ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಲಿ

1 week ago

ತರೀಕೆರೆಯ ಪ್ರಸಿದ್ಧ ದಂತ ವೈದ್ಯ ಡಾ. ಜಿ. ಸಿ. ಶರತ್ ಹಾಗೂ ಅಡಿಕೆ ವರ್ತಕ ಜಿ. ಸಿ. ಕಿರಣ್ ಅವರ ಮನೆಯಲ್ಲೊಂದು ಸುಂದರ ಕನ್ನಡ ಮನಸ್ಸುಗಳ ಮನೋಲ್ಲಾಸವಾಗುವಂತಹ ವಾತಾವರಣ ನಿರ್ಮಾಣವಾಗಿದೆ.

ಮನೆಯ ಸೌಂದರ್ಯ, ತೊಟ್ಟಿ ಮನೆ ಅಂಗಳದೊಳಗೆ ಒಂದಿಷ್ಟು ಹಾಡು, ಮಾತು-ಕತೆ, ಚಿಂತನ-ಮಂಥನ, ಪುಸ್ತಕ ಓದು, ಕಪಾಟಿನಲ್ಲಿಡು, ತೆರೆದು ನೋಡು, ಹೀಗೆ ಹಲವು ವಿಷಯಗಳಿಗೆ ಸಾಕ್ಷಿಯಾದ ಕಾರ್ಯಕ್ರಮ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ವಿನೂತನ ಕಾರ್ಯಕ್ರಮ ಮನೆಯಲ್ಲೊಂದು ಗ್ರಂಥಾಲಯ.

ಕನ್ನಡ ಪುಸ್ತಕ ಸಂಸ್ಕೃತಿ ಮನೆಯಂಗಳದಿಂದ ಪ್ರಾರಂಭವಾಗುವ ಮೂಲಕ ಮನೆಯೆ ಮೊದಲ ಪಾಠಶಾಲೆಯೊಂದಿಗೆ ಪುಸ್ತಕ ಓದುವ ಸಂಸ್ಕೃತಿ ಉಳಿಸಿ, ಬೆಳೆಸುವುದರೊಂದಿಗೆ ಕನ್ನಡ ಮನಸ್ಸನ್ನು ಕಟ್ಟಬಹುದಾಗಿದೆ. ಮನೆ ಮಕ್ಕಳಿಗೆ ಕನ್ನಡ ಪುಸ್ತಕ ಓದುವ ಗೀಳನ್ನು ತೋರಿಸಿಕೊಡಬೇಕಾಗಿದೆ. ಪ್ರಸ್ತುತ ಸಮಾಜದೊಳಗೆ ಮೊಬೈಲೆಂಬ ಲೆಜೆಂಡ್ ಎಲ್ಲಾ ಮನೆಯ ಮನಸುಗಳನ್ನಾವರಿಸಿಕೊಂಡಿರುವ ಈ ಹೊತ್ತಿನಲ್ಲಿ, ಮನೆಯೊಳಗಿನ ಮನಸುಗಳು ಪುಸ್ತಕ ಕೈಹಿಡಿಯಲು ಸಮಯವಿದೆಯೇ?

ಎಲ್ಲವನ್ನೂ ನೀಡುತ್ತಿರುವ ಕೈಯಲ್ಲೇ ಪ್ರಪಂಚ ತೊರುತ್ತಿರುವ ಆಧುನಿಕ ಭಗೀರಥನೆಂಬ ಮೊಬೈಲ್ ಬಿಡಲಾಗುವುದೇ ? ಬಿಡಿಸಲಾಗುವುದೇ, ಇದೀಗ ಬಂದಿರುವ ವ್ಯಕ್ತಿತ್ವದ ಮನಸನು ಕದಲಿಸುತ್ತಿರುವ, ಮಾನವನ ಬದುಕನ್ನು ಛಿದ್ರಗೊಳಿಸಲೆತ್ನಿಸುತ್ತಿರುವ, ಎಲ್ಲವೂ ನನ್ನಿಂದ ಸಾಧ್ಯವೆನ್ನುತ್ತಿರುವ ಬಹುದೊಡ್ಡ ವ್ಯವಸ್ಥೆಯೊಳಗೆ ಮುನ್ನುಗ್ಗುತ್ತಿರುವ Artficial Intaligent ಪ್ರಂಪಚದ ಇಂಥಹ ಸಂದರ್ಭ ಹಾಗೂ ಕಾಲಘಟ್ಟದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಮಾತನಾಡುತ್ತಾ, ದೇವರ ಮನೆಯ ರೀತಿಯಲ್ಲಿ, ಪುಸ್ತಕ ದೇವಾಲಯದ ಗೂಡನ್ನು ತೆರೆಯಿರಿ ಎನ್ನುವ ಸಂದೇಶವನ್ನು ನೀಡುವ ಮೂಲಕ ದೇವರನ್ನು ಪುಸ್ತಕಾಲಯದಲ್ಲಿ ಕಾಣಬಹುದು, ಮನೆಯೆ ಮಂತ್ರಾಲಯ ಮನಸೇ ದೇವಾಲಯ, ಅನ್ನುವಾಗೆ ಮನೆಯೇ ಪುಸ್ತಕಾಲಯ ಮನಸೇ ಓದಿನ ಅರಿವಿನಾಲಯ, ಮನೆಯಲೊಂದು ಪುಸ್ತಕಾಲಯ ತೆರೆದರೆ, ಮನೆಯ ಮನಸುಗಳು ಪ್ರಪಂಚದ ಅರಿವನು ತೆರೆದಾಗೆ ಎನ್ನುವ ಮಾತುಗಳ ಮೂಲಕ ಎಲ್ಲರ ಮನಸುಗಳಲ್ಲೊಂದು ಚಿಂತನೆಗೊಳಪಟ್ಟಿದ್ದು ನಿಜ.

