ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾದ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷರ ಕರೆಯ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರಧಾನಿಗಳು ಯುದ್ಧ ವಿರಾಮಕ್ಕೆ ಮುಂದಾಗಿರುವುದು ಗಮನಿಸಿದಾಗ ಪ್ರಪಂಚವನ್ನ ಇನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದು ಶಸ್ತ್ರಾಸ್ತ್ರಗಳನ್ನ ಮಾರಾಟ ಮಾಡುವ ವ್ಯಾಪಾರಿ ದೇಶ ಅಮೆರಿಕ ಎಂಬುದು ಸ್ಪಷ್ಟವಾಗುತ್ತದೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂಬ ನಿಜವಾದ ಕಾಳಜಿ ಅಮೆರಿಕ ಅಧ್ಯಕ್ಷರಿಗೆ ಇರುವುದೇ ಆದರೆ ,ಕೂಡಲೇ ತಮ್ಮ ರಾಷ್ಟ್ರ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವಂತಹ ವ್ಯಾಪಾರಕ್ಕೆ ಅಂತ್ಯ ಹೇಳಲಿ. ಶಸ್ತ್ರಾಸ್ತ್ರಗಳನ್ನು ಎಲ್ಲ ರಾಷ್ಟ್ರಗಳಿಗೆ ಕೊಡುವುದು ಅಮೆರಿಕಾದವರೇ, ಯುದ್ಧವನ್ನು ನಿಲ್ಲಿಸುವಂತೆ ಶಾಂತಿದೂತರಾಗಿ ಪ್ರತ್ಯಕ್ಷರಾಗುವುದು ಇದೇ ಅಮೆರಿಕಾದವರು, ದುರಂತವೆಂದರೆ ಇವರ ಮಾತೇ ಜಗತ್ತಿನಲ್ಲಿ ನಡೆಯುತ್ತಿರುವುದು ಮತ್ತೊಂದು ದುರಂತದ ಸಂಗತಿಯಾಗಿದೆ.
1971ರಲ್ಲಿ ಅಂದು ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿರವರು ಅಮೆರಿಕಾದ ಅಧ್ಯಕ್ಷರ ಬಿಟ್ಟಿ ಸಲಹೆಯನ್ನ ಕಾಲ ಕಸದಂತೆ ಕಂಡು ಶ್ವೇತಭವನದ ಮುಂದೆ ಪತ್ರಿಕಾ ಘೋಷ್ಠಿ ನಡೆಸಿ, ಪಾಕಿಸ್ತಾನದ ವಿರುದ್ಧ ಯುದ್ಧವನ್ನ ಸಾರಿ ಪಾಕಿಸ್ತಾನ ಎರಡು ಭಾಗವಾಗುವಂತೆ ಮಾಡಿ, ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು. ಅಂದು ಅವರು ಪಾಕಿಸ್ತಾನದ ಭೂ ಸೇನೆ, ವಾಯು ಸೇನೆ, ಜಲ ಸೇನೆ ಎಲ್ಲ ಭಾಗಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನ ಮಾಡಿ 90 ಸಾವಿರಕ್ಕೂ ಹೆಚ್ಚು ಸೈನಿಕರನ್ನ ವಶಕ್ಕೆ ಪಡೆದು, ಅಂತಿಮವಾಗಿ ಪಾಕಿಸ್ತಾನದ ಸೈನಾಧಿಕಾರಿ ಭಾರತಕ್ಕೆ ಬಂದು ಶರಣಾಗತಿ ಪತ್ರವನ್ನ ನೀಡುವಂತೆ ಎದೆಗಾರಿಕೆಯನ್ನ ತೋರಿಸಿದ ಮಹಿಳೆ, ಅಂದು ಸಹ ಅಮೆರಿಕ ವಿಶ್ವದ ದೊಡ್ಡಣ್ಣ ಎಂದು ಹೆಸರು ಮಾಡಿದ್ದ, ಆದರೆ ಆ ದೊಡ್ಡಣ್ಣನ ಮುಂದೆ ಈ ನಮ್ಮ ವೀರ ವನಿತೆ ತಿರುಗಿ ಬಿದ್ದಿದ್ದರು.
ಯಾವುದೇ ಬಲಿಷ್ಠ ರಾಷ್ಟ್ರಗಳು ತಮ್ಮ ದೇಶದ ಆರ್ಥಿಕತೆಯನ್ನ ಹೆಚ್ಚಿಸಿಕೊಳ್ಳಲು ಅಭಿವೃದ್ಧಿ ಹೊಂದುತ್ತಿರುವ ಮತ್ತು ಸಮಸ್ಯೆಗಳ ಸುಳಿಯಲ್ಲಿರುವ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನ ಖರೀದಿಸುವಂತೆ ಉತ್ತೇಜಿಸಿ ಅವರ ದೇಶದ ಬಂಡಾರವನ್ನ ಲೂಟಿ ಮಾಡುವಂತಹ ವ್ಯಾಪಾರಿ ಮನೋಭಾವವನ್ನ ಎಲ್ಲಿಯ ತನಕ ಈ ರಾಷ್ಟ್ರಗಳು ಬಿಡುವುದಿಲ್ಲವೋ, ಅಲ್ಲಿಯ ತನಕ ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಲೇ ಇರುತ್ತದೆ, ಅವರ ವ್ಯಾಪಾರವೂ ನಡೆಯುತ್ತಿರುತ್ತದೆ, ಅವರ ಸಂದಾನವು ನಡೆಯುತ್ತಿರುತ್ತದೆ, ಒಟ್ಟಾರೆ ಎಲ್ಲವೂ ಅವರ ಆದೇಶದಂತೆ ನಡೆಯುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




