ರಾಮರಾಯರ ಮನೆಯಲ್ಲಿ ವಿಶೇಷ ದಿನಗಳಲ್ಲಿ ಇವರ ಮನೆಯ ಎಲ್ಲರೂ ಮೊದಲು ನಂಜಮ್ಮನವರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ನಂಜಮ್ಮ ರಾಮರಾಯರ ತಾಯಿಯೂ ಅಲ್ಲ, ಬಂಧುವು ಅಲ್ಲ,ಶಆದರೂ ನಂಜಮ್ಮನಿಗೆ ಈ ರೀತಿಯ ವಿಶೇಷ ಗೌರವವನ್ನು ನೀಡುತ್ತಿರುವುದು ಯಾವ ಕಾರಣಕ್ಕೆ ಎಂಬ ಪ್ರಶ್ನೆ ಬಹಳಷ್ಟು ಮಂದಿಗೆ ಹಲವಾರು ದಿನಗಳಿಂದ ಕಾಡುತ್ತಲೇ ಇತ್ತು, ಇದಕ್ಕೆ ನೇರವಾಗಿ ಉತ್ತರವನ್ನು ಪಡೆಯಲು ರಾಮರಾಯರನ್ನೇ ಒಮ್ಮೆ ಕೇಳಿದಾಗ ಅವರು ನಂಜಮ್ಮನ ಬಗ್ಗೆ ಅವರಿಗಿರುವ ಗೌರವದ, ಭಕ್ತಿಯ ಹಿನ್ನೆಲೆಯನ್ನು ವಿವರಿಸಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ರಾಮರಾಯರ ತಾತ ದೊಡ್ಡ ಶ್ರೀಮಂತರು. ಅಪಾರ ಪ್ರಮಾಣದಲ್ಲಿ ಬಂಗಾರದ ಒಡವೆಗಳು ಸ್ಥಿರಾಸ್ತಿಗಳನ್ನು ಸಂಪಾದಿಸಿದ್ದರು. ರಾಮರಾಯರ ತಂದೆ ಚಂದ್ರಯ್ಯ ದುಶ್ಚಟಗಳ ದಾಸರಾಗಿ ಒಂದೊಂದೇ ಸ್ಥಿರಾಸ್ತಿಗಳನ್ನು ಮಾರಾಟ ಮಾಡುತ್ತಾ ಎಲ್ಲವನ್ನು ಕಳೆಯುತ್ತಾ ಬಂದರು. ಇವರ ಹೆಂಡತಿ ಪಾರ್ವತಮ್ಮನವರಿಗೆ ಭಯ ಕಾಡಿತು, ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಏನೂ ಉಳಿಯುವುದಿಲ್ಲ ಎಂಬ ಆತಂಕವಾಯಿತು.
ತಮ್ಮ ಬುದ್ಧಿವಂತಿಕೆಯಿಂದ ಬಂಗಾರದ ಒಡವೆಗಳನ್ನು ಮತ್ತು ಕೆಲವು ಸ್ಥಿರಾಸ್ತಿಗಳ ದಾಖಲೆಗಳನ್ನು ಕಾಪಾಡಿದರು. ಇದು ಇವರ ಗಂಡನಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿದ್ದರು.
ಚಂದ್ರಯ್ಯ ಸಾಯುವ ಮುನ್ನವೇ ಇವರ ಧರ್ಮಪತ್ನಿ ನಿಧನರಾದರು. ಈ ನಂತರವಂತು ಮನೆಯ ಪರಿಸ್ಥಿತಿ ತುಂಬಾ ಹದಗೆಟ್ಟಿತು, ಕೆಲವು ವರ್ಷಗಳ ನಂತರ ಚಂದ್ರಯ್ಯ ಕಾಯಿಲೆಯಿಂದ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು.
ರಾಮರಾಯರಿಗೆ ಆತಂಕವಾಯಿತು, ಮುಂದೆ ಏನು ಎನ್ನುವ ಪ್ರಶ್ನೆ ಕಾಡಿತು. ವಾಸಕ್ಕೆ ಇರುವುದೊಂದು ಮನೆಯನ್ನು ಬಿಟ್ಟರೆ ಬೇರೆ ಯಾವ ಆಸ್ತಿಯೂ ಇರಲಿಲ್ಲ, ಆದಾಯದ ಮೂಲವೂ ಇರಲಿಲ್ಲ, ಹೀಗಾಗಿ ಇರುವ ಮನೆಯನ್ನ ಮಾರುವ ಮಾತನ್ನಾಡಿದರು. ಮೊದಲಿನಿಂದಲೂ ಇವರ ಮನೆಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದ ನಂಜಮ್ಮನವರಿಗೆ ಈ ಮಾತು ಕೇಳಿಸಿತು. ಕೂಡಲೇ ನಂಜಮ್ಮ ಒಂದು ನಿಮಿಷ ಇರಿ ಎಂದು ತಮ್ಮ ಮನೆಗೆ ಹೋಗಿ ಒಂದು ಪೆಟ್ಟಿಗೆಯನ್ನು ತಂದರು, ಜೊತೆಗೆ ಇವರ ದೇವರ ಮನೆಯ ವಿಗ್ರಹಗಳಿರುವ ಕೆಳಗಿನ ಮಂಟಪವನ್ನು ತೆಗೆಯುವಂತೆ ಹೇಳಿ, ತನ್ನಲ್ಲಿದ್ದ ಕಬ್ಬಿಣದ ಪೆಟ್ಟಿಗೆಯನ್ನು ಇವರ ಕೈಯ ನೀಡಿ ನಿಮ್ಮ ತಾಯಿ ಇದನ್ನು ನನ್ನ ಕೈಗೆ ಕೊಟ್ಟು ನನ್ನ ಸಾವಿನ ನಂತರ ಮತ್ತು ನಮ್ಮ ಯಜಮಾನರ ಸಾವಿನ ನಂತರ ನಿಮಗೆ ತಲುಪಿಸಲು ಹೇಳಿದ್ದರು, ಜೊತೆಗೆ ದೇವರ ಮನೆಯ ಮಂಟಪದ ಕೆಳಗಡೆ ಇರುವ ಪತ್ರದ ಗಂಟನ್ನು ತಾವು ಪಡೆದುಕೊಳ್ಳಬೇಕೆಂದು ಹೇಳಿದ್ದರು ಎಂದು ಹೇಳಿ ಪೆಟ್ಟಿಗೆಯನ್ನು ಇವರ ಕೈಗೆ ನೀಡಿದರು.
ನಂಜಮ್ಮನವರ ಮಾತಿನಂತೆ ರಾಮರಾಯರು ದೇವರ ಮನೆಯ ಮಂಟಪದ ಕೆಳಗಡೆ ಇದ್ದ ಪತ್ರಗಳ ಗಂಟು ಬಿಚ್ಚಿದರು. ಅದರಲ್ಲಿ ನಾಲ್ಕು ಸ್ಥಿರಾಸ್ತಿಗಳ ಕಾಗದ ಪತ್ರಗಳು ಇದ್ದವು, ತದನಂತರ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಅವರ ಕಣ್ಣನ್ನು ಅವರೇ ನಂಬಲು ಆಗಲಿಲ್ಲ. ಏಕೆಂದರೆ, ಅದರಲ್ಲಿ ಅಪಾರ ಬೆಲೆ ಬಾಳುವ ಬಂಗಾರದ ಒಡವೆಗಳಿದ್ದವು.
ಇವುಗಳನ್ನು ಪಡೆದುಕೊಂಡ ಇವರು ನಂಜಮ್ಮನ ನಂಬಿಕೆ ಮತ್ತು ಪ್ರಾಮಾಣಿಕತೆಗೆ ಆಶ್ಚರ್ಯಗೊಂಡರು. ನಂಜಮ್ಮ ಮನಸ್ಸು ಮಾಡಿದ್ದರೆ ಇವುಗಳನ್ನು ನಮಗೆ ನೀಡದೆ ತಾನೇ ಇಟ್ಟುಕೊಂಡಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಭಯ ಕಾಡಿತು. ಜೊತೆಗೆ ನಂಜಮ್ಮನವರ ನಂಬಿಕೆಯ ನಡವಳಿಕೆಯ ಮುಂದೆ ನಾವೆಲ್ಲ ತುಂಬಾ ಸಣ್ಣವರು ಎನಿಸಿತು.
ನಂಜಮ್ಮನ ಪ್ರಾಮಾಣಿಕತೆ ಮತ್ತು ನಂಬಿಕೆಯ ಕಾರಣದಿಂದಾಗಿ ಕಷ್ಟದಲ್ಲಿ ಇದ್ದಂತಹ ನಮಗೆ ಸುಖದ ಬದುಕಿಗೆ ದಾರಿಯನ್ನು ಮಾಡಿಕೊಟ್ಟರು ಎಂಬ ಕಾರಣದಿಂದ ಕೃತಜ್ಞತೆಯಿಂದ ನಂಜಮ್ಮನನ್ನೇ ತಮ್ಮ ತಾಯಿಯ ಸ್ಥಾನದಲ್ಲಿ ಕಾಣುತ್ತಾ ತಮ್ಮ ಮನೆಯಲ್ಲಿಯೇ ಅವರಿಗೆ ವಾಸಕ್ಕೆ ವ್ಯವಸ್ಥೆಯನ್ನು ಮಾಡಿಕೊಟ್ಟು ಪ್ರತಿದಿನವೂ ಅವರ ಆಶೀರ್ವಾದವನ್ನು ಪಡೆಯುತ್ತ ಜೀವನವನ್ನು ನಡೆಸುತ್ತಿದ್ದಾರೆ.
ಸಕಾಲದಲ್ಲಿ ಸಿಕ್ಕಂತಹ ನೆರವಿನಿಂದಾಗಿ ರಾಮರಾಯರು ದೊಡ್ಡ ಉದ್ಯಮಿಗಳಾಗಿ ಮತ್ತಷ್ಟು ಶ್ರೀಮಂತರಾಗಿದ್ದಾರೆ. ಆದರೂ ಸಹ ತಮ್ಮ ಎಲ್ಲ ಶ್ರೀಮಂತಿಕೆ ಬದುಕಿಗೆ ಕಾರಣಕರ್ತರಾದ ನಂಜಮ್ಮನವರನ್ನು ವಿಶೇಷವಾದ ಗೌರವವನ್ನು ನೀಡುತ್ತಾ ಬಂದಿರುತ್ತಾರೆ.
ನಂಜಮ್ಮ ಸ್ವಾರ್ಥಿಯಾಗಿದ್ದರೆ ಎಲ್ಲ ಸಂಪತ್ತನ್ನು ತಾನೇ ತನ್ನದಾಗಿಸಿಕೊಂಡು ಶ್ರೀಮಂತಳಾಗಿ ಬದುಕಬಹುದಾಗಿತ್ತು. ಆದರೆ ಮನೆಯ ಯಜಮಾನಿ ಮಾತಿನಂತೆ ಎಲ್ಲವನ್ನು ಜೋಪಾನವಾಗಿ ಕಾಪಾಡಿ ಅವರ ಮಾತಿನಂತೆ ತಲುಪಿಸಬೇಕಾದವರಿಗೆ ಇವುಗಳನ್ನು ತಲುಪಿಸಿದಂತಹ ಕಾರಣದಿಂದಾಗಿ ನಂಜಮ್ಮ ಇವರ ಪಾಲಿನ ನಂಬಿಕೆಯ ನಂಜಮ್ಮನಾಗಿ ಬದಲಾಗಿರುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