ಅವರ ಸ್ಮೃತಿ ಪಟಲದಲ್ಲಿ ನಮ್ಮ ಮನೆಯಲ್ಲೊಂದು ಸಣ್ಣ ಕಪಾಟಿನಲಿ ಪುಸ್ತಕವೊಂದಿರಲಿ ಎನ್ನುವ ಚಿಂತನೆಗೊಳಗೊಳ್ಳುವ ಕಾರ್ಯಕ್ರಮ ಇದಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಈ ಕಾರ್ಯಕ್ರಮ ಆಯೋಜಿಸಿದ ಜಿಲ್ಲಾ ಸಂಚಾಲಕರಾದ ಡಿ. ಎಂ. ಮಂಜುನಾಥ್ ಸ್ವಾಮಿ ಹಾಗೂ ಕವಿ, ಚಿಂತಕ, ಸಂಘಟಕರು ಹಾಗೂ ಪುರಸಭೆ ಸದಸ್ಯರಾದ ದಾದಾಪೀರ್ ಅವರಿಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕಾಗಿ ಧನ್ಯವಾದಗಳು.

ಆದರೆ ಒಂದು ಸಣ್ಣ ಕೊರತೆ  ಕಂಡುಬಂದದ್ದು ಪುಸ್ತಕ ಸಂಸ್ಕೃತಿ ಬೆಳೆಸುವುದು ಸರಿ, ಪ್ರಾಧಿಕಾರ ಯಾವುದಾದರು ಸರಿ, ಓದಿನ ಅರಿವನ್ನು ಹೆಚ್ಚಿಸುವ ಒಂದಷ್ಟು ಪುಸ್ತಕಗಳನ್ನು ಈ ಸಂದರ್ಭದಲ್ಲಿ ಡಾ. ಜಿ. ಸಿ. ಶರತ್ ಪುಸ್ತಕದ ಗೂಡಿಗೆ ಸೇರಿಸಿದ್ದರೆ, ಇನ್ನೂ ಅರ್ಥಪೂರ್ಣವಾಗುತ್ತಿತ್ತು. ಮುಂದಿನ ಕಾರ್ಯಕ್ರಮಗಳಲ್ಲಿ ಪುಸ್ತಕ ನೀಡಲು ಮನಸು ಮಾಡಿ ಎನ್ನುವ ನನ್ನ ಆಶಯ, ಆದರೂ ಅಧ್ಯಕ್ಷರ ಮಾತು, ವಿಶ್ಲೇಷಣೆ, ದೇವರ ಮನೆ ರೀತಿ ಮನೆಯೊಳಗೆ ಪುಸ್ತಕಾಲಯಕ್ಕೆ ಮಾನ್ಯತೆ ನೀಡಿ ಎನ್ನುವ ಕಾಳಜಿಯ ಮಾತುಗಳು ತುಂಬಾ ಅರ್ಥಪೂರ್ಣವಾಗಿತ್ತು.

ಹಲವು ಕನ್ನಡ ಮತ್ತು ನಾಡು ನುಡಿಯ ಚಿಂತನೆಯ ವಿಶೇಷ ವ್ಯಕ್ತಿತ್ವದ ಮನಸುಗಳು ಒಂದೇ ಸೂರಿನಡಿ ಭಾಗವಹಿಸಿದ್ದು ವಿಶೇಷವಾಗಿತ್ತು, ಎಲ್ಲಾ ಕನ್ನಡ ಪ್ರೀತಿಯ ಮನಸುಗಳಿಗೆ ಧನ್ಯವಾದಗಳು.

– ರವಿ ದಳವಾಯಿ, ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ

Leave a Reply