ವಿಶೇಷ ಉಪನ್ಯಾಸ – ಪುಸ್ತಕ ಬಿಡುಗಡೆ – ರಂಗಗೀತೆ – ಜನಪದ ಗೀತೆ – ಚಿತ್ರ ರಚನೆ – ಜನಪದ ಮಹಾಕಾವ್ಯಗಳ ಗಾಯನ – ಕವಿ ಗೋಷ್ಠಿಗಳು
ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್, ಕಿರಂ ಪ್ರಕಾಶನ ವತಿಯಿಂದ ದಿನಾಂಕ 7.8/2024ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ.ಕಿ.ರಂ.ನಾಗರಾಜ ಅವರ ನೆನಪಿನಲ್ಲಿ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿಯವರು ನೆರವೇರಿಸಲಿದ್ದಾರೆ. ‘ಕಾಡುವ ಕಿರಂ ಹೊಸ ಕವಿತೆಗಳು 2024’ ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್, ಉಪನ್ಯಾಸಕಿ ಸಹನಾ ಕೆ.ಎನ್., ವಾರ್ತಾ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಕವನ ಕೆ.ಎನ್., ಉಪನ್ಯಾಸಕಿ ಚಂದನ ಕೆ.ಎನ್. ಭಾಗವಹಿಲಿದ್ದಾರೆ. ಅಧ್ಯಕ್ಷತೆಯನ್ನು ರಾಜ್ಯಸಭೆಯ ಮಾಜಿ ಉಪ ಸಭಾಪತಿ ಡಾ.ಎಲ್.ಹನುಮಂತಯ್ಯ ವಹಿಸಲಿದ್ದಾರೆ. ಕರ‍್ಯಕ್ರಮದ ಪ್ರಸ್ತಾವನೆಯನ್ನು ಸಂಶೋಧಕ ಡಾ.ಪ್ರದೀಪ್ ಮಾಲ್ಗುಡಿ ಮಾಡಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ 2024ನೇ ಸಾಲಿನ ಕಾಡುವ ಕಿರಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಕಾಡುವ ಕಿರಂ 2024 ಪ್ರಶಸ್ತಿ ಪುರಸ್ಕೃತರು

ಡಾ.ಎಚ್.ಆರ್.ಸ್ವಾಮಿ – ಪರಿಸರ, ವೈಚಾರಿಕತೆ ಮತ್ತು ರಂಗಭೂಮಿ

ಪ್ರೊ.ಎಂ.ಜೆ.ಕಮಲಾಕ್ಷಿ – ಚಿತ್ರಕಲೆ

ಡಾ.ಕೆ.ಆರ್.ಸಂಧ್ಯಾ ರೆಡ್ಡಿ – ಜಾನಪದ

ರಾಮದೇವ ರಾಕೆ – ಹೋರಾಟ

ಡಾ.ಬಂಜಗೆರೆ ಜಯಪ್ರಕಾಶ್ – ಸಂಸ್ಕೃತಿ ಚಿಂತನೆ

ಕಾ.ತ.ಚಿಕ್ಕಣ್ಣ – ಸಂಸ್ಕೃತಿ ಚಿಂತನೆ
8 ಗಂಟೆಗೆ ರಂಗಧರ್ಮ ಮತ್ತು ಸಂಸ ಥಿಯೇಟರ್ ಪ್ರಸ್ತುತ ಪಡಿಸುವ, ಸಿದ್ದರಾಮ ಕಾರಣಿಕ್ ರಚನೆಯ, ಪ್ರದೀಪ್ ತಿಪಟೂರು ನಿದೇಶನದ ‘ಮಿಸೆಸ್ ಅಂಬೇಡ್ಕರ್’ ರಂಗ ಪ್ರಯೋಗ ನಡೆಯಲಿದೆ.

ರಾತ್ರಿ ಹತ್ತು ಗಂಟೆಯ ನಂತರ ಕಾವ್ಯನಮನ, ನುಡಿನಮನ, ರೇಖಾ ನಮನ, ಜನಪದ ನಮನ ಕಾರ್ಯಕ್ರಮಗಳು ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಚ್.ಎಸ್.ಶಿವಪ್ರಕಾಶ್, ಡಾ.ಎಚ್.ಎಲ್.ಪುಷ್ಪ, ಕೋಟಿಗಾನಹಳ್ಳಿ ರಾಮಯ್ಯ, ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಕೆ.ಷರೀಫಾ, ಆರ್.ಜಿ.ಹಳ್ಳಿ ನಾಗರಾಜ್, ಸುಬ್ಬು ಹೊಲೆಯಾರ್, ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ, ಡಾ.ಜಿ.ವಿ.ಆನಂದಮೂರ್ತಿ, ಡಾ.ವಡ್ಡಗೆರೆ ನಾಗರಾಜಯ್ಯ ಸೇರಿದಂತೆ ಹಿರಿಯ ಮತ್ತು ಕಿರಿಯ ಕವಿಗಳು ಕವಿತೆಗಳನ್ನು ವಾಚಿಸಲಿದ್ದಾರೆ.















ಪ್ರತಿ ಗೋಷ್ಠಿಯ ನಡುವೆ ಜನಪದ ಗೀತೆಗಳು, ರಂಗಗೀತೆ, ಜನಪದ ಮಹಾಕಾವ್ಯಗಳ ಗಾಯನ ಇರಲಿದ್ದು, ಇದರೊಂದಿಗೆ ವಿಶೇಷ ಉಪನ್ಯಾಸಗಳನ್ನು ಕೂಡ ಆಯೋಜಿಸಲಾಗಿದೆ. ಡಾ.ಅಪ್ಪಗೆರೆ ತಿಮ್ಮರಾಜು, ಸಿ.ಎಂ.ನರಸಿಂಹಮೂರ್ತಿ, ಯೋಗೇಶ್ ಮಾಸ್ಟರ್, ಕೆ.ಎಸ್.ಮಂಜುನಾಥ್, ಶಂಕರ್ ಭಾರತೀಪುರ, ಆನೇಕಲ್ ರಾಜೇಶ್, ಅರುಣ್ ಕುಮಾರ್ ಮಾಂಬಳ್ಳಿ, ಉಮ್ಮತ್ತೂರು ಬಸವರಾಜ್ ಮೊದಲಾದವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ತಬಲಾ ಸಾಥ್ ಅನ್ನು ವೆಂಕಟೇಶ್ ಜೋಷಿ ಮತ್ತು ಹಾರ್ಮೋನಿಯಂ ಸಾಥ್ ಅನ್ನು ಚಿದಾನಂದ ಕುಲಕರ್ಣಿ ನೀಡಲಿದ್ದಾರೆ.
ಬೆಳಿಗ್ಗೆ 6ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಭಾಷಣವನ್ನು ಹಿರಿಯ ಕವಿ, ಪ್ರಾಧ್ಯಾಪಕ ಪ್ರೊ.ಟಿ.ಯಲ್ಲಪ್ಪ ಮಾಡಲಿದ್ದು, ಅತಿಥಿಯಾಗಿ ಖ್ಯಾತ ಕಲಾವಿದ ಸುಭಾಷ್ ಕಮ್ಮಾರ್ ಭಾಗವಹಿಸುತ್ತಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ವಹಿಸಲಿದ್ದಾರೆ.



















