ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ

2 months ago

ತುಮಕೂರಿನಲ್ಲಿ ಮೂರು ದಿನಗಳ ಮಣ್ಣು ನೀರು ಸತ್ಯಾಗ್ರಹ
ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ!

ತುಮಕೂರು: ತಾಲೂಕಿನ ದೊಡ್ಡಹೊಸೂರಿನ ‘ಗಾಂಧಿ ಸಹಜ ಬೇಸಾಯ ಆಶ್ರಮ’ದಲ್ಲಿ ದಿನಾಂಕ ಆಗಸ್ಟ್ ೬, ೭ ಮತ್ತು ೮, ೨೦೨೬ ರಂದು ಮಹತ್ವದ “ಮಣ್ಣು ನೀರು ಸತ್ಯಾಗ್ರಹ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿಶೇಷ ಸತ್ಯಾಗ್ರಹದಲ್ಲಿ ಕೃಷಿ, ಪರಿಸರ, ರಾಜಕೀಯ ಮತ್ತು ಸಂಸ್ಕೃತಿಯ ಮೇಲೆ ಕೃತಕ ಬುದ್ಧಿಮತ್ತೆ (AI) ಬೀರುವ ಪ್ರಭಾವದ ಕುರಿತು ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ತಜ್ಞರು ಚರ್ಚಿಸಲಿದ್ದಾರೆ.

ಕಾರ್ಯಕ್ರಮದ ಪ್ರಮುಖ ಚರ್ಚಾವಿಷಯಗಳು ಮತ್ತು ಗಣ್ಯರು:
ಗೋಷ್ಠಿ 1: ಕೃತಕ ಬುದ್ಧಿಮತ್ತೆ ತಾಂತ್ರಿಕ ಚರ್ಚೆ:
• ದರ್ಶನ್ ಪುಟ್ಟಣ್ಣಯ್ಯ (ಶಾಸಕರು, ಮೇಲುಕೋಟೆ ವಿಧಾನಸಭಾ ಕ್ಷೇತ್ರ)
• ದೇವ್ ಜೇನ್ (ಎ ಐ ಸಂಶೋಧಕರು)
• ಶ್ರೀಯುತ ರೆಮೆಲ್ಟ್ಸ್ ಎಲೆನ್ (ಎ ಐ ಸುರಕ್ಷತಾ ಶಿಬಿರದ ಕಾರ್ಯಕ್ರಮ ಸಂಯೋಜಕರು)
• ಅತಿಥಿ: ಡಾ. ಮಂಜುನಾಥ್ ಎಚ್. (ಕೃಷಿ ತಜ್ಞರು, ಗಾಂಧಿ ಸಹಜ ಬೇಸಾಯ ಆಶ್ರಮ)
ಗೋಷ್ಠಿ 2: ರೈತರ ಮುಂದಿನ ನಡೆ?
• ಬಡಗಲಪುರ ನಾಗೇಂದ್ರ (ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ)
• ಕುರುಬೂರು ಶಾಂತಕುಮಾರ್ (ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ)
• ಹೊನ್ನೂರು ಪ್ರಕಾಶ್ (ರೈತ ಮುಖಂಡರು ಹಾಗೂ ಕಾರ್ಯಕರ್ತರು, ಕೆ.ಆರ್.ಆರ್.ಎಸ್)
ಗೋಷ್ಠಿ 3: ಕೃತಕ ಬುದ್ಧಿಮತ್ತೆ ಮತ್ತು ರಾಜಕೀಯ
• ಮಹಿಮಾ ಜೆ. ಎಚ್. ಪಟೇಲ್ (ರಾಜ್ಯ ಅಧ್ಯಕ್ಷರು, ಜನತಾ ದಳ – ಸಂಯುಕ್ತ)
• ನವೀನ್ (ಸಂಶೋಧನಾ ವಿದ್ಯಾರ್ಥಿ)
ಗೋಷ್ಠಿ 4: ಕೃತಕ ಬುದ್ಧಿಮತ್ತೆ ಮತ್ತು ಪರಿಸರ ಸಮಸ್ಯೆಗಳು
• ಸುರೇಶ್ ಹೆಬ್ಳೀಕರ್ (ಚಿತ್ರ ನಿರ್ಮಾಪಕರು, ನಟರು ಹಾಗೂ ಪರಿಸರವಾದಿಗಳು)
• ಆಂಜನೇಯ ರೆಡ್ಡಿ (ಶಾಶ್ವತ ನೀರಾವರಿ ಹೋರಾಟ ಸಮಿತಿ)
• ಸತ್ಯನಾರಾಯಣ (ರಾಷ್ಟ್ರೀಯ ಸಂಚಾಲಕರು, ಜಲ್ ಬಿರಾದಾರಿ)
ಗೋಷ್ಠಿ  5 : ಕೃತಕ ಬುದ್ಧಿಮತ್ತೆ, ಸಂಸ್ಕೃತಿ, ಕಲೆ ಮತ್ತು ಜ್ಞಾನ
• ಕಾಳೇಗೌಡ ನಾಗವಾರ (ಕನ್ನಡ ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರು)
• ಬಸವರಾಜ ಪಾಟೀಲ ವೀರಾಪುರ (ರಾಷ್ಟ್ರೀಯ ಸ್ವಾಭಿಮಾನ ಆಂದೋಲನ)
• ಡಾ. ನಾರಾಯಣ ಎಸ್. (ರಾಜ್ಯಾಧ್ಯಕ್ಷರು, ಜೈ ಕರ್ನಾಟಕ ಪರಿಷತ್ತು)
ಸ್ಥಳ: ದೊಡ್ಡಹೊಸೂರು ಗ್ರಾಮ, ಗೂಳೂರು ಹೋಬಳಿ, ತುಮಕೂರು, ಕರ್ನಾಟಕ.
ಸಂಚಾಲಕರು: ರವೀಶ್ – ಸಂಪರ್ಕ ಸಂಖ್ಯೆ : 99004 14891

Leave a Reply