ಜನಮುಖಿ ಸಾಹಿತ್ಯ – ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಯುವ ಬರಹಗಾರರು ನೋಂದಾಯಿಸಿಕೊಳ್ಳಲು ಅವಕಾಶ
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ ಜಂಟಿಯಾಗಿ ಮೇ 30-31, 2026 ರಂದು ಆಯೋಜಿಸಿವೆ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪ ಸಭಾಂಗಣ’ದಲ್ಲಿ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಂಡು ವಿಚಾರ ಮಂಡಿಸಿ ಯುವ ಬರಹಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾಗವಹಿಸುವ ಯುವಬರಹಗಾರರಿಗೆ ಪ್ರಶಂಸಾ ಪತ್ರ, ಲೇಖನ ಸಾಮಾಗ್ರಿ, ಊಟದ ವ್ಯವಸ್ಥೆ ಹಾಗೂ ಅಗತ್ಯ ಇರುವವರಿಗೆ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಯುವ ಬರಹಗಾರರು 100 ರೂ.ಗಳ ಪ್ರತಿನಿಧಿ ಶುಲ್ಕವನ್ನು ಮೇ 25, 2026 ರೊಳಗೆ ಪಾವತಿಸಿ ನೊಂದಾವಣೆ ಮಾಡಿಕೊಳ್ಳಲು ಈ ಮೂಲಕ ಕೋರಲಾಗಿದೆ. ಯುವ ಬರಹಗಾರರು 9449505789, 9632329955 ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.






