ಬೆಂಗಳೂರು ನಗರ ಉತ್ತರ ಜಿಲ್ಲಾ ಬಿಜೆಪಿ ಕಛೇರಿ ಉದ್ಘಾಟನೆ

2 years ago

ಬೆಂಗಳೂರು: ದೇಶ ಮೊದಲು ನಂತರ ಪಕ್ಷ, ಆಮೇಲೆ ವ್ಯಕ್ತಿ ಮುಖ್ಯ ಎಂದು ರಾಷ್ಟ್ರ ಭಕ್ತಿ ಸಾರುವ ಪಕ್ಷ ಬಿಜೆಪಿ. ಅಂತಹ ಪಕ್ಷದ ಕಾರ್ಯಕರ್ತರು ಎಂದರೆ ಹೆಮ್ಮೆಯ ವಿಷಯ ಎಂದು ಮಾಜಿ ಉಪ ಮೇಯರ್ ಎಸ್.ಹರೀಶ್ ಹೇಳಿದರು.

ಬೆಂಗಳೂರು ನಗರ ಬಿಜೆಪಿ ಕಛೇರಿಯಲ್ಲಿ ಮಾತಾಡಿದ ಅವರು 500 ವರ್ಷಗಳ ಸತತ ಹೋರಾಟದ ಪ್ರತಿಫಲ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಲೋಕಾರ್ಪಣೆಯಾಗಿದೆ ಎಂದರು.

ಪ್ರಧಾನಿ ನರೇಂದ್ರಮೋದಿರವರ 10 ವರ್ಷದ ಆಡಳಿತದಲ್ಲಿ ಭಾರತ ದೇಶ ಆರ್ಥಿಕತೆ ನಾಲ್ಕನೇ ಸ್ಥಾನ ಹಾಗೂ ವಿಶ್ವದ ಬಲಿಷ್ಠ ರಾಷ್ಟ್ರ ಎಂದು ಖ್ಯಾತಿ ಗಳಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ವಿಶ್ವಕರ್ಮ, ಉಜ್ವಲ, ಆಯುಷ್ಮಾನ್ ಭಾರತ, ಮುದ್ರ ಯೋಜನೆಗಳು ದೇಶದ 25 ಕೋಟಿಗಿಂತ ಹೆಚ್ಚು ಕುಟುಂಬಗಳು ಆರ್ಥಿಕವಾಗಿ ಸಬಲರಾವಾದವು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರ ಸಂಘಟಿತ ಹೋರಾಟ, ಬಿಜೆಪಿ ಪಕ್ಷದ ಸಾಧನೆಗಳನ್ನು ಮನೆ, ಮನಗಳಿಗೆ ತಲುಪಿಸಿ, ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ಪಡೆಯಲು ಶ್ರಮಿಸುವುದಾಗಿ ಹೇಳಿದರು.

ಬೆಂಗಳೂರು ನಗರ ಬಿಜೆಪಿ ಕಛೇರಿಯಲ್ಲಿ ಮಾಜಿ ಉಪ ಮೇಯರ್, ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ರವರು ಮತ್ತು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಶಾಸಕ ಮುನಿರಾಜು, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಮಂಡಲ ಅಧ್ಯಕ್ಷರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply