ಸಿರಿ ಸಂಪತ್ತು ಆಸ್ತಿ ಇಲ್ಲದ ಬಡತನ ಒಂದಷ್ಟು ಮಂದಿಗೆ
ಇವರಿಗೆ ದುಡಿಮೆಯೇ ಮದ್ದು.
ಆರೋಗ್ಯದ ಬಡತನ ಇರುವ ಒಂದಷ್ಟು ಮಂದಿಗೆ ವೈದ್ಯರು, ಔಷಧಿಗಳು ಭರವಸೆ ತುಂಬುತ್ತದೆ.
ಎಲ್ಲವೂ ಇದ್ದು ನೆಮ್ಮದಿ ಇಲ್ಲದ ಒಂದಷ್ಟು ಮಂದಿಗೆ ಆಶ್ರಮಗಳು, ಉಪನ್ಯಾಸಗಳು, ಪ್ರವಚನಗಳು ನೆಮ್ಮದಿಯ ತಾಣ.
ಜ್ಞಾನದ ಬಡತನ ಇರುವ ಒಂದಷ್ಟು ಮಂದಿ ಜ್ಞಾನದ ಹಸಿವ ತೀರಿಸಿಕೊಳ್ಳಲು ಸುತ್ತಾಟ, ಓದು, ಚರ್ಚೆಗಳ ಹಾದಿಯಲ್ಲಿರುತ್ತಾರೆ.
ಬದುಕನ್ನು ನಿಜವಾಗಿ ಅನುಭವಿಸುವವನು , ಆರೋಗ್ಯವಂತ ದುಡಿಮೆಯ ನಂಬಿದ ಬೆವರಿನ ಶ್ರೀಮಂತ.
ಬಯಕೆಗಳು ಹೆಚ್ಚಾದಂತೆ ಬಡತನವು ಬೆಳೆಯುತ್ತದೆ, ತೃಪ್ತಿಯೆಂಬ ನಿಲ್ದಾಣದಲ್ಲಿ ಮನಸ್ಸು ನಿಂತರೆ ಶ್ರೀಮಂತಿಕೆಯು, ಸಂತೋಷವೂ, ಸಂಭ್ರಮವು, ಬದುಕಿನ ಜೊತೆಯಲ್ಲಿ ಇರುತ್ತದೆ.
ಆಸೆಗೆ ಮಿತಿ ಇರಬೇಕು, ಮಿತಿಮೀರಿದರೆ ಬರಿಯ ನಿರಾಸೆ. ಕಂಡ ಕನಸುಗಳೆಲ್ಲ ನನಸಾಗುವುದಿಲ್ಲ, ಬದುಕಿನಲ್ಲಿ ಬಯಸಿದ್ದೆಲ್ಲವೂ ದೊರಕುವುದಿಲ್ಲ, ಬಂದದ್ದನ್ನು ಸಂತೋಷದಿಂದ ಸ್ವೀಕರಿಸಿ, ಇಲ್ಲದ್ದಕ್ಕೆ ಕೊರಗದೆ ಬದುಕುವುದೇ ಜೀವನದ ನಿಜವಾದ ಅರ್ಥ.
– ಕೆ ಎಸ್ ನಾಗರಾಜ್, ಬೆಂಗಳೂರು




