ಈ ಊರಿನ ಪಂಚಾಯತಿ ಸದಸ್ಯನಾಗಿ ನಂತರ ಎಲ್ಲರ, ಅಭಿಪ್ರಾಯದಂತೆ ಒಮ್ಮತದ ಆಯ್ಕೆಯಾಗಿ ಇವನು ಅಧ್ಯಕ್ಷ ಆದ, ಐದು ವರ್ಷದ ಅವಧಿಯಲ್ಲಿ ಊರಿನ ಅಭಿವೃದ್ಧಿಗೆ ಪರಮೇಶು ಮಾಡಿದಷ್ಟು ಕೆಲಸ ಯಾರೂ ಮಾಡಿರಲಿಲ್ಲ. ಹಾಗಿದ್ದರೂ ಪರಮೇಶವನ್ನು ಸೋಲಿಸಿದ್ದು ಏಕೆ ಎಂಬ ಪ್ರಶ್ನೆ ಸ್ವತಹ ಇವನನ್ನು ಕಾಡಿತು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಅವನಿಗೆ ಉತ್ತರವೇ ದೊರೆಯಲಿಲ್ಲ. ಹಳ್ಳಿಯ ಪ್ರತಿಯೊಂದು ರಸ್ತೆಯನ್ನು ಡಾಂಬರೀಕರಣ ಮಾಡಿಕೊಟ್ಟಿದ್ದೇನೆ, ಸರ್ಕಾರದ ಯೋಜನೆಯ ತಂದು ಮನೆಮನೆಗೆ ಶೌಚಾಲಯವನ್ನು ಕಟ್ಟಿಸಿ ಕೊಟ್ಟಿದ್ದೇನೆ, ಬೀದಿ ದೀಪಗಳನ್ನು ಕೇವಲ ಹಾಕುವುದಲ್ಲ ಅದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುವಂತೆ ವ್ಯವಸ್ಥೆಯನ್ನು ಮಾಡಿದ್ದೇನೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಕೊಟ್ಟಿದ್ದೇನೆ, ನಮ್ಮ ಹಳ್ಳಿಗೆ ಬಸ್ ಬಂದು ಎಷ್ಟೋ ದಶಕಗಳಾಗಿತ್ತು. ಆ ಬಸ್ ವ್ಯವಸ್ಥೆಯನ್ನು ಮಾಡಿಕೊಟ್ಟೆ, ಸಮುದಾಯ ಭವನವನ್ನು ಕಟ್ಟಿಸಿ ಕೊಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆತ್ಮೀಯರಾಗಿದ್ದ ಆರೋಗ್ಯ ಸಚಿವರ ಸಹಕಾರದಿಂದ ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ, ಇಲ್ಲಿಯತನಕ ಸಣ್ಣಮಟ್ಟದ ಭ್ರಷ್ಟಾಚಾರವನ್ನು ಮಾಡಿರುವುದಿಲ್ಲ.
ನಾನು ಪಂಚಾಯಿತಿ ಸದಸ್ಯನಾಗುವ ಮುನ್ನ ಯಾವ ಮನೆಯಲ್ಲಿ ಇದ್ದೇನೆ ಅದೇ ಮನೆಯಲ್ಲಿ ಈಗಲೂ ಇದ್ದೇನೆ. ಊರಿನಲ್ಲೂ ಆಸ್ತಿ ಮಾಡಿಲ್ಲ, ಕಾಣದಂತೆ ಪರ ಊರಿನಲ್ಲೂ ಖರೀದಿಸಿಲ್ಲ, ರಾಜ್ಯ ಸರ್ಕಾರ ಕೊಡುವ ಅನೇಕ ಪ್ರಶಸ್ತಿಗಳು ನಮ್ಮ ಪಂಚಾಯ್ತಿಗೆ ಬಂದಿವೆ. ವಿಶೇಷ ಅನುದಾನವನ್ನು ಈ ಕಾರಣದಿಂದ ಕೊಟ್ಟಿದ್ದಾರೆ. ಯಾರೊಂದಿಗೆ ಅಹಂಕಾರದಿಂದ ನಡೆದುಕೊಂಡಿಲ್ಲ. ಹಾಗಿದ್ದರೂ ನನ್ನನ್ನು ಸೋಲಿಸಿದ್ದು ಏಕೆ ಎಂಬ ಪ್ರಶ್ನೆ ಇವನನ್ನು ಮತ್ತೆ ಮತ್ತೆ ಕಾಡುತ್ತಿದೆ.
