ಆನಂದಪುರ ರಾಜ್ಯದಲ್ಲಿ ಆನಂದ ಪ್ರಭುಗಳು ರಾಜರಾಗಿ ಉತ್ತಮ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾನೆ. ಇವನ ಹೆಂಡತಿ ಸೌಂದರ್ಯಮ್ಮ. ಇವರಿಗೆ ಅನೇಕ ವರ್ಷಗಳ ನಂತರ ಹುಟ್ಟಿದಂತ ಏಕೈಕ ಪುತ್ರ ಸಂಭ್ರಮ, ಇವರ ಪಾಲಿಗೆ ನಿಜಕ್ಕೂ ಸಂಭ್ರಮವನ್ನುಂಟು ಮಾಡಿದ್ದಾನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜನಿಗೆ ಹಲವಾರು ವರ್ಷಗಳ ನಂತರ ಹುಟ್ಟಿದಂತಹ ಮಗ ಸಂಭ್ರಮನ ಮೇಲೆ ಅತಿಯಾದಂತಹ ಪ್ರೀತಿ. ಮಗನಿಗೆಒಂದು ಸಣ್ಣ ಗಾಯವಾದರೂ. ತುಂಬಾ ನೊಂದುಕೊಳ್ಳುತ್ತಾನೆ. ಇದೇ ರೀತಿಯಲ್ಲಿ ಸೌಂದರ್ಯಮ್ಮ ಸಹ ಮಗನ ಮೇಲೆ ಅಕ್ಕರೆ. ಮಗ ಬಹಳ ಮುದ್ದಾಗಿದ್ದಾನೆ ಜೊತೆಗೆ ತುಂಬಾ ತುಂಟನು ಆಗಿದ್ದಾನೆ.
ರಾಜನಿಗೆ ಬಹಳಷ್ಟು ಸಮಯ ತನ್ನ ಮಗನೊಂದಿಗೆ ಕಳೆಯುವುದರಲ್ಲಿ ಹೆಚ್ಚು ಸಂತೋಷವಿದೆ .ಇವನು ಸಹ ತನ್ನ ತುಂಟಾಟ ಮತ್ತು ಮುದ್ದು ಮುದ್ದು ಮಾತುಗಳಿಂದ ಇವರಿಗೆ ಮತ್ತಷ್ಟು ಆನಂದವನ್ನುಂಟು ಮಾಡಿದ್ದಾನೆ. ದಿನದಿಂದ ದಿನಕ್ಕೆ ಬೆಳೆದಂತಹ ಸಂಭ್ರಮ ಕೆಲವು ಚಟಗಳ ದಾಸನಾಗಿದ್ದಾನೆ. ರಾಜ ಅನೇಕ ಬಾರಿ ಬುದ್ದಿ ಮಾತು ಹೇಳಿದ್ದಾನೆ, ಜೊತೆಗೆ ಕೆಲವು ಬಾರಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ, ಆದರೂ ಸಹ ಇವನ ನಡವಳಿಕೆಯಲ್ಲಿ ಅಂತಹ ಬದಲಾವಣೆಗಳಾಗಲಿಲ್ಲ. ಇದು ರಾಜನ ಬಹಳಷ್ಟು ಬೇಸರಕ್ಕೆ ಕಾರಣವಾಗಿದೆ.
ರಾಜ ತನ್ನ ರಾಜ್ಯದಲ್ಲಿ ನಿಸ್ಪಕ್ಷಪಾತವಾದ ನ್ಯಾಯವನ್ನು ಪ್ರಜೆಗಳಿಗೆ ಕೊಡುವುದರಲ್ಲಿ ತುಂಬಾ ಪ್ರಸಿದ್ಧನಾಗಿದ್ದಾನೆ. ರಾಜ್ಯದಲ್ಲಿ ಯಾವುದೇ ರೀತಿಯ ಅನ್ಯಾಯಗಳು ಯಾರಿಂದಲೇ ಆಗಲಿ ರಾಜ ತೀರ್ಮಾನವನ್ನು ಕೊಡುವ ಸಂದರ್ಭದಲ್ಲಿ ನ್ಯಾಯದ ಪರವಾಗಿಯೇ ಎಲ್ಲಾ ಸಂದರ್ಭದಲ್ಲಿ ತೀರ್ಪನ್ನು ಕೊಟ್ಟಿರುತ್ತಾರೆ. ಇಲ್ಲಿ ಎಂದೂ ಸಹ ಪಕ್ಷಪಾತವನ್ನು ಮಾಡಿರುವುದಿಲ್ಲ, ಹಲವಾರು ಬಾರಿ ತಮ್ಮ ಮಂತ್ರಿಮಂಡಲದ ಕುಟುಂಬದ ಸದಸ್ಯರು ತಪ್ಪು ಮಾಡಿದಾಗಲೂ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯನ್ನು ನೀಡಿದ್ದಾನೆ. ಇದರಿಂದಾಗಿ ಕೆಲವರ ವಿರೋಧವನ್ನು ಎದುರಿಸಬೇಕಾಗಿತ್ತು.
