ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು ಕಸ ವಿಲೇವಾರಿ ಕೆಲಸ ಮಾಡುವ ದಲಿತ ಯುವಕನಿಗೆ ಧಮ್ಕಿ ಹಾಕಿ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ಆತನ ತಾಯಿ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಮಹಿಳೆಯರ ಬಗ್ಗೆ ಹಾಗೂ ದಲಿತ ಸಮುದಾಯದ ಬಗ್ಗೆ ಬಿಜೆಪಿಗಿರುವ ದ್ವೇಷ ಬಿಜೆಪಿಗರ ಬಾಯಲ್ಲಿ ಪದೇ ಪದೇ ಬಯಲಾಗುತ್ತಲೇ ಇದೆ.
ಕೇವಲ ಬಾಯಿ ಮಾತಿಗೆ ಹಿಂದೂ ನಾವೆಲ್ಲ ಒಂದು ಎನ್ನುವ ಬಿಜೆಪಿ ನಾಯಕರು ಅನ್ಯ ಜಾತಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಸ್ತ್ರೀಯರಿಗೆ ಹೇಗೆ ಗೌರವ ಕೊಡುತ್ತಾರೆ ಎಂಬುದಕ್ಕೆ ಎನ್.ಆರ್ ರಮೇಶ್ ಆಡಿರುವ ಮಾತುಗಳೇ ಸಾಕ್ಷಿ. ಜಾಣ ಕುರುಡರಂತೆ ವರ್ತಿಸುವ ಬಿಜೆಪಿಗರು ಎನ್.ಆರ್ ರಮೇಶ್ ಅವರ ಬೆನ್ನಿಗೆ ನಿಂತಿದೆ. ಈ ಮೂಲಕ ಬಿಜೆಪಿಯು ಸ್ವಭಾವತಃ ದಲಿತ ವಿರೋಧಿ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದಂತಹ ಸಂವಿಧಾನದ ಮೂಲಕ ಅಧಿಕಾರ ಅನುಭವಿಸುತ್ತಿರುವ ಈ ಕೋಮುವಾದಿ ಬಿಜೆಪಿಗರು ದಲಿತ ಸಮುದಾಯದ ನೆರಳು ಕಂಡರೇ ಸಾಕು ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಪದಗಳಲ್ಲಿ ಬೈಗುಳ ಶುರು ಮಾಡುತ್ತಾರೆ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಎಂಬ ಮಾತಿನಂತೆ ದಲಿತರ ಬಗ್ಗೆ ಕೀಳು ಮನೋಭಾವ ಹೊಂದಿರುವ ಬಿಜೆಪಿಗರ ಮನಸ್ಥಿತಿ ಎಂದೂ ಬದಲಾಗುವುದಿಲ್ಲ!
ಎನ್.ಆರ್ ರಮೇಶ್ ಪ್ರಕರಣ ಕುರಿತು ಬಿಜೆಪಿ ನಾಯಕರು, ವಿಧಾನಸಭೆ ವಿಪಕ್ಷ ನಾಯಕರಾದ R Ashoka ಹಾಗೂ BJP Karnataka ಅಧ್ಯಕ್ಷರಾದ Vijayendra Yediyurappa ಅವರು ಸ್ಪಷ್ಟೀಕರಣ ನೀಡಬೇಕು. ಬಿಜೆಪಿ ಪಕ್ಷ ದಲಿತ ವಿರೋಧಿ ಅಲ್ಲ ಎಂಬುದನ್ನು ಕರ್ನಾಟಕದ ಜನತೆಗೆ ತೋರ್ಪಡಿಸಬೇಕು. ಈ ದಮ್ಮು, ತಾಕತ್ತು ರಾಜ್ಯ ಬಿಜೆಪಿ ಪಕ್ಷಕ್ಕಿದೆಯೇ?
– ಕೆಪಿಸಿಸಿ




