ರಾಹುಲ್ ಗಾಂಧಿ ಅವರು ತಕ್ಷಣವೇ ನಾಡಿನ ಜನತೆಯ ಕ್ಷಮೆಯಾಚಿಸಬೇಕು!: ಆರ್ ಅಶೋಕ್

2 hours ago

ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ದೇಶಾದ್ಯಂತ ‘ಸಂವಿಧಾನ ರಕ್ಷಣೆ’ ಎಂದು ಭಾಷಣ ಬಿಗಿಯುವ Rahul Gandhi ಅವರೇ,

ವಿಧಾನಸಭೆಯ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಹಾಗೂ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಗಳು ಸಂವಿಧಾನಾತ್ಮಕ ಹುದ್ದೆಗಳು. ಆಯಾ ಸದನದ ಜನಪ್ರತಿನಿಧಿಗಳು ಪ್ರಜಾಸತ್ತಾತ್ಮಕವಾಗಿ ಚುನಾಯಿಸಬೇಕಾದ ಪವಿತ್ರ ಸ್ಥಾನಗಳಿವು.

ಆದರೆ, ನಿಮ್ಮ ಕಾಂಗ್ರೆಸ್ ಹೈಕಮಾಂಡ್‌ನ ಅಧಿಕಾರದ ಮದ ಎಷ್ಟರಮಟ್ಟಿಗಿದೆ ಎಂದರೆ, ಹೈಕಮಾಂಡಿನ ಲೆಟರ್‌ಹೆಡ್‌ನಲ್ಲಿ ಪಕ್ಷದ ಕಾರ್ಯದರ್ಶಿ ಒಬ್ಬರು ಸಹಿ ಮಾಡಿ ಸಂವಿಧಾನಾತ್ಮಕ ಹುದ್ದೆಗಳಿಗೆ ಆಳುಗಳನ್ನು ‘ನೇಮಕ’ ಮಾಡುವ ಮಟ್ಟಕ್ಕೆ ಇಳಿದಿದ್ದೀರಿ.

❓ಸಂವಿಧಾನದ ವಿಧಿಗಳಿಗೆ ಬೆಲೆ ಎಲ್ಲಿದೆ?
❓ ಸದನದ ಸಾರ್ವಭೌಮತ್ವಕ್ಕೆ ಗೌರವ ಎಲ್ಲಿದೆ?
❓ರಾಜ್ಯದ ಜನಪ್ರತಿನಿಧಿಗಳ ಹಕ್ಕನ್ನು ಕಸಿಯಲು ನಿಮಗ್ಯಾರು ಅಧಿಕಾರ ಕೊಟ್ಟಿದ್ದು?

ಕರ್ನಾಟಕದ ಶಾಸಕಾಂಗವನ್ನು ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವಂತೆ ಪ್ರಜಾಪ್ರಭುತ್ವದ ಆಶಯಗಳನ್ನು ಹೊಸಕಿ ಹಾಕುತ್ತಿದೆ. ಸಂವಿಧಾನವನ್ನು ಕೇವಲ ರಾಜಕೀಯ ಲಾಭಕ್ಕಾಗಿ ಪ್ರದರ್ಶನದ ವಸ್ತುವನ್ನಾಗಿ ಮಾಡಿಕೊಂಡಿರುವ ನಿಮ್ಮ ನಕಲಿ ‘ಸಂವಿಧಾನ ಪ್ರೇಮ’ ಈಗ ಕನ್ನಡಿಗರ ಮುಂದೆ ಬೆತ್ತಲಾಗಿದೆ!

ಕರ್ನಾಟಕ ನಕಲಿ ಗಾಂಧಿ ಕುಟುಂಬದ ಜಾಗೀರಲ್ಲ.  ಸಂವಿಧಾನಕ್ಕೆ ಎಸಗಿರುವ ಈ ಘೋರ ಅಪಚಾರಕ್ಕೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರು ತಕ್ಷಣವೇ ನಾಡಿನ ಜನತೆಯ ಕ್ಷಮೆಯಾಚಿಸಬೇಕು!

– ಆರ್ ಅಶೋಕ್, ವಿಧಾನಸಭೆ ವಿಪಕ್ಷ ನಾಯಕ

Leave a Reply