ಬೆಂಗಳೂರು: 2011ರಿಂದ ಜನಸಂಸ್ಕೃತಿ ಮತ್ತು ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಕಿರಂ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮ 2025ರ ಆಗಸ್ಟ್ ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಎಂದಿನಂತೆ ಈ ಬಾರಿ ಕೂಡ ಕಾರ್ಯಕ್ರಮದಲ್ಲಿ ಕವಿಗಳಿಂದ ಕವಿತೆ ವಾಚನ ಆಯೋಜಿಸಲಾಗುತ್ತಿದೆ. ಕರ್ನಾಟಕ ಮತ್ತು ಹೊರ ರಾಜ್ಯ, ದೇಶಗಳಲ್ಲಿರುವ ಕವಿಗಳು ಕವಿತೆಗಳನ್ನು ಕಳಿಸಬಹುದು. ಆದರೆ, ಆಗಸ್ಟ್ 7, 2025ರಂದು ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದಲ್ಲಿ ಖುದ್ದು ಭಾಗವಹಿಸಿ ಕವಿತೆಯನ್ನು ವಾಚಿಸಬೇಕು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕವಿಗಳು ಕವಿತೆಗಳನ್ನು ಕಳುಹಿಸಬಾರದು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ವಿಶೇಷ ಸೂಚನೆಗಳು :-
ಒಬ್ಬರು ಒಂದು ಕವಿತೆಯನ್ನು ಮಾತ್ರ ಕಳಿಸಬೇಕು
ಸ್ವರಚಿತ ಕನ್ನಡ ಕವಿತೆಯಾಗಿರಬೇಕು
ಭಾವಾನುವಾದ ಅಥವಾ ಭಾಷಾಂತರ ಕವಿತೆಯಾಗಿರಬಾರದು
ಕವಿತೆಯನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಟೈಪ್ ಮಾಡಿ ಕಳಿಸಬೇಕು
ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಹೊರ ತರುವ ರಾಜ್ಯ ಮಟ್ಟದ ಕವಿತೆಗಳ ಸಂಕಲನದಲ್ಲಿ ಪ್ರಕಟಿಸಲಾಗುವುದು ಮತ್ತು ಬೆಂಗಳೂರಿನಲ್ಲಿ ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿಗಳನ್ನು ಆಹ್ವಾನಿಸಲಾಗುವುದು.
ಕವಿಗಳು ಕವಿತೆಗಳನ್ನು ಕಳುಹಿಸುವಾಗ ಕಡ್ಡಾಯವಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು.
ಕವಿತೆಗಳನ್ನು ಈ ಕೆಳಗಿನ ಮಿಂಚಂಚೆಯ ಅಥವಾ ವಾಟ್ಸಪ್ ಮೂಲಕ ಜೂನ್ 30, 2025ರ ಒಳಗೆ ನಮಗೆ ಕಳುಹಿಸಬೇಕು.
ಕವಿತೆಯ ಆಯ್ಕೆ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಬಿಟ್ಟದ್ದು, ಈ ಕುರಿತು ಯಾವುದೇ ಪತ್ರ, ದೂರವಾಣಿ ವ್ಯವಹಾರಕ್ಕೆ ಅವಕಾಶವಿಲ್ಲ.
ಕವಿತೆಗಳನ್ನು ತಿರಸ್ಕರಿಸುವ ಅಥವಾ ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಸೇರಿದೆ.
ವಾಟ್ಸಪ್ ನಲ್ಲಿ ಕಳುಹಿಸುವವರಿಗೆ: 9902963582
ಮಿಂಚಂಚೆ: cheluvanthanu@gmail.com




