ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲವನ್ನು ಪಡೆದು ಸಮಸ್ಯೆಗಳಿಗೆ ಸಿಲುಕಿರುವ ನಾಗರಿಕರು ಅನೇಕ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಆತ್ಮಹತ್ಯೆಯ ಹಾದಿಯನ್ನು ಹಿಡಿದಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಸಾಲಗಾರರು ಅನಿವಾರ್ಯವಾಗಿ ಬೇರೆಬೇರೆ ಸಂಸ್ಥೆಗಳಲ್ಲಿ ಸಾಲವನ್ನು ಪಡೆದು ತೀರಿಸಲಾಗದೆ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯವರು ಇದರಲ್ಲಿ ರಾಜಕಾರಣವನ್ನು ಹುಡುಕುತ್ತಾ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಟಿದ್ದಾರೆ. ಅರ್ಥವಿಲ್ಲದ ಹಾಗೂ ವಿವೇಚನೆ ಇಲ್ಲದೆ ಸರ್ಕಾರದ ಮೇಲೆ ಟೀಕೆಯನ್ನು ಮಾಡುತ್ತಿದ್ದಾರೆ, ಸಾಲಗಾರರ ಪರಿಸ್ಥಿತಿಗೆ ಯಾರು ಕಾರಣ ಎನ್ನುವುದನ್ನು ಮೊದಲು ಅರಿತು ನಂತರ ಪ್ರತಿಕ್ರಿಯಿಸಬೇಕು. ಆತುರವಾಗಿ ಮಾತನಾಡಿ ಮರ್ಯಾದೆಯನ್ನು ಕಳೆದುಕೊಳ್ಳಬಾರದು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಆರ್ ಬಿ ಐ ಅಡಿಯಲ್ಲಿರುತ್ತದೆ. ರಾಜ್ಯ ಸರ್ಕಾರ ಎಷ್ಟೇ ಕಾನೂನುಗಳನ್ನ ಮಾಡಿದರು ಇದಕ್ಕೆ ಅಂತಿಮವಾಗಿ ರಿಸರ್ವ್ ಬ್ಯಾಂಕ್ ನೀಡುವ ಆದೇಶಗಳು ಅವರು ಮಾಡುವ ಕಾನೂನುಗಳಿಗೆ ಮಾತ್ರವೇ ನ್ಯಾಯಾಲಯಗಳಲ್ಲಿ ಮಾನ್ಯತೆ ದೊರೆಯುತ್ತದೆ.
ಕೇಂದ್ರ ಸರ್ಕಾರದ ನಬಾರ್ಡ್ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ 5600 ಕೋಟಿ ರೂಗಳ ಸಾಲವನ್ನು ನೀಡುತ್ತಿತ್ತು. ಇದು ನಾಲ್ಕುವರೆ ಪರ್ಸೆಂಟ್ ಬಡ್ಡಿ ದರದಲ್ಲಿ ನೀಡುವ ಸಾಲವಾಗಿತ್ತು, ಇದನ್ನು ಪಡೆದು ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಕಡಿಮೆ ದರದಲ್ಲಿ ಸಾಲವನ್ನ ನೀಡಿ ಪ್ರೋತ್ಸಾಹಿಸುತ್ತಿತ್ತು. ಆದರೆ ಈ ವರ್ಷ ಕೇಂದ್ರ ಸರ್ಕಾರ ನಬಾರ್ಡ್ ಸಂಸ್ಥೆಯ ಮೂಲಕ ರಾಜ್ಯಕ್ಕೆ ಕೇವಲ 2430 ಕೋಟಿ ರೂಪಾಯಿಗಳನ್ನು ಮಾತ್ರ ನೀಡಿದ್ದಾರೆ. ಶೇಕಡ 58 ಪರ್ಸೆಂಟ್ ಸಾಲದ ಮೊತ್ತವನ್ನು ಕಡಿತಗೊಳಿಸಿದ್ದಾರೆ.
ಇದರಿಂದಾಗಿ ರೈತರಿಗೆ ರಾಜ್ಯ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸಾಕಾಗುತ್ತಿಲ್ಲ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿಯ ದರ ಹೆಚ್ಚಿರುತ್ತದೆ. ಇಲ್ಲಿ ಸಾಲವನ್ನ ತಂದು ರೈತರಿಗೆ ಕಡಿಮೆ ದರದಲ್ಲಿ ಕೊಡಲು ಸಾಧ್ಯವಾಗುವುದಿಲ್ಲ. ಇದು ಒಂದು ಕಾರಣವೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿನ ಸಾಲಗಳಿಗೆ ಕಾರಣವಾಗಿದೆ.
ಬಿಜೆಪಿಯವರು ಕೇವಲ ಟೀಕೆ ಮಾಡುವುದನ್ನು ಬಿಟ್ಟು, ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ತಂದು, ರಿಸರ್ವ್ ಬ್ಯಾಂಕ್ ನವರು ಸರಿಯಾದಂತಹ ಕಾನೂನನ್ನು ರೂಪಿಸಲು ಮತ್ತು ನಬಾರ್ಡ್ ಸಂಸ್ಥೆಯಿಂದ ಈ ಹಿಂದೆ ಬರುತ್ತಿದ್ದ 5600 ಕೋಟಿ ರೂಪಾಯಿಗಳ ಸಾಲದ ಪ್ರಮಾಣವನ್ನ ಅಷ್ಟೇ ಕೊಡಿಸುವುದು, ಸಾಧ್ಯವಾದರೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೊಡುವಂತೆ ಒತ್ತಡವನ್ನ ಹೇರಲಿ.
ಯಾವುದೇ ರೀತಿಯ ಜವಾಬ್ದಾರಿಯನ್ನ ಹೊರದೆ, ಕರ್ತವ್ಯವನ್ನು ನಿರ್ವಹಿಸದೆ ಟೀಕೆ ಮಾಡುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ, ಇಂತಹ ಟೀಕೆಗಳಿಂದ ನೊಂದ ಜನರ ಬದುಕಿಗೆ ಯಾವ ಪ್ರಯೋಜನವಾಗುವುದಿಲ್ಲ.
ವಿರೋಧ ಪಕ್ಷದ ನಾಯಕರು ಎಂದರೆ ಪ್ರತಿಯೊಂದು ವಿಚಾರದಲ್ಲೂ ವಿರೋಧದ ಮಾತುಗಳನ್ನಾಡುತ್ತಾ ಮಾಧ್ಯಮಗಳ ಮುಂದೆ ಕುಳಿತು ಅಬ್ಬರಿಸುವುದಲ್ಲ; ಧ್ವನಿಯೆತ್ತರಿಸಿ ಮಾತನಾಡುವುದಲ್ಲ, ಕ್ರಿಯಾಶೀಲತೆ, ಸ್ಪಷ್ಟವಾದಂತಹ ಅಂಕಿ ಅಂಶಗಳು ವಿಚಾರಗಳು ಇರಬೇಕು. ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ಹೇಳಿದ ಮಾತುಗಳನ್ನ ಈ ಘಟನೆಗಳಿಗೆ ಹೋಲಿಸಿ ಮಾತನಾಡುವುದು ಪ್ರಬುದ್ಧತೆಯ ಲಕ್ಷಣವಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




