ಸಾಧಕಿಯರಿಂದ ವಾಜಪೇಯಿ ಕಪ್ – 2022 ಉದ್ಘಾಟನೆ

3 years ago

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿರವರು ಕ್ರೀಡೆ, ಕ್ರೀಡಾಪಟುಗಳು ನೀಡುತ್ತಿದ್ದ ಪ್ರೋತ್ಸಾಹ, ಸಹಕಾರ ನಮಗೆ ಸ್ಪೂರ್ತಿ, ಪೇರಣೆಯಾಗಿದೆ ಎಂದು ಮಾಜಿ ಉಪಮೇಯರ್ ಎಸ್.ಹರೀಶ್ ಹೇಳಿದರು.

ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ ಪ್ರಯುಕ್ತ 20ನೇ ವರ್ಷದ ವಾಜಪೇಯಿ ಕಪ್-2022 ರಾಷ್ಟ್ರಮಟ್ಟದ ಪುರುಷ, ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು ರಾಜ್ಯದ ಮಹಿಳಾ ಸಾಧಕಿಯರಿಂದ ವಾಜಪೇಯಿ ಕಪ್-2022ರ ಉದ್ಘಾಟನೆಯನ್ನು ಮಾಜಿ ಸಚಿವ ರಾಮಚಂದ್ರಗೌಡರವರು, ಮಾಜಿ ಮೇಯರ್ ಕೆ.ಶಾಂತಕುಮಾರಿ, ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಇನ್ನರ್‌ ವೀಲ್‌ಕ್ಲಬ್, ಡಿಸ್ಟಿಕ್ಸ್-3194 ಚೇರ್ಮನ್ ವಿನುತಾ ಹರೀಶ್, ಅರ್ಜುನ ಪ್ರಶಸ್ತಿ ಪುರಸ್ಕೃರಾದ ಶೋಭಾ ನಾರಾಯಣ್‌, ಉಮಾದೇವಿ, ಅಂತಾರಾಷ್ಟ್ರೀಯ ಆಟಗಾರರಾದ ಕುಮಾರಿ ರಿತಿಮಾ ವೀರೇಂದ್ರಕುಮಾರ್, ಅಶ್ವಿನಿ ಅಕ್ಕುಂಜಿ, ಪವಿತ್ರ, ಕುಮಾರಿ ರಜನಿ, ಕುಮಾರಿ ಅಂಜಲಿ, ಯುಕ್ತಿ ರಾಜೇಂದ್ರ ಮಹಿಳಾ ಇನ್ಸ್‌ಪೆಕ್ಟರ್‌ಗಳಾದ ರೂಪಾ ಹಡಗಲಿ, ಶಿವರತ್ನ , ಮಾಜಿ ಉಪ ಮೇಯರ್ ಎಸ್.ಹರೀಶ್, ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಾಲಿಬಾಲ್ ಹೊಡೆಯುವ ಮೂಲಕ  ಪಂದ್ಯಾವಳಿಯ ಉದ್ಘಾಟನೆ ನೇರವೇರಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ ಭಾವಚಿತ್ರಕ್ಕೆ ಪುಷ್ಪನಮನ ಗಣ್ಯ ಅತಿಥಿಗಳು ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಎಸ್.ಹರೀಶ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರು ದೇಶ ಕಂಡ ಅಪ್ರತಿಮ ನಾಯಕ, ದೇಶದ ಜನರು ಅವರನ್ನ ಅಜಾತ ಶತ್ರು ಕರೆಯುತ್ತಿದ್ದರು. ಅಟಲ್ ಅವರ ಆಡಳಿತದಲ್ಲಿ ಕ್ರೀಡಾಪಟುಗಳಿಗೆ ಅತಿಹೆಚ್ಚು  ಪ್ರೋತ್ಸಾಹ ನೀಡುತ್ತಿದ್ದರು. ಅದೇ ಮಾರ್ಗದಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿರವರು ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದರು.

ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಕೇಂದ್ರ ಸರ್ಕಾರ ಗೌರವ ಪುರಸ್ಕಾರ ನೀಡಿ ಸನ್ಮಾನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಬೆಳಯಬೇಕು ಎಂಬ ಉದ್ದೇಶದಿಂದ ನಮ್ಮ ಸಂಘವು ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ,ಪ್ರೋತ್ಸಾಹ ನೀಡಲಾಗಿದೆ ಎಂದರು.

ಅಟಲ್ ಜೀರವರು ಕ್ರೀಡಾಪಟುಗಳಿಗೆ ನೀಡುತ್ತಿದ್ದ ಸಹಕಾರ, ಪ್ರೋತ್ಸಾಹ ನಮಗೆ ಸ್ಪೂರ್ತಿ, ಪೇರಣೆಯಾಗಿದೆ. ಇಂದು ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ಯೋಗ ಮತ್ತು ಯುವ ಕ್ರೀಡಾಪಟುಗಳಿಗೆ ತರಬೇತಿ ಕೇಂದ್ರ ಹಾಗೂ  ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ನಮ್ಮ ಸಂಘವು ಯುವ ಕ್ರೀಡಾಪಟುಗಳಿಗೆ ಉತ್ತೇಜನ, ಆರ್ಥಿಕ ಸಹಕಾರ ನೀಡುತ್ತಿದೆ ಎಂದರು.

ನೆಲ ಸೊಗಡು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply