ಕಡು ಕಷ್ಟಗಳು ಎಷ್ಟೇ ಇರಲಿ, ದುಃಖ ತುಂಬಿರಲಿ, ಎಂದಿಗೂ ಯಾರ ಮುಂದೆಯೂ ಕೈ ಚಾಚದೆ, ತಲೆ ಬಾಗಿ ನಿಲ್ಲದೆ, ಬದುಕುವರು ಸ್ವಾಭಿಮಾನಿಗಳು
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ತಮ್ಮ ಎಲ್ಲ ಕಷ್ಟಗಳಿಗೆ, ತಮ್ಮೆಲ್ಲ ನೋವುಗಳ ಬಗೆಹರಿಸಲು ಸಮಾಜವಿದೆಯೆಂದು ಭಾವಿಸಿ, ಎಲ್ಲರ ಮುಂದೆ ಕೈ ಚಾಚುತ್ತ ಎಲ್ಲರ ನೆರವಿನೊಂದಿಗೆ ಬದುಕಲಿಚ್ಚಿಸುವವರು , ಪರಾವಲಂಬಿಗಳು
ಎಲ್ಲರಿಂದ ನೆರವು ಪಡೆದು, ಯಾರಿಗೂ ಕಷ್ಟ ಕಾಲದಲ್ಲಿ ಜೊತೆಯಲ್ಲಿ ನಿಲ್ಲದೆ ತಾನಾಯಿತು ತನ್ನ ಪಾಡಾಯಿತು ಎಂದು ತನಗಾಗಿ ಬದುಕುವವರು ಸ್ವಾರ್ಥಿಗಳು
ತಮ್ಮ ಕಷ್ಟಗಳು ನೂರಿರಲಿ, ಎಷ್ಟೇ ಸಮಸ್ಯೆಗಳಿರಲಿ, ನೋವು ತುಂಬಿದ್ದರು, ಎಲ್ಲವನು ನುಂಗಿಕೊಂಡು, ಇರುವುದರಲ್ಲಿಯೇ ಪರರಿಗೂ ಹಂಚುತ್ತ ,ಪರರ ನೋವಿಗೆ ಸ್ಪಂದಿಸುತ್ತಾ ಬದುಕುವರು, ನಿಸ್ವಾರ್ಥಿಗಳು
ಗೆಲುವಿನ ಗಳಿಗೆಯಲ್ಲಿ ಗೆಲುವಿಗೆ ನಾನೇ ಕಾರಣವೆಂದು ಮೆರೆಯುತ್ತ ,ಸೋಲಿಗೆ ತನ್ನ ಬೆಂಬಲಿಗರು ಕಾರಣವೆಂದು ಮೂದಲಿಸುತ್ತಾ , ಸೋಲಿನ ಹೊರೆಯನ್ನು ಹೊರಲಾರದವರು ನಾಯಕರಾಗಲಾರರು
ಯಾರಿಗೂ ಒಳಿತನ್ನು ಬಯಸದೆ, ಒಳಿತನ್ನು ಮಾಡದೆ, ಯಾವ ಸೇವಾ ಕಾರ್ಯಗಳಲ್ಲಿ ಸಣ್ಣ ಪಾತ್ರ ನಿರ್ವಹಿಸದೆ ಇರುವವರ ಟೀಕೆಗಳು, ಅಭಿಪ್ರಾಯಗಳು, ಮೌಲ್ಯವಿಲ್ಲದ ಮಾತುಗಳು
– ಕೆ ಎಸ್ ನಾಗರಾಜ್