ಹಳ್ಳಿಯ ಶಾಲೆಯನ್ನು ಉನ್ನತ ಮಟ್ಟಕ್ಕೆ ಏರಿಸಿಕೊಟ್ಟು ಹೈಸ್ಕೂಲ್ ಮತ್ತು ಪಿಯುಸಿ ತರಗತಿಗಳಿಗೆ ಶಾಲೆಯನ್ನು ವಿಸ್ತರಿಸಿದೆ. ಹೀಗಿದ್ದರೂ ನನ್ನನ್ನು ಸೋಲಿಸಿದ್ದು ಏಕೆ. ನಿಮ್ಮ ಪ್ರಶ್ನೆ ಇವನನ್ನು ಕಾಡುತ್ತಲಿತ್ತು. ಈ ವಿಚಾರವನ್ನು ಇವನು ಇವನ ಹೆಂಡತಿಯ ಮುಂದೆ ಮತ್ತೆ ಮತ್ತೆ ಪ್ರಸ್ತಾಪಿಸಿದ. ಹೆಂಡತಿಯು ಯಾವ ಉತ್ತರವು ದೊರೆಯಲಿಲ್ಲ.
ಚುನಾವಣೆಯ ಫಲಿತಾಂಶ ಒಂದು ವಾರವಾಗಿರಬಹುದು ಇವನ ಹೆಂಡತಿ ಮನೆಗೆ ಬಂದವಳೇ ನೀವು ಎರಡು ತಪ್ಪುಗಳನ್ನು ಮಾಡಿಬಿಟ್ಟಿದ್ದೀರಿ. ಅದಕ್ಕೆ ಜನ ನಿಮ್ಮನ್ನ ಸೋಲಿಸಿದ್ದು ಎಂದು ಹೇಳಿದಳು. ನಿನಗೆ ಈ ವಿಚಾರ ಹೇಳಿದವರು ಯಾರು, ನಾನು ಮಾಡಿರುವ ತಪ್ಪುಗಳು ಯಾವುದು ಎಂದು ಪರಮೇಶು ಗಾಬರಿಯಿಂದ ಹೆಂಡತಿಯನ್ನು ಕೇಳಿದ.
ನಮ್ಮ ಊರಿನ ಬಹಳಷ್ಟು ಜನರಿಗೆ ಶಾಲೆಯ ಆಧುನಿಕರಣ ಮತ್ತು ವಿಸ್ತರಣೆ ಬೇಕಿರಲಿಲ್ಲ. ನಮ್ಮ ಹಳ್ಳಿಯ ಮಕ್ಕಳು ವಿದ್ಯಾವಂತರಾಗಿ ಪೇಟೆಯನ್ನ ಸೇರಿದರೆ ಕೂಲಿಗೆ ಜನ ಸಿಗುವುದಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ನೀವು ಮಾಡಿದ ತಪ್ಪು, ಜನ ನಿಮ್ಮನ್ನು ಕೇಳಿದರು ಎಂದು ನೀವು ದೇವಸ್ಥಾನವನ್ನು ನಿರ್ಮಿಸಿ ಕೊಟ್ಟಿರಿ. ದೇವಸ್ಥಾನಕ್ಕೆ ಬೇಕಾದ ಜಾಗಕ್ಕೆ ಅನುಮತಿ ಜಿಲ್ಲಾಧಿಕಾರಿಯಿಂದ ಅನುದಾನ ಎಲ್ಲವನ್ನು ತಂದು ಕೊಟ್ಟಿರಿ, ಆದರೆ ದೇವಸ್ಥಾನದ ಆರಂಭೋತ್ಸವದ ದಿನ ನೀವು ಗೆಳೆಯರು ಹೇಳಿದನೆಂದು ಗುಡಿಯ ಒಳಗೆ ಪ್ರವೇಶಿಸಿದಿರಿ. ನಿಮ್ಮನ್ನು ಅನುಸರಿಸಿ ಒಂದಷ್ಟು ಮಂದಿ ಬಂದರು. ಅದರಲ್ಲಿ ನಾನು ಸೇರಿದೆ. ಇದು ಈ ಊರಿನ ಕೆಲವರಿಗೆ ಸರಿ ಬರಲಿಲ್ಲ. ನಾನು ನೀವು ನಮ್ಮ ಕೇರಿಯ ಜನ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದು ಸಹಿಸಿಕೊಳ್ಳಲಾಗುತ್ತಿಲ್ಲ. ಕಾನೂನಿಗೆ ಹೆದರಿ ಅವರು ಏನು ಮಾಡಲಿಲ್ಲ. ಆದರೆ ಹಲವಾರು ಮಂದಿ ಅಂದೇ ನಿರ್ಧಾರ ಮಾಡಿದ್ದರಂತೆ, ಮುಂದಿನ ಚುನಾವಣೆಯಲ್ಲಿ ಪರಮೇಶ್ವರನ ಮನೆಗೆ ಕಳುಹಿಸಬೇಕೆಂದು ಎಂಬ ಮತ್ತೊಂದು ಕಠೋರ ಸತ್ಯವನ್ನು ಹೆಂಡತಿ ಹೇಳಿದಳು. ಈ ಮಾತುಗಳನ್ನ ಕೇಳಿದ ಪರಮೇಶುವಿನ ಕಣ್ಣಿನಿಂದ ನೀರು ಹರಿಯಿತು, ಮುಖ ಬಿಳಿಚಿಕೊಂಡಿತು, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜನರ ಮನಸ್ಸುಗಳು ಬದಲಾಗುತ್ತಲೇ ಇಲ್ಲ. ಒಂದೊಮ್ಮೆ ಸಂವಿಧಾನ ಇಲ್ಲದಿದ್ದರೆ ನಮ್ಮ ಪಾಡು ಏನಾಗುತ್ತಿತ್ತು ಎಂಬ ಭಯವುಕಾಡಿತು.
ನಿನಗೆ ಈ ವಿಚಾರವನ್ನ ಹೇಳಿದವರು ಯಾರು ಅವರು ನಿಜಕ್ಕೂ ನಂಬುವಂತಹ ಜನರೇ, ಎಂದು ಮತ್ತೆ ಪ್ರಶ್ನೆ ಕೇಳಿದ. ಅದಕ್ಕೆ ಇವನ ಹೆಂಡತಿ ನಂಬುವಂತಹ ಜನರೇ ಅವರು ಯಾರು ನಿಮ್ಮನ್ನು ಹೊಗಳಿ ನಿಮ್ಮಿಂದ ಕೆಲಸವನ್ನು ಮಾಡಿಸಿಕೊಂಡು ಅಭಿನಂದನೆಯ ಮಾತುಗಳನ್ನಾಡುತ್ತಿದ್ದರು, ಅವರುಗಳೇ, ನಿಮ್ಮ ಸೋಲಿಗೆ ಮುನ್ನುಡಿಯನ್ನು ಬರೆದವರು ಎಂದು ಹೇಳುತ್ತಾ ಎಷ್ಟೇ ಸಮಾಜ ಸುಧಾರಕರು ಬಂದರೂ, ಕಾನೂನುಗಳು ರಚನೆಯಾದರೂ ಮೇಲುಕೀಳು ಎಂಬ ಭಾವ ಇನ್ನೂ ಮಾಯವಾಗಿಲ್ಲ, ಎನ್ನುತ್ತಾ ಅಲ್ಲಿಂದ ಮೇಲೆದ್ದು ಮನೆಯ ಮುಂದೆ ನಿಂತು ಕಾಣುತ್ತಿದ್ದ ದೇವಸ್ಥಾನವನ್ನೇ ಒಂದೇ ಸಮನೆ ನೋಡುತ್ತಾ ನಿಂತಳು.
– ಕೆ ಎಸ್ ನಾಗರಾಜ್, ಬೆಂಗಳೂರು



