಗೆ ತಮ್ಮ ಸಮುದಾಯದ ಹಿತವನ್ನು ಕಾಪಾಡಲು ಮುಂದಾಗುತ್ತಾರೋ ಹಾಗೆಯೇ ಚಲವಾದಿ ಸಮುದಾಯ ಮಂತ್ರಿಗಳಾದ ಮಂತ್ರಿಗಳಾದ ಮಹಾದೇವಪ್ಪ ಮತ್ತು ಡಾ.ಪರಮೇಶ್ವರ್ ಅವರ ಸಮುದಾಯದ ಹಿತವನ್ನು ಕಾಪಾಡಲು ಮುಂದಾಗುತ್ತಾರೆ ಅನ್ನುವುದು ಸಂವಿಧಾನ ಅವರಿಗೆ ನೀಡಿರುವ ಅವಕಾಶವಲ್ಲವೇ? ಅವರವರ ಸಮುದಾಯ ಹಿತದೃಷ್ಟಿಯಿಂದ ಕೆಲಸಮಾಡುವ ಮನೋಧರ್ಮವನ್ನು ಅಷ್ಟೇ ಮುಕ್ತವಾಗಿ ಒಪ್ಪುವ ವಿಚಾರ.
ಸಮೀಕ್ಷೆಯಲ್ಲಿ ಜಿಪಿಎಸ್ ಅಳವಡಿಸಿದರೆ ಸಮೀಕ್ಷೆದಾರ ನಿಲುವನ್ನು ಅದು ದಾಖಲಿಸುತ್ತದೆ.
ವೈಯಕ್ತಿಕವಾಗಿ ಮಾದಿಗ ಮತ್ತು ಅದರ ಉಪಜಾತಿಯ ಸಮುದಾಯದ ಜನರಲ್ಲಿ ಒಂದು ವಿನಮ್ರ ಮನವಿ ಏನೆಂದರೆ ಒಳ ಮೀಸಲಾತಿ ಬೇಕು. ಬೇಕೆಂಬುದನ್ನು ಪ್ರತಿಹಂತದಲ್ಲೂ ಸರ್ಕಾರವನ್ನು ಅನುಮಾನದಿಂದ ನೋಡಲು ಮುಂದಾದರೆ ಈ ಸಮುದಾಯ ಎಷ್ಟೇ ಪ್ರಯತ್ನಿಸಿದರೂ ಇತರರ ಸಹಾನುಭೂತಿಗಳು ಕ್ಷೀಣಿಸಿದಾಗ ಸಾಮಾಜಿಕವಾಗಿ ತಬ್ಬಲಿ ಸಮುದಾಯಗಳಂತೆ ಬಾಳಬೇಕಾಗುತ್ತದೆ. ಒಳ ಮೀಸಲಾತಿ ವಿಚಾರದಲ್ಲಿ ಯಾರು ಎಂತಹ ಮಾತಿನ ಬುತ್ತಿಯನ್ನು ಈ ಸಮಾಜಕ್ಕೆ ನೀಡಿದರೂ ಅದು ಒಂದಿಷ್ಟು ಕಾಲ ಇರುತ್ತದೆ. ಆದುದರಿಂದ, ಅವಕಾಶವಾದಿ ಜನರ ಉಪಟಳ ಮಾದಿಗ ಸಮುದಾಯಕ್ಕೆ ಹೆಚ್ಚು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆದುದರಿಂದ ಈ ಪೀಳಿಗೆ ಸಮುದಾಯ ಒಳ ಮೀಸಲಾತಿ ಪಡೆಯಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಸಹಕಾರ ನೀಡಬೇಕು. ಅದನ್ನು ಬಿಟ್ಟು ಸಮೀಕ್ಷೆ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಂದಿಸುವ ಕೆಲಸ ಆರಂಭಿಸಿದರೆ ಅದು ಮಾದಿಗ ಸಮುದಾಯಕ್ಕೆ ಶಾಪವಾಗುವುದು.
ನಾ ಕಂಡಂತೆ ಸರ್ಕಾರ ಅತ್ಯಂತ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸೂಚನೆ ನೀಡಿದೆ. ಎಲ್ಲಾ ಅಧಿಕಾರಿಗಳನ್ನು ಜಾತಿ ಉಪ ಜಾತಿ ಎಂಬ ಮಾನದಂಡಗಳನ್ನು ಮುಂದುಮಾಡಿ ನೋಡಿದಾಗ ಅಲ್ಲಿ ಅವರ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ಅಪಮಾನಿಸಿದಂತಾಗುತ್ತದೆ.
ಸಾಕಿನ್ನು ಸಮೀಕ್ಷೆಯಲ್ಲಿ ನಿಮ್ಮ ಊರುಗಳಲ್ಲಿ ನಗರ ಪ್ರದೇಶಗಳಲ್ಲಿ ಸಕ್ರಿಯ ಪಾತ್ರವನ್ನು ನೀಡಿ.
ಒಂದುವೇಳೆ ಸಮೀಕ್ಷೆಯಲ್ಲಿ ಅನಾಹುತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಲ್ಲಿ ತಮ್ಮ ವ್ಯಾಪ್ತಿಯ ಸಮನ್ವಯ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಸರಿಪಡಿಸಿ. ಕ್ಷಣಕ್ಷಣಕ್ಕೂ ಅನ್ಯರ ಮಾತಿಗೆ ಸಿಡಿದರೆ ಸಮುದಾಯದ ಆತ್ಮ ಸತ್ತಂತೆಯೇ ಸರಿ.
ಇಂತು
ಪ್ರೀತಿಯಿಂದ
– ದಾಸನೂರು ಕೂಸಣ್ಣ, ಬೆಂಗಳೂರು




