ಶುಭ್ರವಾದ ಬಿಳಿಯ ವಸ್ತ್ರ ಧರಿಸುವುದರೊಂದಿಗೆ ಮನಸ್ಸು ಸ್ವಚ್ಛವಾಗಿರಬೇಕು, ಇಲ್ಲದಿದ್ದರೆ ರೇಷ್ಮೆ ಬಟ್ಟೆಯ ಗಂಟಿನೊಳಗೆ ಕೊಳೆತ ಹಣ್ಣುಗಳ ಸಂಗ್ರಹಿಸಿದಂತಾಗುತ್ತದೆ.
ಕೇವಲ ಸೌಂದರ್ಯವೊಂದಿದ್ದರೆ ಸಾಲದು, ಜೊತೆಗೆ ಮನಸ್ಸು ನಿರ್ಮಲವಾಗಿರಬೇಕು, ಇಲ್ಲದಿದ್ದರೆ ಕಸದ ತೊಟ್ಟಿಗೆ ಬಂಗಾರದ ಕವಚ ತೊಡಿಸಿದಂತೆ.
ದೇಹ ಗಟ್ಟಿಯಾಗಿರಬೇಕು, ಹೃದಯ ಹೂವಿನಂತಿರಬೇಕು ಇಲ್ಲದಿದ್ದರೆ ಬಂಡೆ ಕಲ್ಲುಗಳಿಂದ ಪ್ರತಿಸ್ಪಂದನೆಯನ್ನು ನಿರೀಕ್ಷಿಸುವ ಮೂರ್ಖತನವಾಗುತ್ತದೆ.
ಸಂಪತ್ತು ಇಲ್ಲವೆಂದು ಕೊರಗುವುದಕ್ಕಿಂತ ಸಂಪತ್ತು ಉಳ್ಳವರಿಗಿರುವ ದುಃಖಗಳು ತಮಗಿಲ್ಲವೆಂಬ ನೆಮ್ಮದಿಯಿಂದಿರಬೇಕು.
ಇಲ್ಲದಿರುವ ಸೌಕರ್ಯ, ಸೌಲಭ್ಯಗಳಿಗಾಗಿ ದುಃಖಿಸುವುದಕ್ಕಿಂತ, ಏನು ಇಲ್ಲದ ಅದೆಷ್ಟೋ ಮಂದಿಗಿಂತ ನಾವೇ ಮಿಗಿಲೆಂದು ಬದುಕುವುದು ನೆಮ್ಮದಿಗೆ ಕಾರಣವಾಗುತ್ತದೆ.
ಇಲ್ಲಿ ಎಲ್ಲರಿಗೂ ಎಲ್ಲವೂ ದೊರೆಯುವುದಿಲ್ಲ, ಕೊರಗು ಇಲ್ಲದ ಜೀವವು ಇಲ್ಲ ಕೊರತೆ ಇಲ್ಲದ ಬದುಕು ಇಲ್ಲಿಲ್ಲ.
ಸಿರಿ ಸಂಪತ್ತು ವರವು ಅಲ್ಲ ಇಲ್ಲಿಯೂ ದುಃಖಿತರಿದ್ದಾರೆ, ಬಡತನ ಶಾಪವಲ್ಲ ಇಲ್ಲಿಯೂ ಸಂತೋಷದಲ್ಲಿದ್ದಾರೆ. ಸುಖ ದುಃಖಗಳು ಇರುವುದು ನಮ್ಮ ಆಲೋಚನೆಗಳಲ್ಲಿ, ನಮ್ಮ ಮನಸ್ಸಿನ ಭಾವನೆಗಳಲ್ಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




