ಬೆಂಗಳೂರು: ಸಿಎಂ ಡಿ ಕೆ ಶಿವಕುಮಾರ್ ಅವರ ಸಂಪುಟಕ್ಕೆ ನೂತನ ಸಚಿವರು ರಾಜಭವನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಳವಳ್ಳಿಯ ಪಿ.ಎಂ.ನರೇಂದ್ರಸ್ವಾಮಿ, ಕನಕಗಿರಿಯ ಶಿವರಾಜ ತಂಗಡಗಿ, ಹಾವೇರಿಯ ರುದ್ರಪ್ಪ ಲಮಾಣಿ, ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಬಳ್ಳಾರಿಯ ಬಿ.ನಾಗೇಂದ್ರ, ಚಳ್ಳಕೆರೆಯ ಟಿ.ರಘುಮೂರ್ತಿ, ಚಾಮರಾಜಪೇಟೆಯ ಜಮೀರ್ ಅಹಮದ್ ಖಾನ್, ಶಿವಾಜಿನಗರದ ರಿಜ್ವಾನ್ ಅರ್ಷದ್, ಕಲಘಟಗಿಯ ಸಂತೋಷ್ ಲಾಡ್, ಸೊರಬದ ಮಧು ಬಂಗಾರಪ್ಪ, ಚಾಮರಾಜನಗರದ ಸಿ.ಪುಟ್ಟರಂಗಶೆಟ್ಟಿ, ದಾವಣಗೆರೆಯ ಎಸ್.ಎಸ್. ಮಲ್ಲಿಕಾರ್ಜುನ್, ಜೇವರ್ಗಿಯ ಅಜಯ್ ಸಿಂಗ್, ನಾಗಮಂಗಲದ ಎನ್.ಚಲುವರಾಯಸ್ವಾಮಿ, ಅರಸೀಕೆರೆಯ ಕೆ.ಎಂ.ಶಿವಲಿಂಗೇಗೌಡ, ಮಾಗಡಿಯ ಎಚ್.ಸಿ.ಬಾಲಕೃಷ್ಣ, ಯಲಬುರ್ಗದ ಬಸವರಾಜ ರಾಯರೆಡ್ಡಿ, ಹುನಗಂದದ ವಿಜಯಾನಂದ ಕಾಶಪ್ಪನವರ್ ಮತ್ತು ಅಥಣಿಯ ಲಕ್ಷ್ಮಣ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿಲ್ಲ.




