ಗೋಪಾಲಕೃಷ್ಣ ಅಡಿಗರು ಕುಂದಾಪುರ ತಾಲೂಕಿನನಲ್ಲಿ 1918ರ ಫೆಬ್ರವರಿ 18ರಂದು ಜನಿಸಿರುತ್ತಾರೆ. ಬೈಂದೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋದರು, ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. 1942 ರಲ್ಲಿ ಬಿಎ ಅನರ್ಸ್ ಮಾಡಿಕೊಂಡು ಉಪಾಧ್ಯಾಯರಾಗಿಯು ಮತ್ತು ಕೆಲಕಾಲ ಗುಮಾಸ್ತರಾಗಿಯು ಕೆಲಸ ಮಾಡಿರುತ್ತಾರೆ. 1952 ರಲ್ಲಿ ಎಂಎ ಪದವಿ ಪಡೆದು ಕುಮಟದ ಕೆನರಾ ಕಾಲೇಜ್, ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜ್ ಹಾಗೂ ಸಾಗರದ ಲಾಲ್ ಬಹುದ್ದೂರ್ ಶಾಸ್ತ್ರಿ ಕಾಲೇಜ್ ನಲ್ಲಿ ಕೆಲಸ ಮಾಡಿ 1968ರಲ್ಲಿ ಪ್ರಾಚಾರ್ಯರ ಹುದ್ದೆಯನ್ನು ತ್ಯಜಿಸಿ, ಉಡುಪಿಯ ಗಾಂಧಿ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾಗಿ ದುಡಿದು ನಂತರ ನಿವೃತ್ತರಾದರು. 1971ರಲ್ಲಿ ಲೋಕಸಭಾ ಚುನಾವಣೆಗೂ ಜನಸಂಘದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಇವರು ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ಅನುವಾದ ಸಾಹಿತ್ಯ, ಹೀಗೆ ಅನೇಕ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಇವರನ್ನು ಹೊಸ ಕಾವ್ಯ ಚಳುವಳಿಯ ಕವಿಗಳು ಎಂದು ಗುರುತಿಸುತ್ತಾರೆ.
ಇವರ ಭಾವಗೀತೆಗಳಾದ ಯಾವ ಮೋಹನ ಮುರಳಿ, ಅಳುವ ಕಡಲಲಿ, ಅಮೃತವಾಹಿನಿ, ಕಟ್ಟುವೆವು ಹೊಸ ನಾಡೊಂದನು, ನಾವೆಲ್ಲ ಒಂದೇ ಸುಗಮ ಸಂಗೀತ ಕ್ಷೇತ್ರದ ಗಾಯಕರಶಮೆಚ್ಚಿನ ಗೀತೆಗಳಾಗಿವೆ.
ಭಾವ ತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ, ಭೂಮಿಗೀತೆ, ವರ್ಧಮಾನ, ಚಿಂತಾಮಣಿಯಲ್ಲಿ ಕಂಡ ಮುಖ ಇವರ ಪ್ರಮುಖ ಕವನ ಸಂಕಲಗಳು. ಕಟ್ಟುವೆವು ನಾವು ಇದು ಸಮಾಜವಾದದ ಮೂಲಕ ಜನರ ನಡುವಿನ ಅಡ್ಡ ಗೋಡೆಗಳನ್ನು ಕಿತ್ತು ಹಾಕುವ ಪ್ರಗತಿಯ ಕಾವ್ಯವಾಗಿದೆ. ಭಾರತದ ತಂದೆ ಗಾಂಧಿ, ಧೂಮ ಲೀಲೆ, ಕನ್ನಡವೆಂದರೆ ತಾಯಿಯೇ ದೇವಿಯೇ ಎಂಬ ಕವನ ಪ್ರಮುಖವಾಗಿತ್ತು. ಇವರಿಗೆ ಕಬೀರ್ ಸಮ್ಮಾನ್ ಪ್ರಶಸ್ತಿ ಬಂದಿರುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಇವರ ವರ್ಧಮಾನ ಕವನ ಸಂಕಲನಕ್ಕೆ ಬಂದಿರುತ್ತದೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಲಭಿಸಿರುತ್ತದೆ.
ಅಡಿಗರು ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ 51ನೇಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ 1979ರಲ್ಲಿ ಆಯ್ಕೆಯಾಗಿದ್ದರು. ಇವರಿಗೆ ಮರಣೋತ್ತರವಾಗಿ 1995ರಲ್ಲಿ ಪಂಪ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಅಡಿಗರು 1992ರ ನವಂಬರ್ ಹದಿನಾಲ್ಕರಂದು ತೀರಿಕೊಂಡರು.
– ಕೆ ಎಸ್ ನಾಗರಾಜ್, ಬೆಂಗಳೂರು




