ಚತುರ್ವೇದಿ ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ. ಇವನ ತಾಯಿ ಕಾಮಾಕ್ಷಮ್ಮನವರು ಕೆಲವು ಮನೆಗಳಲ್ಲಿ ಅಡಿಗೆ ಮಾಡಿಕೊಂಡು ಸಂಪಾದನೆಯ ಮೂಲಕ ಬಂದ ಹಣದಲ್ಲಿ ಇದ್ದ ಏಕೈಕ ಮಗನನ್ನು ಚೆನ್ನಾಗಿ ಓದಿಸಿ ಬೆಳೆಸಿದ್ದಾರೆ. ಚತುರ್ವೇದಿಗೆ ತನ್ನ ತಾಯಿ ತನಗಾಗಿ ಕಷ್ಟಪಟ್ಟು ದುಡಿದಂತಹ ವಿಚಾರ ತಿಳಿದಿರುವ ಕಾರಣದಿಂದ ತಾಯಿಯ ವಿಚಾರದಲ್ಲಿ ಅಪಾರವಾದಂತಹ ಪ್ರೀತಿ ಮತ್ತು ಭಕ್ತಿ ಇದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಚತುರ್ವೇದಿಗೆ ಒಳ್ಳೆ ಕೆಲಸವು ದೊರೆಯಿತು. ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವಂತಾದ. ಕಾಮಾಕ್ಷಮ್ಮನವರು ಮಗನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ತಾಯಿಯ ಅಪೇಕ್ಷೆಯಂತೆ ಅವರು ತೋರಿಸಿದ ಕನ್ಯೆಯನ್ನು ಮದುವೆಯಾಗಲು ನಿರ್ಧರಿಸಿದ.
ಮದುವೆ ಸಮಾರಂಭ ಜೋರಾಗಿಯೇ ನಡೆಯುತ್ತಿದೆ. ಇನ್ನೇನು ತಾಳಿ ಕಟ್ಟುವಂತಹ ಸಮಯ ಬಂದಿತ್ತು. ಈ ಸಮಯದಲ್ಲಿ ಅಲ್ಲಿರುವ ಎಲ್ಲರೂ ಸೇರಿ ತಾಳಿಗೆ ಪೂಜೆ ಮಾಡಬೇಕೆಂದು ಅರ್ಚಕರು ಸೂಚಿಸಿದರು.
ಚತುರ್ವೇದಿ ತನ್ನ ತಾಯಿಯನ್ನು ಕರೆದು ಅಮ್ಮ ನೀನು ಮೊದಲು ಇದಕ್ಕೆ ಪೂಜೆ ಮಾಡು ನಂತರ ಬೇರೆಯವರು ಮಾಡಲಿ ಎಂದು ಹೇಳಿದ.
ಇದಕ್ಕೆ ಅರ್ಚಕರು ಬೇಡ ನಿಮ್ಮ ತಾಯಿಯ ಮೊದಲು ಮಾಡುವುದು ಬೇಡ ಎಂದು ಅಪಸ್ವರವನ್ನು ತೆಗೆದರು. ಅರ್ಚಕರ ಮಾತಿನಿಂದ ಸ್ವಲ್ಪ ಕೋಪಗೊಂಡ ಚತುರ್ವೇದಿ ಏಕೆ ಮಾಡಬಾರದು ಎಂದು ಕೇಳಿದ. ಅದಕ್ಕೆ ಅರ್ಚಕರು ಅದು ಹಾಗಲ್ಲಪ್ಪ ಮೊದಲು ಮುತ್ತೈದೆಯರಿಂದ ಪೂಜೆ ಮಾಡಿಸಬೇಕು ಎಂದು ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವಂತೆ ಹೇಳಿದರು.
ಓಹೋ ಇದು ಶಾಸ್ತ್ರವೇ, ನನಗೆ ಗೊತ್ತಿರಲಿಲ್ಲ ಎಂದು ವ್ಯಂಗ್ಯದಿಂದ ಚತುರ್ವೇದಿ ಹೇಳಿದ.
ಹೌದು ಶಾಸ್ತ್ರ ಇದು ಎಂದು ಅರ್ಚಕರು ಮತ್ತೆ ತಮ್ಮ ಮಾತನ್ನು ಪುನರುಚ್ಚರಿಸಿದರು.
