35 ಕೋಟಿ ರೂ. ವೆಚ್ಚದಲ್ಲಿ ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶ ದ್ವಾರದವರೆಗಿನ ರಸ್ತೆಗೆ ವೈಟ್ ಟಾಪಿಂಗ್
ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಮತ್ತು ಸಂಚಾರಿ ಪೊಲೀಸ್ ವಿಭಾಗದ ಸಮನ್ವಯತೆಯಿಂದ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣ: ಎಸ್.ಸುರೇಶ್ ಕುಮಾರ್
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶ ದ್ವಾರದವರಗೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆಯನ್ನು ಮಾಜಿ ಸಚಿವ ಸುರೇಶ್ ಕುಮಾರ್ ನಡೆಸಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಎಸ್.ಸುರೇಶ್ ಕುಮಾರ್ ಅವರೊಂದಿಗೆ ಬೆಸ್ಕಾಂ, ಬಿಬಿಎಂಪಿ ಜಲಮಂಡಳಿ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಕಾಮಗಾರಿಗಳ ಪರಿಶೀಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಸುರೇಶ್ ಕುಮಾರ್, ಸರಿ ಸುಮಾರು 2.2 ಕಿಲೋ ಮೀಟರ್ ಉದ್ದದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ರಸ್ತೆ ಮುಗಿದ ಮೇಲೆ ರಸ್ತೆ ಅಗೆಯುವ ಪ್ರಮೇಯ ಬರಬಾರದು. ಆದ್ದರಿಂದ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಸಂಚಾರ ಪೊಲೀಸ್ ವಿಭಾಗದ ಜೊತೆಯಲ್ಲಿ ಸಮನ್ವಯ ಸಾಧಿಸಿ ಕಾಮಗಾರಿಯನ್ನು ಶರವೇಗದಲ್ಲಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರಿ ಸುಮಾರು 35 ಕೋಟಿ ರೂಪಾಯಿ ವೆಚ್ಚ. ಅದರಲ್ಲಿ 27 ಕೋಟಿ ರೂಪಾಯಿ ರಸ್ತೆ ನಿರ್ಮಾಣ, 7 ಕೋಟಿ ರೂಪಾಯಿ ಜಲಮಂಡಳಿ, ಬೆಸ್ಕಾಂ ಸಂಚಾರ ವಿಭಾಗಕ್ಕೆ ವೆಚ್ಚವಾಗಲಿದೆ. ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶದ್ವಾರ ಸಾವಿರಾರು ವಾಹನ ಸಂಚಾರಿ ಮಾಡುತ್ತವೆ. ಸಂಚಾರಕ್ಕೆ ಅಡಚಣೆಯಾಗದಂತೆ ಕಾಮಗಾರಿ ಮುಗಿಸಲು ಚರ್ಚಿಸಲಾಗಿದೆ. ರಾಜಾಜಿನಗರ 50ನೇ ಅಡ್ಡರಸ್ತೆ ಹೈಟೆಕ್ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಮಳೆ ನಿಂತ ನಂತರ ಡಾಂಬರೀಕರಣ ಕಾಮಗಾರಿ ಮಾಡಲಾವುದು ಎಂದರು.
ಮಂಡಲದ ಅಧ್ಯಕ್ಷ ಸುದರ್ಶನ್, ಬಿಜೆಪಿ ಮುಖಂಡರಾದ ಕಾಮಧೇನು ಸುರೇಶ್, ಯಶಸ್ ನಾಯಕ್, ಪ್ರವೀಣ್, ವಿಶ್ವನಾಥ, ಪುಟ್ಟ, ಗೌತಮ್ ಮೊದಲಾದವರು ಹಾಜರಿದ್ದರು.