ಕೆಲವು ವರ್ಷಗಳ ನಂತರ ಒಂದು ದಿನ ರಾಜ ನ್ಯಾಯ ಪಂಚಾಯಿತಿಗಾಗಿ ಸಭೆಯನ್ನ ಕರೆದಿದ್ದಾನೆ ,ಸಭೆಯಲ್ಲಿ ಅಪರಾಧಿಯ ಸ್ಥಾನದಲ್ಲಿ ರಾಜನ ಮಗ ಸಂಭ್ರಮನಿದ್ದಾನೆ. ಜನರಲ್ಲಿ ರಾಜ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಮಗನ ವಿಚಾರದಲ್ಲಿ ಕಠಿಣವಾದಂತಹ ನಿರ್ಧಾರವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವಿದೆ ,ಹಾಗೆ ಸೌಂದರ್ಯಮ್ಮ ಸಹ ರಾಜ ಮಗನ ಮೇಲಿನ ಪ್ರೀತಿಯಿಂದ ಅವನ ತಪ್ಪನ್ನು ಮನ್ನಿಸಿ, ಮಗನನ್ನು ಪಾರು ಮಾಡಬಹುದೆಂಬ ಭರವಸೆಯು ಹೊಂದಿದ್ದಾಳೆ.
ಸಭೆ ಆರಂಭವಾಯಿತು, ಸಂಭ್ರಮನಿಂದ ಅನ್ಯಾಯಕ್ಕೆ ಒಳಗಾದ ಯುವತಿ ಮುಂದೆ ಬಂದು ತನ್ನ ನೋವನ್ನ ಸಭೆಯ ಮುಂದೆ ಹೇಳಿಕೊಂಡಳು, ತನಗೆ ಆಗಿರುವ ಅನ್ಯಾಯ ಬಿಡಿಸಿ ಹೇಳಿದಳು.
ಸಭೆಯಲ್ಲಿದ್ದ ಬಹಳಷ್ಟು ಪ್ರಜೆಗಳು ಯುವತಿಯ ಮಾತುಗಳೆಲ್ಲವೂ ಸುಳ್ಳು ಸಂಭ್ರಮ ಒಳ್ಳೆಯವನು, ತಪ್ಪು ಮಾಡಲು ಸಾಧ್ಯವಿಲ್ಲ ಎಂದು ರಾಜನ ಪರವಾಗಿ ಪಕ್ಷಪಾತದ ಅಭಿಪ್ರಾಯ ವ್ಯಕ್ತಪಡಿಸಿದರು.
ಸೌಂದರ್ಯಮ್ಮ ಸಹ ರಾಜ ಯಾವ ರೀತಿಯ ತೀರ್ಮಾನವನ್ನು ನೀಡುತ್ತಾರೋ ಎಂಬ ನಿರೀಕ್ಷೆಯಲ್ಲಿ ಆತುರದಿಂದ ಕಾಯುತ್ತಿದ್ದಳು.
ರಾಜ ಯುವತಿಯ ಮಾತಿನ ನಂತರ ಸಂಭ್ರಮನ ಮಾತುಗಳನ್ನು ಆಲಿಸಿದ ,ಆದರೆ ತನ್ನ ಮಗ ಸತ್ಯವನ್ನ ಮುಚ್ಚಿಡುತ್ತಿದ್ದಾನೆ ಎನ್ನುವುದು ರಾಜನ ಮುಖದ ಭಾವನೆಯಿಂದ ತಿಳಿಯುತ್ತಿತ್ತು.
ಅಂತಿಮವಾಗಿ ರಾಜ ತನ್ನ ತೀರ್ಪನ್ನು ಪ್ರಕಟಿಸಬೇಕಿದೆ ಒಂದು ಕಡೆಯಲ್ಲಿ ತನ್ನ ಪ್ರೀತಿಯ ಮಗನ ಮುಖ, ಮತ್ತೊಂದು ಕಡೆಯಲ್ಲಿ ತನ್ನ ಪ್ರೀತಿಯ ಹೆಂಡತಿಯ ಮುಖ ,ಜೊತೆಗೆ ಪ್ರಜೆಗಳ ಮುಖವನ್ನು ಒಮ್ಮೆ ನೋಡಿದ, ಅಂತಿಮವಾಗಿ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದ.