ನಿಮ್ಮ ಶಾಸ್ತ್ರ ಏನೇ ಹೇಳಲಿ ಶಾಸ್ತ್ರಕ್ಕಿಂತ ನನಗೆ ನನ್ನ ತಾಯಿಯೇ ದೊಡ್ಡವಳು. ಶಾಸ್ತ್ರ ಮತ್ತು ತಾಯಿಯ ನಡುವೆ ಆಯ್ಕೆ ಯಾವುದು ಎಂದರೆ ನನ್ನ ಆಯ್ಕೆ ತಾಯಿ. ನನ್ನ ತಾಯಿಗಿಂತ ನನ್ನ ಹಿತವನ್ನು ಬಯಸುವವರು ನನ್ನ ಬದುಕಿನಲ್ಲಿ ಸಂತೋಷವನ್ನ ಕಾಣುವವರು ಬೇರೆ ಯಾರು ಇಲ್ಲ. ಶಾಸ್ತ್ರ ಏನೇ ಹೇಳಲಿ ಮೊದಲು ನನ್ನ ತಾಯಿಯ ಕೈಯಿಂದಲೇ ಇದಕ್ಕೆ ಪೂಜೆಯಾಗಲಿ ನಂತರ ಉಳಿದ ಮಾತು ಎಂದು ಹೇಳಿದ.
ಶಾಸ್ತ್ರ ಹೇಳುತ್ತದೆ ಇಷ್ಟರ ಮೇಲೆ ನಿಮ್ಮ ಇಷ್ಟ ಎಂದು ಅರ್ಚಕರು ಅಸಮಾಧಾನದಿಂದ ಹೇಳಿದರು.
ಅರ್ಚಕರ ಮಾತನ್ನು ಲೆಕ್ಕಿಸದೆ ಚತುರ್ವೇದಿ ತಾಯಿಯನ್ನು ಕರೆದು ತಾಳಿಗೆ ಪೂಜೆಯನ್ನು ಮಾಡಲು ಹೇಳಿದ. ಇದಕ್ಕೆ ತಾಯಿ ಸ್ವಲ್ಪ ಹಿಂಜರಿದರು, ಆದರೆ ಚತುರ್ವೇದಿ ಬಿಡದೆ ನೀನು ಪೂಜೆ ಮಾಡದಿದ್ದರೆ ನಾನು ತಾಳಿಯೇ ಕಟ್ಟುವುದಿಲ್ಲ ಇದು ನನ್ನ ನಿರ್ಧಾರ ಎಂದು ಸ್ಪಷ್ಟವಾಗಿ ಹೇಳಿದ.
ಅಲ್ಲಿದ್ದ ಒಂದಷ್ಟು ಮಂದಿ ಕಾಮಾಕ್ಷಮ್ಮನವರೇ ನಿಮ್ಮ ಮಗನಿಗೆ ನಿಮಗಿಂತ ಯಾರು ದೊಡ್ಡವರಿಲ್ಲ. ಶಾಸ್ತ್ರ ಏನು ಹೇಳಲಿ ನಿಮ್ಮ ಮಗನ ಮಾತು ಸರಿಯಾಗಿದೆ ಎಂದು ಪ್ರೋತ್ಸಾಹಿಸಿದರು.
ಈ ಘಟನೆಯನ್ನು ನೋಡಿದಂತಹ ಕಾಮಾಕ್ಷಮ್ಮನವರ ಕಣ್ಣಿನಲ್ಲಿ ನೀರು ತುಂಬಿ ಬಂದಿತ್ತು. ನಿಜಕ್ಕೂ ಮಗ ಎಷ್ಟೊಂದು ಪ್ರೀತಿ ಮತ್ತು ಭಕ್ತಿಯನ್ನು ನನ್ನ ಬಗ್ಗೆ ಹೊಂದಿದ್ದಾನೆ ಇಂತಹ ಮಗನನ್ನು ಪಡೆದಂತಹ ನಾನು ನಿಜಕ್ಕೂ ಧನ್ಯಳು ಎಂದು ತೃಪ್ತಿಯಿಂದ ಮಗನ ಆಸೆಯಂತೆ ತಟ್ಟೆಯಲ್ಲಿದ್ದ ತಾಳಿಗೆ ಅರಿಶಿಣ ಕುಂಕುಮವನ್ನು ಹಾಕಿ ಪೂಜೆಯನ್ನ ಮಾಡಿದಳು.
ಚತುರ್ವೇದಿಯ ಪಕ್ಕದಲ್ಲಿ ನಿಂತಿದ್ದ ಇವನು ಮದುವೆಯಾಗಬೇಕಾಗಿದ್ದ ಅನುಪಮಾ ಸಹ ತನ್ನ ಭವಿಷ್ಯದ ಪತಿಯ ನಡವಳಿಕೆಯ ಬಗ್ಗೆ ಅಭಿಮಾನದಿಂದ ಚತುರ್ವೇದಿಯ ಕೈಕುಲುಕಿ ಸಂತೋಷವನ್ನು ವ್ಯಕ್ತಪಡಿಸಿಳು.
– ಕೆ ಎಸ್ ನಾಗರಾಜ್, ಬೆಂಗಳೂರು




