ಉತ್ತರಾಧಿಕಾರಿ
ಮಹಾರಾಜರ ಜ್ಞಾನಾನಂದರು ತಮಗೆ ವಯಸ್ಸಾಯಿತು ಮತ್ತು ಆರೋಗ್ಯವು ಸಹ ಜವಾಬ್ದಾರಿಯನ್ನ ನಿರ್ವಹಿಸಲು ಸಹಕರಿಸುತ್ತಿಲ್ಲ ಎನ್ನುವ ಕಾರಣದಿಂದ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಲುವಾಗಿ ಸಭೆಯನ್ನ ಏರ್ಪಡಿಸಿದರು. ಮಹಾರಾಜ ಜ್ಞಾನಾನಂದರು ಏರ್ಪಡಿಸಿದ್ದ ಸಭೆಯಲ್ಲಿ ಅವರ ಪಕ್ಕದಲ್ಲಿ ಅವರ ಪತ್ನಿ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಆಸೀನರಾಗಿದ್ದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮಹಾರಾಜರು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುತ್ತಾರೆಂದು ಮೊದಲೇ ರಾಣಿಗೆ ಮತ್ತು ಅವರ ಪುತ್ರನಿಗೆ ತಿಳಿದಿತ್ತು. ರಾಣಿ ಸಹಜವಾಗಿ ತಮ್ಮ ಮಗನನ್ನು ಉತ್ತರಾಧಿಕಾರಿ ಮಾಡುತ್ತಾರೆ ಎಂದು ಕಾತುರದಿಂದ ಮತ್ತು ಸಂತೋಷದಿಂದ ಘೋಷಣೆಯ ಕ್ಷಣಗಳಿಗಾಗಿ ಕಾಯುತ್ತಿದ್ದಳು.
ಮಹಾರಾಜರು ಮಾತು ಆರಂಭಿಸಿದರು. ಅಲ್ಲಿ ಸೇರಿದ್ದ ಮಂದಿ ಬಹಳ ಉತ್ಸಾಹದಿಂದ ರಾಜರ ಮಾತುಗಳನ್ನ ಕೇಳಲು ಕುಳಿತಿದ್ದರು. ಮಹಾರಾಜರು ತಾವು ವಯಸ್ಸಾಗಿರುವ ಕಾರಣದಿಂದಲೂ ಮತ್ತು ಆರೋಗ್ಯವು ನನ್ನ ಜವಾಬ್ದಾರಿಯನ್ನ ನಿರ್ವಹಿಸಲು ಅನುವು ಮಾಡಿಕೊಡುತ್ತಿಲ್ಲ ಎಂಬ ಕಾರಣದಿಂದಲೂ ನಾನು ಹುದ್ದೆಯಿಂದ ನಿರ್ಗಮಿಸಿ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಈ ಸಭೆಯನ್ನ ಕರೆದಿರುತ್ತೇನೆ ಎಂದು ವಿಷಯವನ್ನು ತಿಳಿಸಿದರು.
ಅಲ್ಲಿ ಸೇರಿದ್ದ ಬಹಳಷ್ಟು ಜನರ ನಿರೀಕ್ಷೆಯು ಸಹ ಮಹಾರಾಜರ ಮಗನೇ ಉತ್ತರಾಧಿಕಾರಿ ಆಗುತ್ತಾನೆ ಎಂದು ಅಭಿಪ್ರಾಯಕ್ಕೆ ಬಂದಿದ್ದರು.
ಮಾತುಗಳು ಮುಂದುವರೆದು ರಾಜ ಉತ್ತರಾಧಿಕಾರಿಯನ್ನ ಘೋಷಣೆ ಮಾಡುತ್ತಿದ್ದಂತೆ ಇಡೀ ಸಭೆ ಒಂದು ನಿಮಿಷ ಅಚ್ಚರಿಯಿಂದ ನಿಶಬ್ದವಾಯಿತು. ರಾಜನ ಪಕ್ಕದಲ್ಲಿ ಕುಳಿತಿದ್ದ ಮಹಾರಾಣಿಯ ಮುಖದಲ್ಲಿ ಸಹನೆ ಮಾಯವಾಯಿತು. ಸಭೆಯಿಂದ ಮಹಾರಾಜರ ಪುತ್ರ ಎದ್ದು ಸಿಟ್ಟಿನಿಂದ ಹೊರಟೆ ಬಿಟ್ಟ. ಮಗನ ನಡವಳಿಕೆ ರಾಜನಿಗೆ ಅಂತಹ ಆಶ್ಚರ್ಯವನ್ನುಂಟು ಮಾಡಲಿಲ್ಲ ಸಹಜವಾಗಿ ಮಗ ಸಿಟ್ಟಾಗಿದ್ದಾನೆಂದು ಅವರಿಗೆ ತಿಳಿದಿತ್ತು.
ಮಹಾರಾಜರು ತಮ್ಮ ಉತ್ತರಾಧಿಕಾರಿಯನ್ನ ಘೋಷಿಸಿದ್ದು ತಮ್ಮ ಕುಟುಂಬದವರನ್ನಲ್ಲ ತಮ್ಮ ನಡುವೆ ಹಲವಾರು ವರ್ಷಗಳಿಂದ ಅರ್ಥ ಮತ್ತು ರಕ್ಷಣೆಯ ಜವಾಬ್ದಾರಿ ಹೊತ್ತು ದುಡಿಯುತ್ತಿದ್ದ ಮಧ್ಯಮ ವಯಸ್ಸಿನ ತಮ್ಮ ಮಂತ್ರಿಮಂಡಲದ ಸದಸ್ಯರನ್ನ.
ಮಹಾರಾಜನ ಘೋಷಣೆ ಈ ಸಚಿವರಿಗೂ ಸಹ ಆಶ್ಚರ್ಯ ಎನಿಸಿತು ಆದರೂ ಮಹಾರಾಜರು ಅವಕಾಶವನ್ನ ಕೊಟ್ಟಿದ್ದಾರೆ ಎಂದು ಅದನ್ನು ಗೌರವದಿಂದ ಸ್ವೀಕರಿಸಿದರು.
ಸಭೆ ಮುಗಿದು ಮಹಾರಾಜರು ತಮ್ಮ ಅರಮನೆಯ ಕಡೆಗೆ ಹೊರಟರು. ಅಲ್ಲಿ ರಾಣಿ ಇವರನ್ನು ಹಿಂಬಾಲಿಸಿದರು. ಅರಮನೆಯ ಒಳಗಡೆ ಬಂದು ಕುಳಿತ ರಾಣಿ ರಾಜನನ್ನು ಯಾವ ಕಾರಣಕ್ಕಾಗಿ ನೀವು ಉತ್ತರಾಧಿಕಾರಿಯನ್ನಾಗಿ ನಮ್ಮ ಮಗನನ್ನು ಮಾಡದೆ ಅನ್ಯರನ್ನು ಮಾಡಿದ್ದೀರಿ ಎಂದು ಪ್ರಶ್ನಿಸಿದಳು.
ಅದಕ್ಕೆ ರಾಜ, ನಿಮ್ಮೆಲ್ಲರ ನಿರೀಕ್ಷೆ ಸಹಜವೇ ಆಗಿತ್ತು. ಆದರೆ ನನಗೆ ನನ್ನ ಹೆಂಡತಿ ಮತ್ತು ಮಕ್ಕಳ ಸಂತೋಷಕ್ಕಿಂತ ರಾಜ್ಯದ ಜನರ ಸಂತೋಷ ಮತ್ತು ನೆಮ್ಮದಿ ಮುಖ್ಯವಾಗಿತ್ತು. ನಮ್ಮ ಮಗ ಎಂದು ಸಹ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಸದಾಕಾಲ ಐಶಾರಾಮಿ ಜೀವನವನ್ನು ನಡೆಸುತ್ತಾ ವಿಲಾಸಿ ಬದುಕನ್ನು ನಡೆಸುತ್ತಿದ್ದಾನೆ. ಜೊತೆಗೆ ಆಡಳಿತದ ಅನುಭವವಿಲ್ಲ. ನನ್ನ ಸ್ವಾರ್ಥಕ್ಕಾಗಿ ಇಂತಹವರ ಕೈಗೆ ರಾಜ್ಯವನ್ನ ಕೊಟ್ಟರೆ ನಮಗಷ್ಟೇ ಸಮಾಧಾನವಾಗುತ್ತದೆ. ಆದರೆ ರಾಜ್ಯದ ಪ್ರಜೆಗಳ ಬದುಕು ಹಾಳಾಗುತ್ತದೆ. ನನಗೆ ನನ್ನ ಮನೆಯ ಕುಟುಂಬ ಸದಸ್ಯರ ಸಂತೋಷಕ್ಕಿಂತ ನನ್ನ ರಾಜ್ಯದ ಪ್ರಜೆಗಳ ಸಂತೋಷವೇ ಮುಖ್ಯ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ನೇರವಾಗಿ ಹೇಳಿದರು.
ಮಹಾರಾಣಿ ರಾಜನ ಮಾತು ಕೇಳಿ ಪ್ರತಿಕ್ರಿಯಸದೆ ಮೌನದಿಂದ ಕುಳಿತಳು.
ರಾಜ ಮತ್ತೆ ಮಾತು ಮುಂದುವರಿಸಿ, ಕೆಲವು ದಶಕಗಳ ಹಿಂದೆ ನಮ್ಮ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತು ಜೊತೆಗೆ ಶತ್ರುಗಳ ಕಾಟವು ಪದೇಪದೇ ನಮ್ಮನ್ನು ಬಾಧಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅರ್ಥ ಮತ್ತು ರಕ್ಷಣೆಯ ಜವಾಬ್ದಾರಿಯನ್ನ ತೆಗೆದುಕೊಂಡಂತಹ ದೇವಾನಂದರು ಕೆಲವೇ ವರ್ಷಗಳಲ್ಲಿ ತಮ್ಮ ಬುದ್ಧಿವಂತಿಕೆ ಮತ್ತು ಪಾಂಡಿತ್ಯದಿಂದ ರಾಜ್ಯದ ಬೊಕ್ಕಸವನ್ನ ತುಂಬಿಸಿದರು. ಜೊತೆಗೆ ಬಲಿಷ್ಠವಾದ ಸೈನ್ಯವನ್ನು ಕಟ್ಟಿ ಶತ್ರುಗಳ ಕಾಟ ನಮ್ಮನ್ನು ಬಾಧಿಸಿದಂತೆ ಮಾಡಿದರು. ಇಷ್ಟೊಂದು ಸೇವೆಯನ್ನು ಮಾಡಿದ ಇವರನ್ನು ಪಕ್ಕಕ್ಕೆ ಸರಿಸಿ ನಮ್ಮ ಸ್ವಾರ್ಥಕ್ಕಾಗಿ ಯಾವ ಯೋಗ್ಯತೆಯೂ ಮತ್ತು ಯಾವ ಸಾಮರ್ಥ್ಯವೂ ಇಲ್ಲದ ಕೇವಲ ನನ್ನ ಮಗ ಎನ್ನುವ ಕಾರಣಕ್ಕೆ ಇವನನ್ನು ಉತ್ತರಾಧಿಕಾರಿ ಮಾಡಿದರೆ, ಅದು ನಾನು ರಾಜ್ಯದ ಜನರಿಗೆ ಜೊತೆಗೆ ನನ್ನ ಆತ್ಮಕ್ಕೆ ಮಾಡಿಕೊಳ್ಳುವ ವಂಚನೆಯಾಗುತ್ತದೆ. ನಮ್ಮ ಮಕ್ಕಳಿಗೆ ನಾವು ನಮ್ಮ ಆಸ್ತಿಯನ್ನಷ್ಟೇ ಕೊಡಬೇಕು, ಅದನ್ನು ಹೊರತುಪಡಿಸಿ ಸಾಮರ್ಥ್ಯವಿಲ್ಲದ ವಿಚಾರ ಅರಿವಿದ್ದರೂ, ನಮ್ಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ದುಡಿದಂತಹ ಅನೇಕರ ಶ್ರಮದ ಪರಿಚಯ ನಮಗೆ ಇದ್ದರೂ ಅವರುಗಳನ್ನ ಪಕ್ಕಕ್ಕೆ ಇಟ್ಟು ನಮ್ಮ ವಂಶದ ಕುಡಿಗಳನ್ನು ಉತ್ತರಾಧಿಕಾರಿ ಮಾಡುವುದು ಯಾರೂ ಒಪ್ಪುವಂತದ್ದಲ್ಲ. ಮುಂದಿನ ದಿನಗಳಲ್ಲಿ ನಮ್ಮ ನಾಡಿನ ಆಡಳಿತ ವ್ಯವಸ್ಥೆಗೆ ಭಂಗ ಬರುವ ರೀತಿಯಲ್ಲಿ ನಮ್ಮ ಕುಟುಂಬದ ಸದಸ್ಯರು ಸೇರಿದಂತೆ ಯಾರೇ ನಡೆದುಕೊಂಡರು ಅವರನ್ನು ಕಠಿಣವಾಗಿ ಶಿಕ್ಷಿಸುವುದು ಶತಸಿದ್ಧ ಎಂಬ ಎಚ್ಚರಿಕೆಯನ್ನು ಸಹ ನೀಡಿ ಅಲ್ಲಿಂದ ನಿರ್ಗಮಿಸಿದರು.
– ಕೆ ಎಸ್ ನಾಗರಾಜ್, ಬೆಂಗಳೂರು




