ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳು ರಾಜಕೀಯ ಸ್ಥಾನಮಾನದ ಉನ್ನತಿಗೆ ಬಹಳಷ್ಟು ಮಂದಿಗೆ ಪೂರಕವಾಗಲೇ ಇಲ್ಲ.
ಬೆಂಗಳೂರು ನಗರದಲ್ಲಿ 1949 ರಿಂದ 2020 ರ ತನಕ 50ಕ್ಕೂ ಹೆಚ್ಚು ಮಹಾಪೌರರು ಮತ್ತು ಉಪಮಹಾಪೌರರಾಗಿದ್ದಾರೆ. ಇವರಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ರಾಜಕಾರಣದಲ್ಲಿ ಉನ್ನತ ಸ್ಥಾನಗಳಿಗೆ ತಲುಪಲು ಸಾಧ್ಯವಾಗಿದೆ. ಬಹಳಷ್ಟು ಮಹಾಪೌರರಿಗೆ ಈ ಹುದ್ದೆಯ ನಿವೃತ್ತಿಯ ನಂತರ ರಾಜಕಾರಣದಲ್ಲಿ ಪ್ರಗತಿ ಸಾಧ್ಯವಾಗಿಲ್ಲ. ಅದೇ ರೀತಿಯಲ್ಲಿ ಉಪಮಹಾಪೌರರ ಹುದ್ದೆಯನ್ನ ಅಲಂಕರಿಸಿದ ಬಹುತೇಕ ಮಂದಿ ರಾಜಕೀಯ ರಂಗದಲ್ಲಿ ಪ್ರಗತಿಯನ್ನು ಕಾಣಲೇ ಇಲ್ಲ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ವಿ ಎಸ್ ಕೃಷ್ಣ ಅಯ್ಯರ್ ಇವರು 1962ರಲ್ಲಿ ಬೆಂಗಳೂರು ನಗರದ ಮಹಾಪೌರರಾಗಿದ್ದರು. ತದನಂತರ ವಿಧಾನ ಪರಿಷತ್ತಿನ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾಗಿ, ಉಪ ಸಭಾಪತಿಯಾಗಿ, ರಾಮಕೃಷ್ಣಹೆಗಡೆಯವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ರಾಜಕಾರಣದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು.
ಅನಂತಕೃಷ್ಣರವರು ಒಂದು ಬಾರಿ ಶಾಸಕರಾಗಿದ್ದರು. ಕೆ ಚಂದ್ರಶೇಖರ್ ರವರು ಒಂದು ಬಾರಿ ಶಾಸಕರಾದರು. ಪಿ ಆರ್ ರಮೇಶ್ ರವರು ವಿಧಾನ ಪರಿಷತ್ತಿನ ಸದಸ್ಯರಾದರು, ಪ್ರೇಮ ಕರಿಯಪ್ಪ ಇವರು ಉಪಮಹಾಪೌರರಾಗಿ ನಂತರ ಮಹಾಪೌರರಾಗಿ, ರಾಜ್ಯಸಭಾ ಸದಸ್ಯರಾಗಿ ಸೇವೆಯನ್ನು ಮಾಡುವ ಅವಕಾಶವನ್ನು ಪಡೆದುಕೊಂಡಿದ್ದರು.
ಇನ್ನೂ ಉಪಮಹಾಪೌರರ ಸಾಲಿನಲ್ಲಿ ಹೇಳುವುದಾದರೆ, ಕೆಲವರು ಮಹಾಪೌರರಾದರು. ಹಾಗೆಯೇ ಶಂಕರ್ ಉಪ ಮಹಾಪೌರರಾಗಿದ್ದವರು ವಿಧಾನಸಭಾ ಸದಸ್ಯರಾಗಿ, ಒಂದಷ್ಟು ಕಾಲ ಮಂತ್ರಿಯಾಗಿ, ತದನಂತರ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾವೇರಿ ಜಿಲ್ಲೆಯಲ್ಲಿ ರಾಜಕೀಯ ಪ್ರಗತಿಯನ್ನು ಕಂಡರು. ಇದನ್ನು ಹೊರತುಪಡಿಸಿ ಬಹುತೇಕ ಉಪ ಮಹಾಪೌರರು ಚುನಾವಣೆಗಳಲ್ಲಿ ಸ್ಪರ್ಧಿಸಿದರು ಸಹ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ರಾಜಕಾರಣದಲ್ಲಂತೂ ಮತ್ತಷ್ಟು ಉನ್ನತ ಹುದ್ದೆಗೆ ಇರಲು ಅವಕಾಶ ಒದಗಿ ಬರಲೇ ಇಲ್ಲ.
ಇದೇ ಸಂದರ್ಭದಲ್ಲಿ ಕೇವಲ ಸದಸ್ಯರಾಗಿದ್ದವರು ಮಂತ್ರಿಗಳಾಗಿದ್ದಾರೆ. ಸೋಮಣ್ಣನವರು ಕೇಂದ್ರದ ಸಚಿವರಾಗಿದ್ದಾರೆ. ಶಾಸಕರಾದವರ ಪಟ್ಟಿಯಂತೂ ದೊಡ್ಡದೇ ಇದೆ. ರಾಮಲಿಂಗಾರೆಡ್ಡಿರವರು ರಾಜ್ಯದ ಸಚಿವರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಗೋಪಾಲಯ್ಯ, ಸುರೇಶ್ ಕುಮಾರ್, ರಾಮಚಂದ್ರಗೌಡ ಸಚಿವರಾಗಿ ಮುನಿರತ್ನ ಮಂತ್ರಿಗಳಾದರು. ನರೇಂದ್ರಬಾಬು ರಾಜಾಜಿನಗರದಿಂದ, ರಘು, ಸಿ ವಿ ರಾಮನ್ ನಗರದಿಂದ, ರಾಜಣ್ಣ, ಭಾರತೀ ನಗರದಿಂದ ಶಾಸಕರಾದರು.
ಈ ಹಿಂದೆ ಟಿ ಆರ್ ಶಾಮಣ್ಣ, ವಾಟಾಳ್ ನಾಗರಾಜ್, ಲಕ್ಷ್ಮಿ ಸಾಗರ್, ಲೀಲಾದೇವಿ ಪ್ರಸಾದ್, ದಯಾನಂದ ಸಾಗರ್, ಪಿ ರಾಮದೇವರು ಶಾಸಕರುಗಳಾದರು. ಲಕ್ಷ್ಮಿ ಸಾಗರ್, ಲೀಲಾ ದೇವಿ ಆರ್ ಪ್ರಸಾದ್ ಮತ್ತು ದಯಾನಂದ್ ಸಾಗರ್ ಅವರು ಮಂತ್ರಿಗಳಾಗಿಯೂ ಅವಕಾಶವನ್ನ ಪಡೆದರು.
ಇದೇ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಪುರಸಭೆ, ನಗರಸಭೆ, ಪಂಚಾಯಿತಿ, ತಾಲೂಕ್ ಪಂಚಾಯಿತಿ, ಜಿಲ್ಲಾ ಪರಿಷತ್ತು ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾದವರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರಾದವರು ದೇಶದ ಪ್ರಧಾನ ಮಂತ್ರಿಗಳಾದರು. ಎಚ್ ಡಿ ದೇವೇಗೌಡರು ಹೊಳೆನರಸೀಪುರದಿಂದ ಸ್ಥಳೀಯ ಸಂಸ್ಥೆಯಲ್ಲಿ ಪ್ರವೇಶ ಮಾಡಿ, ದೇಶದ ಉನ್ನತ ಸ್ಥಾನ ಅಲಂಕರಿಸಿದರು. ರಾಜ್ಯದಲ್ಲಿ ಸದಾನಂದ ಗೌಡರು, ಆರ್ ಗುಂಡೂರಾವ್, ಯಡಿಯೂರಪ್ಪ ಇವರುಗಳು ರಾಜ್ಯದ ಮುಖ್ಯಮಂತ್ರಿಗಳಾದರು. ಇಲ್ಲಿಯೂ ಸಹ ಸಾಕಷ್ಟು ಮಂದಿ ವಿಧಾನಸಭೆ, ವಿಧಾನಪರಿಷತ್ತು, ರಾಜ್ಯಸಭೆ ಲೋಕಸಭೆ, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿಯು ರಾಜಕೀಯವಾಗಿ ಸ್ಥಾನವನ್ನು ಪಡೆದುಕೊಂಡರು.
ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದವರಿಗೆ ಅದೇ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ರೂಪುಗೊಂಡಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




