ಪಿ.ಲಂಕೇಶ್ (03-08-1935 – 01-25-2000)

9 months ago

ಪಿ.ಲಂಕೇಶ್ (03-08-193501-25-2000)

ಜನನ: ಮಾರ್ಚ್ 8, 1935

ಮರಣ: ಜನವರಿ 25, 2000

ಶಿವಮೊಗ್ಗದ ಕೊನಗವಳ್ಳಿ ಎಂಬ ಗ್ರಾಮದಲ್ಲಿ ಜನನ. ಶಿವಮೊಗ್ಗದ ಇಂಟರ್ ಮೀಡಿಯಟ್ ಕಾಲೇಜ್ (1953-55)ನಲ್ಲಿ ಇಂಟರ್ ಮೀಡಿಯಟ್ ವಿದ್ಯಾಭ್ಯಾಸ. ಬೆಂಗಳೂರಿನ ಸೆಂಟ್ರಲ್ ಕಾಲೇಜ್ (1955-58)ನಲ್ಲಿ ಇಂಗ್ಲಿಷ್ ಆನರ್ಸ್, ಮೈಸೂರಿನ ಮಹಾರಾಜ ಕಾಲೇಜ್ (1958-59)ನಲ್ಲಿ ಇಂಗ್ಲಿಷ್ ಎಂ.ಎ., ಪದವಿ ವಿದ್ಯಾಭ್ಯಾಸ.

1959ರಿಂದ 1962ರವರೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ (ಹಿಂದಿನ ಇಂಟರ್ ಕಾಲೇಜ್)ನಲ್ಲಿ ಅಧ್ಯಾಪಕರಾಗಿ ಸೇವೆ. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ನಲ್ಲಿ ಮೂರು ವರ್ಷ (1962-1965), ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ವರ್ಷ (1965-1966) ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹನ್ನೆರಡು ವರ್ಷ (1966-1978) ಅಧ್ಯಾಪಕರಾಗಿ ಸೇವೆ. 1980ರಲ್ಲಿ ‘ಲಂಕೇಶ್ ಪತ್ರಿಕೆ’ಯ ಆರಂಭಿಸಿದರು.

ಪಿ.ಲಂಕೇಶ್ ಅವರು ಕನ್ನಡದ ಮಹತ್ವದ ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರರಾಗಿ ಹೆಸರಾಗಿದ್ದಾರೆ. ಜೊತೆಗೆ, ನಟನೆ, ನಿರ್ದೇಶನ ಮತ್ತು ಅನುವಾದ ಕ್ಷೇತ್ರದಲ್ಲಿ ಕೂಡ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಕನ್ನಡ ಪತ್ರಿಕೋದ್ಯೋಮದಲ್ಲಿ ಇವರು ‘ಲಂಕೇಶ್ ಪತ್ರಿಕೆ’ ಮೂಲಕ ಕೊಟ್ಟ ಕೊಡುಗೆ ಅಪಾರವಾದುದು. ನೂರಾರು ಯುವ ಲೇಖಕರು ಕತೆಗಾರರಾಗಿ, ಕವಿಗಳಾಗಿ, ವಿಮರ್ಶಕರಾಗಿ ಬೆಳೆಯಲು ಲಂಕೇಶ್ ಪತ್ರಿಕೆ ವೇದಿಕೆ ಒದಗಿಸಿತು. 

ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದ ಲಂಕೇಶ್ ತಮ್ಮ ಜೀವನದುದ್ದಕ್ಕೂ ಜಾತ್ಯತೀತ ಸಿದ್ಧಾಂತದ ಪ್ರತಿಪಾದಕರಾಗಿದ್ದರು.

ಕೃತಿಗಳು

ಕಥಾ ಸಂಕಲನಗಳು:

ಕೆರೆಯ ನೀರನು ಕೆರೆಗೆ ಚೆಲ್ಲಿ – 1963
ನಾನಲ್ಲ – 1970
ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ – 1973
ಕಲ್ಲು ಕರಗುವ ಸಮಯ – 1990
ಉಲ್ಲಂಘನೆ – 1996
ಮಂಜು ಕವಿದ ಸಂಜೆ -2001

ಕಾದಂಬರಿಗಳು:
ಬಿರುಕು – 1967
ಮುಸ್ಸಂಜೆಯ ಕಥಾ ಪ್ರಸಂಗ – 1978
ಅಕ್ಕ – 1991

ನಾಟಕಗಳು:

