ಸರ್ವಾಧಿಕಾರಿಯ ಕಾರ್ಪೊರೇಟ್ ಸಾಮ್ರಾಜ್ಯ ಪತರಗುಟ್ಟಲಿದೆ

2 months ago

ಕಳೆದ ಲೋಕಸಭಾ ಚುನಾವಣೆಯ ತರುವಾಯ “ಮೋದಿ ಪರಿವಾರ್” ವಿರೋಧ ಪಕ್ಷಗಳನ್ನು ಅಡ್ಡದಾರಿಯಲ್ಲಿ ಮುಗಿಸಿ ಹಾಕಲು ಎಲ್ಲಾ ಪ್ರಯತ್ನಗಳನ್ನು ನಡೆಸಿತು. ಭಾಗಶಃ ಯಶಸ್ವಿಯೂ ಆಯಿತು. ಹಲವು ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು. ವಿರೋಧ ಪಕ್ಷಗಳಿಂದ ಗೆದ್ದವರನ್ನೂ ಖರೀದಿಸಿ ಕೈಗೊಂಬೆ ವಿರೋಧ ಪಕ್ಷಗಳ ಪ್ರತಿಷ್ಟಾಪನೆ, ಪ್ರಾದೇಶಿಕ ಪಕ್ಷಗಳ ಲೋಕಸಭಾ ಸದಸ್ಯರನ್ನು ಪಕ್ಷಾಂತರ ಗೊಳಿಸಿ NDA ಕೂಟಕ್ಕೆ ಸೇರ್ಪಡೆ…

ಇನ್ನು ಭಾರತದಲ್ಲಿ ಎದುರಾಳಿಗಳೇ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಪೈಪೋಟಿ ನೀಡಬಲ್ಲ ವಿರೋಧ ಪಕ್ಷಗಳೆ ಇಲ್ಲ. ಇನ್ನೂ “ಭಾರತ ನಮ್ಮ ಸ್ವಂತ” ಎಂದು “ಚಕ್ರವರ್ತಿ” ಶೈಲಿಯಲ್ಲಿ ಬೀಗುತ್ತಿರುವಾಗಲೆ ದಿಢೀರನೆ ವಿದ್ಯಾರ್ಥಿ ಬಂಡಾಯ ಸಂಭವಿಸಿದೆ. ದೇಶದಲ್ಲಿ ಕಟ್ಟಿಹಾಕಿದ ಆಕ್ರೋಶದ ಕಟ್ಟೆ ಒಡೆದಿದೆ.

ವಿರೋಧ ಪಕ್ಷಗಳು ಇಲ್ಲದ, ಕೈಗೊಂಬೆ ವಿರೋಧ ಪಕ್ಷಗಳಷ್ಟೆ ಇರುವ ಸರ್ವಾಧಿಕಾರದ ಕನಸಿನಲ್ಲಿದ್ದ ಮೋದಿ ಪರಿವಾರ್ ಗೆ ಈ ಅನಿರೀಕ್ಷಿತ ಬಂಡಾಯ ಕೈಕಾಲು ಅಲ್ಲಾಡದಂತೆ ಮಾಡಿದೆ. ಮುಂದಿನ ಎರಡೂವರೆ ವರ್ಷ ಜನ ಹೋರಾಟದ ಹೊಸ ಪರ್ವವನ್ನೆ ಕಾಣಲಿದೆ. ಸರ್ವಾಧಿಕಾರಿಯ ಕಾರ್ಪೊರೇಟ್ ಸಾಮ್ರಾಜ್ಯ ಪತರಗುಟ್ಟಲಿದೆ.

– ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರ

Leave a Reply