ಸಂಭ್ರಮ ತನ್ನ ತಂದೆ ನನ್ನನ್ನು ಅತಿ ಹೆಚ್ಚು ಪ್ರೀತಿಸುವುದರಿಂದ ನನಗೆ ಶಿಕ್ಷೆ ಕೊಡುವುದಿಲ್ಲ ಎಂಬ ಪೂರ್ಣವಾದ ಭರವಸೆಯೊಂದಿಗೆ ನಿಂತಿದ್ದಾನೆ.
ಈ ರಾಜ್ಯದಲ್ಲಿ ಒಬ್ಬ ಸಾಮಾನ್ಯ ನಾಗರಿಕರು ಇಂತಹ ತಪ್ಪುಗಳನ್ನು ಮಾಡಿದಾಗ ಯಾವ ರೀತಿಯ ಶಿಕ್ಷೆಯನ್ನ ವಿಧಿಸುತ್ತೇವೆಯೋ ಅಂತಹ ಶಿಕ್ಷೆಯನ್ನೇ ಎಲ್ಲರಿಗೂ ನೀಡಬೇಕಾದದ್ದು ರಾಜನ ಧರ್ಮವಾಗಿರುತ್ತದೆ, ಈ ಹಿನ್ನೆಲೆಯಲ್ಲಿ ನನ್ನ ಮಗನ ತಪ್ಪಿಗೆ ಈ ಹಿಂದೆ ಇಂತಹ ಅಪರಾಧಗಳಿಗೆ ನೀಡಿರುವ ಶಿಕ್ಷೆಯಂತೆ ಇವನನ್ನು ಸಹ ಗಲ್ಲಿಗೇರಿಸಿ ಎಂದು ರಾಜ ಹೇಳಿ, ತನ್ನ ಪೀಠದಿಂದ ಎದ್ದು ಅರಮನೆಯ ಕಡೆಗೆ ಹೊರಟೆ, ಬಿಟ್ಟ. ಸಂಭ್ರಮ ಈ ಮಾತನ್ನು ಕೇಳಿ ಅಲ್ಲಿಯೇ ಕುಸಿದು ಬಿದ್ದ. ಸೌಂದರ್ಯಮ್ಮ ದುಃಖದಿಂದ ಕಣ್ಣೀರು ಸುರಿಸುತ್ತಾ ರಾಜನ ಹಿಂದೆ ಹೊರಟಳು., ಪ್ರಜೆಗಳು ಒಂದು ಕ್ಷಣ ಗಾಬರಿಯಾದರೂ.
ರಾಜನ ತೀರ್ಮಾನವನ್ನು ಪ್ರಜೆಗಳು ನಿರೀಕ್ಷಿಸಲಿಲ್ಲ, ಆದರೆ ರಾಜ ಒಬ್ಬ ಸಾಮಾನ್ಯ ತಂದೆಯಾಗಿ ನಡೆದುಕೊಳ್ಳದೆ ಒಬ್ಬ ರಾಜನಾಗಿ ತನ್ನ ಕರ್ತವ್ಯವನ್ನು ಎತ್ತಿ ಹಿಡಿದಿದ್ದಾನೆ ಮತ್ತು ಮಾದರಿಯಾಗಿ ನಡೆದುಕೊಂಡಿದ್ದಾನೆ, ಎಂಬ ಮಾತು ಎಲ್ಲ ಕಡೆಯಲ್ಲಿ ಕೇಳಿ ಬಂತು, ಇದರಿಂದ ರಾಜನ ವ್ಯಕ್ತಿತ್ವ ಮತ್ತಷ್ಟು ದೊಡ್ಡ ದಾಯಿತು.. ನಮ್ಮ ರಾಜ ಧೃತರಾಷ್ಟ್ರನಂತೆ ಕುರುಡು ಪ್ರೇಮವನ್ನು ತೋರಿಸದೆ ಹೃದಯದ ಕಣ್ಣಿನಿಂದ ತೀರ್ಮಾನವನ್ನು ನೀಡಿದ್ದಾನೆ ಎಂಬ ಅಭಿಮಾನವು ಪ್ರಜೆಗಳಲ್ಲಿ ಮೂಡಿತು.
ಮಗನನ್ನು ಕಳೆದುಕೊಂಡ ರಾಜ ಒಂದಷ್ಟು ದಿನಗಳ ಕಾಲ ಸಹಜವಾಗಿ ನೋವಿನಲ್ಲಿ ಇದ್ದರೂ ಸಹ ಇಂತಹ ಮಗನನ್ನು ಹೆತ್ತೆ ಎಂಬ ಬೇಸರವು ಅವನಲ್ಲಿ ಇತ್ತು.
- ಕೆ ಎಸ್ ನಾಗರಾಜ್, ಬೆಂಗಳೂರು