ಟಿ. ಪ್ರಸನ್ನನ ಗೃಹಸ್ಥಾಶ್ರಮ – 1962
ನನ್ನ ತಂಗಿಗೊಂದು ಗಂಡು ಕೊಡಿ – 1963
ಪೊಲೀಸರಿದ್ದಾರೆ, ಎಚ್ಚರಿಕೆ! – 1964
ತೆರೆಗಳು – 1964
ಕ್ರಾಂತಿ ಬಂತು, ಕ್ರಾಂತಿ -1965
ಗಿಳಿಯು ಪಂಜರದೊಳಿಲ್ಲ – 1966
ಸಿದ್ಧತೆ – 1970
ಸಂಕ್ರಾಂತಿ – 1971
ಬಿರುಕು – 1973
ಗುಣಮುಖ – 1993

ಅನುವಾದಗಳು:

ದೊರೆ ಈಡಿಪಸ್ ಮತ್ತು ಅಂತಿಗೊನೆ – 1971
ಪಾಪದ ಹೂವುಗಳು – 1974

ಗದ್ಯ ಬರಹ ಸಂಕಲನಗಳು:

ಪ್ರಸ್ತುತ -1970
ಕಂಡದ್ದು ಕಂಡಹಾಗೆ – 1975
ಟೀಕೆ-ಟಿಪ್ಪಣಿ – ಭಾಗ-1 ಮತ್ತು 2, 1997
ಟೀಕೆ-ಟಿಪ್ಪಣಿ – ಭಾಗ-3, 2008
ರೂಪಕ ಲೇಖಕರು – 2008
ಸಾಹಿತಿ ಸಾಹಿತ್ಯ ವಿಮರ್ಶೆ – 2008
ಮರೆಯುವ ಮುನ್ನ – ಸಂಗ್ರಹ-1, 2009
ಈ ನರಕ ಈ ಪುಲಕ – 2009
ಮರೆಯುವ ಮುನ್ನ – ಸಂಗ್ರಹ-2, 2010
ಮನಕೆ ಕಾರಂಜಿಯ ಸ್ಪರ್ಶ – 2010

ಕವನ ಸಂಕಲನಗಳು: ತಲೆಮಾರು – 1973
ಅಕ್ಷರ ಹೊಸ ಕಾವ್ಯ (ಸಂಪಾದನೆ) – 1970
ಚಿತ್ರ ಸಮೂಹ – 1999
ನೀಲು ಕಾವ್ಯ (ಸಂಗ್ರಹ-1) 2007
ನೀಲು ಕಾವ್ಯ (ಸಂಗ್ರಹ -2) 2009
ನೀಲು ಕಾವ್ಯ (ಸಂಗ್ರಹ -3) 2010

ಸಿನಿಮಾಗಳು:

ಪಲ್ಲವಿ – 1977
ಅನುರೂಪ – 1978
ಖಂಡವಿದಕೊ ಮಾಂಸವಿದಕೊ – 1979
ಎಲ್ಲಿಂದಲೋ ಬಂದವರು – 1980

ಆತ್ಮಕಥನ: ಹುಳಿಮಾವಿನ ಮರ – 1997

ಪಡೆದ ಪ್ರಶಸ್ತಿಗಳು:

‘ಪಲ್ಲವಿ’ ಚಿತ್ರ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ – 1977 (ಅತ್ಯುತ್ತಮ ನಿರ್ದೇಶನ)
‘ಪಲ್ಲವಿ’ ಚಿತ್ರಕ್ಕೆ ನಾಲ್ಕು ರಾಜ್ಯ ಪ್ರಶಸ್ತಿ – 1977 (ಅತ್ಯುತ್ತಮ ನಿರ್ದೇಶನ)
‘ಅನುರೂಪ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ – 1978
‘ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ -1980
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 1993 (ಕಲ್ಲು ಕರಗುವ ಸಮಯ – ಕಥಾ ಸಂಕಲನ)
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 1990
ಬಿ.ಎಚ್. ಶ್ರೀಧರ ಪ್ರಶಸ್ತಿ
ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ
ಆರ್ಯಭಟ ಸಾಹಿತ್ಯ ಪ್ರಶಸ್ತಿ

Leave a Reply