ರಕ್ತ ಸಂಬಂಧಿ, ಹೃದಯ ಸಂಬಂಧಿ

1 year ago

ರಕ್ತ ಸಂಬಂಧಿ, ಹೃದಯ ಸಂಬಂಧಿ

ಕಾಯಿಲೆ ಬಂದು ಹಾಸಿಗೆ ಹಿಡಿದಾಗ ಕೇವಲ ರಕ್ತ ಸಂಬಂಧಿಗಳಿದ್ದರೆ ಸಾಲದು, ಪ್ರೀತಿಯಿಂದ ಆರೈಕೆ ಮಾಡುವ ಹೃದಯ ಸಂಬಂಧಿಗಳು ಬೇಕು.

ಎಷ್ಟು ಜನ ಸ್ನೇಹಿತರಿದ್ದಾರೆ ಎನ್ನುವುದಕ್ಕಿಂತ, ನಾಣ್ಯ ಚಲಾವಣೆ ಕಳೆದುಕೊಂಡಾಗ, ನೆಲಕ್ಕೆ ಬಿದ್ದಾಗ, ಕೈ ಹಿಡಿದು ಎತ್ತಲು, ಭರವಸೆಯ ಮಾತನಾಡಲು ನಮ್ಮೊಂದಿಗೆ ಎಷ್ಟು ಜನ ಉಳಿದುಕೊಳ್ಳುತ್ತಾರೆ ಎನ್ನುವುದು ಮುಖ್ಯ.

ಅನಾಥ ಮಕ್ಕಳಿಗೆ ವಸತಿ, ಊಟದ ಜೊತೆಗೆ, ತಾಯಿ ಪ್ರೀತಿ ತೋರುವ ಮನಸ್ಸುಗಳು, ತಾಯಿ ಅಪ್ಪುಗೆ ಬೆಚ್ಚನೆಯ ಬಾಹುಗಳು ಬೇಕು.

ಅಸಹಾಯಕ, ಹೆಣ್ಣಿಗೆ ಸೌಲತ್ತು, ಸೌಕರ್ಯ ನೀಡುವ ಜೊತೆಗೆ, ತಂದೆಯ ಕಣ್ಗಾವಲಿನ, ಸೋದರತ್ವದ ರಕ್ಷಣೆಯ ಶುದ್ಧ ಮನಸ್ಸಿನ ಜನರಿರಬೇಕು.

ಕೇವಲ ಒಡಹುಟ್ಟಿದರೆ ಸಾಲದು, ಸಂತೋಷವನ್ನು ಹಂಚಿಕೊಳ್ಳುವ, ದುಃಖದಲ್ಲಿ ಪಾಲುದಾರರಾಗುವ ಮಾನವೀಯತೆ ಉಳ್ಳವರು ಆಗಿರಬೇಕು.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply