ವರಲಕ್ಷ್ಮಿ ಎನ್ ಗೋವಿಂದಸ್ವಾಮಿ ಅವರಿಗೆ ಆರ್ಯಭಟ ಅಂತರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ 

11 months ago

ಬೆಂಗಳೂರು: ವರಲಕ್ಷ್ಮಿ ಎನ್ ಗೋವಿಂದಸ್ವಾಮಿ, ಲೇಖಕರು, ನಟಿ, ರಂಗ ಸಂಘಟಕರು, ಅಮ್ಮನಪುರ, ಕೈಲಾಂಚ ಹೋಬಳಿ, ರಾಮನಗರ ಜಿಲ್ಲೆ ಮೊ: 9900242685 ಇವರು ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು ಮೂಲಕ ಕಳೆದ 25 ವರ್ಷಗಳಿಂದ ನಿರಂತರ ಮಾಡಿರುವ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗಾಗಿ 2025ರ ಸಾಲಿನ ಆರ್ಯಭಟ ಅಂತರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕ ಪದಾಧಿಕಾರಿಗಳಾದ ವರಲಕ್ಷ್ಮಿ ಎನ್. ಅವರು ಜ್ಯೋತಿನಿವಾಸ್ ಕಾಲೇಜಿನಿಂದ ಬಿ.ಕಾಂ. ಪದವಿಯನ್ನು ಮತ್ತು ಎಂ.ಇ.ಎಸ್, ರಂಗಶಾಲೆಯಿಂದ ನಾಟಕದಲ್ಲಿ ಡಿಪ್ಲೋಮೊ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ವಿವಿಧ ಹಂತಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಬಂಜಾರ ಅಕಾಡೆಮಿಯ ಪದಾಧಿಕಾರಿಗಳು ನಾಟಕದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಹಾಗೂ ಚಿನ್ನದ ಪದಕಗಳನ್ನು, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಪನ್ಮೂಲ ವ್ಯಕ್ತಿಯಾಗಿರುವುದು ವಿಶೇಷ.

ಈ ಸಂಸ್ಥೆಯ ಮೂಲ ಸಂಸ್ಥಾಪಕ ಅಧ್ಯಕ್ಷರು ಡಾ.ಎ.ಆರ್.ಗೋವಿಂದಸ್ವಾಮಿ, ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕರ್ನಾಟಕ ಸರ್ಕಾರ ಎಂಬುದು ವಿಶೇಷ.

ನಾಟಕ: ಗಿನ್ನಿಸ್ ದಾಖಲೆ
• ಅಕಾಡೆಮಿ ಅಧ್ಯಕ್ಷ ವರಲಕ್ಷ್ಮಿ ಅವರು ನಿರಂತರ ನಾಟಕ ಅಭಿನಯದಿಂದ `ಗಿನ್ನೀಸ್ ದಾಖಲಾದ’ ನಂದನ ರಂಗ ತಂಡದ ಸದಸ್ಯರಾಗಿದ್ದಾರೆ. `ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ’ಯ ಸಂಸ್ಥಾಪಕ ಅಧ್ಯಕ್ಷರಾಗಿ ಇವರು ಕಳೆದ 25  ವರ್ಷಗಳಿಂದ ಸತತವಾಗಿ ಸ್ಥಳೀಯ ಮಟ್ಟದಿಂದ ರಾಜ್ಯರಾಷ್ಟ್ರ ಮತ್ತು ಅಂತರ ರಾಷ್ಟ್ರಮಟ್ಟದ ನಾಟಕೋತ್ಸವಗಳು, ಸಾಂಸ್ಕೃತಿ ಉತ್ಸವಗಳು, ಕಲಾ ಉತ್ಸವಗಳು, ರಂಗ ತರಬೇತಿ, ನಾಟಕ ಕಮ್ಮಟ ವಿಶೇಷವಾಗಿ ಬಂಜಾರ ನಾಟಕಗಳನ್ನು ಆಧುನಿಕವಾಗಿ ಪ್ರಥಮ ಬಾರಿಗೆ ಬಂಜಾರ ಭಾಷೆಯಲ್ಲಿ ಪ್ರಯೋಗಿಸಿದ್ದಾರೆ. ರಂಗಭೂಮಿ, ಕಿರುತೆರೆ ನಟರು ಮತ್ತು ಲೇಖಕರು, ರಂಗ ಸಂಘಟಕರು, ತರಬೇತಿದಾರರು, ಜಾನಪದ, ಸಾಮಾಜಿಕ ಸಂಘಟಕರು ಹೀಗೆ ಬಹು ಆಯಾಮದಲ್ಲಿ ಕಾರ್ಯನಿರ್ವಹಿಸಿದ್ದಾರೆ.

• ಇವರು ಹಾಗೂ ಇವರ ತಂಡ ಅಭಿನಯಿಸಿರುವ ಪ್ರಮುಖ ನಾಟಕಗಳು ಹಾಗೂ ಸಾಧಿಸಿರುವ ಪ್ರಥಮಗಳು ಅನೇಕ:

• ಹೇರಾಮ್, ನೆನೆಯೋ ಜನವ, (ಕೇಂದ್ರ ಸರ್ಕಾರದ ಧ್ವನಿಬೆಳಕು ನಾಟಕ), ನಮ್ಮ ಅಂಗಳ, ಬೆವರಲ್ಲೆ ಬೆಳಕು, ಆರೋಗ್ಯಭಾಗ್ಯ, ಹೆಣ್ಣುಶಿಶು, ನಮ್ಮ ಚುನಾವಣೆಗೆ ಹಾಗೂ ಅನೇಕ ಬೀದಿನಾಟಕಗಳಲ್ಲಿ, ಟಿ.ವಿ. ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

• ‘ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ’ಯ ಅಧ್ಯಕ್ಷರಾಗಿದ್ದು ಕೋಂಡು, ಆದಿವಾಸಿ, ಬುಡಕಟ್ಟು, ದಮನಿತ, ದಲಿತರ ಕಲೆ, ಹಾಗೂ ಸಂಸ್ಕೃತಿಯನ್ನು ಮುಖ್ಯವಾಹಿನಿಗೆ ತಂದು, ದಾಖಲಿಸಿ ಪ್ರರ್ದಶನ ಮಾಡಿಸಿದ್ದಾರೆ.

• ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗ ಕೋರಿ ಬಂಜಾರ ಭಾಷೆ, ಲಿಪಿ, ಪ್ರಶಸ್ತಿಗಳು ಬರಲು ರಾಷ್ಟ್ರಮಟ್ಟದ ಸಂವಾದ ಆಯೋಜಿಸಿ ಶ್ರಮಿಸಿದ್ದಾರೆ.

• ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ರಾಮನಗರ ಜಿಲ್ಲೆಯ ಅಮ್ಮನಪುರ ತಾಂಡದಲ್ಲಿ ಯುವಕರಿಗಾಗಿ ಒಂದು ತಿಂಗಳ ರಂಗ ತರಬೇತಿ ಕಮ್ಮಟ ಆಯೋಜಿಸಿ ಕಮ್ಮಟದ ನಿರ್ದೇಶಕರಾಗಿ, ದೇವನೂರು ಮಹಾದೇವ ಅವರ ಸಣ್ಣ ಕಥೆ ಆಧರಿಸಿದ ‘ಒಡಲಾಳ’ ನಾಟಕವನ್ನು ಪ್ರಥಮ ಬಾರಿಗೆ ಕನ್ನಡ ಹಾಗೂ ಬಂಜಾರ ಭಾಷೆಯಲ್ಲಿ ಪ್ರಯೋಗಿಸಿ ಪ್ರಶಸ್ತಿಗಳ ಪ್ರಶಂಸೆಗೆ ಪಾತ್ರರಾದವರು.

• ಇವರು ಪ್ರಥಮ ಬಾರಿಗೆ ರಾಷ್ಟಿçÃಯ ಬಂಜಾರ ಸಾಹಿತ್ಯಿಕ, ಚಿತ್ರಕಲೆ ಹಾಗೂ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸಿದ್ದಾರೆ. ಸಿ.ಜಿ.ಕೆ ರಾಷ್ಟ್ರೀಯ ಉತ್ಸವಗಳನ್ನು ಬೆಂಗಳೂರಿನಲ್ಲಿ ಸಂಘಟಿಸಿದಾಗ ಸಹಕಾರ ನೀಡಿದ್ದಾರೆ.

• ಅಲೆಮಾರಿ ಬುಡಕಟ್ಟು ಪ್ರದರ್ಶನ ಕಲೆಗಳನ್ನು ಮುಖ್ಯವಾಹಿನಿಯಲ್ಲಿ ದುಡಿಸಿಕೋಳ್ಳುತ್ತಿದ್ದಾರೆ.

• ರಾಜ್ಯಮಟ್ಟದ ಬಂಜಾರ ಚಿತ್ರಕಲಾ ಶಿಖರ ಆಯೋಜಿಸಿದ್ದಾರೆ.

• ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಅವರು ಬಂಜಾರ ಸಂಸ್ಕೃತಿಯಲ್ಲಿರುವ ನಾಟಕೀಯ ಅಂಶಗಳನ್ನು ಒಳಗೊಂಡಂತೆ ರಚಿಸಿದ ‘ಹಾಡೇರ್ ಬೋಟಿ ಛೋಡೋ’ ಎಂಬ ಬಂಜಾರ ಭಾಷೆಯ ಪ್ರಥಮ ನಾಟಕವನ್ನು 18 ಫೆಬ್ರವರಿ 2011ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಿಸಿದ್ದಾರೆ.

• ಬಂಜಾರ ಹಾಗೂ ಆದಿಮ ರಂಗಭೂಮಿ ವಿಷಯಕ್ಕೆ ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿ ಫೆಲೋಶಿಫ್ ಪಡೆದಿದ್ದಾರೆ.

• ಬಂಜಾರ ಭಾಷೆಯಲ್ಲಿ ಪ್ರಥಮ ಆಧುನಿಕ ನಾಟಕ `ಬೆವರಲ್ಲೇ ಬೆಳಕು’, ಪ್ರಯೋಗ ಮಾಡಿಸಿದ್ದಾರೆ.

• ಕರ್ನಾಟಕ ನಾಟಕ ಅಕಾಡೆಮಿಯು ಇವರಿಗೆ ೨೦೧೫-೧೬ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ರಂಗ  ಅಧ್ಯಯನಕ್ಕೆ ಫೆಲೋಶಿಫ್ ನೀಡಿದೆ. ಈ ಅಧ್ಯಯನದಲ್ಲಿ ಲಂಬಾಣಿಗರ ಬದುಕು, ಸಂಸ್ಕೃತಿ, ಆಚರಣೆ, ಭಾಷೆ, ನೃತ್ಯ, ಗಾಯನ ಹಾಗು ವಾದ್ಯಗಳ ಬಳಕೆ, ನಾಟಕ  ಪ್ರಯೋಗ  ಆಧಾರಿತವಾಗಿ, ರಂಗ ದಿಗ್ಗಜರ ಹಾಗೂ ಜನರ ಅಭಿಪ್ರಾಯ, ವಿಮರ್ಶೆ, ಸಂದರ್ಶನ ಆಧರಿಸಿ ಸಂಶೋಧನೆ/ಅಧ್ಯಯನ ಮಾಡಿದ್ದಾರೆ.

• ರಂಗ ನಿರ್ದೇಶಕರಾಗಿ:
• ಕನಸಿನವರು, ತುಕ್ಕೂಜಿ, ಆಲಿಬಾಬ ಮತ್ತು ೪೦ ಕಳ್ಳರು ಸೇರಿದಂತೆ ೨೯ಕ್ಕೂ ಹೆಚ್ಚು ಧ್ವನಿ ಬೆಳಕು, ಹಾಗ ಪ್ರಯೋಗಿಕ ನಾಟಕಗಳು, ಸ್ಕಿಟ್ಗಳು, ಮೂಕಾಭಿನಯ, ಪ್ರಚಾರ ನಾಟಕಗಳ ನಿರ್ದೆಶನ. ಬೀದಿನಾಟಕಗಳಲ್ಲಿ ಅಭಿನಯ, ಹಾಗೂ ನಿರ್ದೆಶಕ ಸಂಘಟನೆ.

• ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ರಂಗಭೂಮಿ ವಿಷಯವನ್ನು ಕಿರು ನಾಟಕಗಳ ರಚನೆ ಮಾಡಿದ್ದಾರೆ ಸ್ವತ: ಅಳವಡಿಸಿ ಸರಕಾರಿ ಸಂಸ್ಥೆಗಳಲಿ ತರಬೇತಿ ನೀಡುತ್ತಿದ್ದಾರೆ. ಹೀಗೆ ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಕೆಲಸ ಮಾಡುತ್ತಿದ್ದಾರೆ.

• ನಾಟಕ ಕಮ್ಮಟಗಳ ನಿರ್ದೇಶನ:

• ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ರಾಮನಗರ ಜಿಲ್ಲೆಯ ಅಮ್ಮನಪುರ ತಾಂಡದಲ್ಲಿ ನಾಟಕ ಕಮ್ಮಟ ನಿರ್ದೇಶನ ಮಾಡಿ, ‘’ಒಡಲಾಳ’’ ನಾಟಕ ಬಂಜಾರ ಭಾಷೆಯಲ್ಲಿ ಪ್ರಯೋಗಿಸಿದ್ದಾರೆ. ಹೀಗೆ ತಳಸಮುದಾಯಗಳಲ್ಲಿ ಹತ್ತಾರು ಪ್ರಥಮಗಳನ್ನು ಮಾಡಿದ ಹೆಗ್ಗಳಿಕೆ ಪಡೆದಿದ್ದಾರೆ.

• ನಾಟಕ ರಚನೆ ಹಾಗೂ ಇತರೆ ಕೃತಿಗಳು:
• ಮಕ್ಕಳ ಮಾರಾಟ ಕುರಿತು ಮೊದಲ ಬಂಜಾರ ನಾಟಕ ‘ಮಕ್ಕಳ ನ್ಯಾಯ’. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಟಕ ರಚನಾ ಕಮ್ಮಟದಲ್ಲಿ ಉತ್ತಮ ನಾಟಕಕೃತಿಯಾಗಿ ಆಯ್ಕೆಯಾಗಿ, ಸಂಸ್ಕೃತಿ ಇಲಾಖೆ ಹಾಗೂ ಬಂಜಾರ ಅಕಾಡೆಮಿಯಿಂದ ಪ್ರಯೋಗವಾಗಿದೆ.

• ವಿದ್ಯುದಾಲಿಂಗನ (ವಿದ್ಯುತ್ ಅಪಘಾತ ಕುರಿತ ರೇಡಿಯೋ ನಾಟಕ) ಹಾಗು 20ಕ್ಕೂ ಹೆಚ್ಚು ಪ್ರಚಾರ ನಾಟಕಗಳು, ಸ್ಕಿಟ್ಗಳನ್ನು ರಚಿಸಿ ಪ್ರಯೋಗಿಸಿದ್ದಾರೆ.

ರಂಗಾಭರಣ ಶಾಲೆ, ಚಿತ್ರತಂಡ, ಎಂ.ಇ.ಎಸ್. ರಂಗಶಾಲೆ, ಇಪ್ಟಾ ಕಲಾತಂಡ, ಸೃಷ್ಠಿ ಕಲಾತಂಡ, ಮುಂತಾದ ೨೩ಕ್ಕೂ ಹೆಚ್ಚಿನ ರಂಗ ಸಂಸ್ಥೆಗಳಿಗೆ ಸಂಪನ್ಮೂಲ ವೈಕ್ತಿಗಳನ್ನು ನಿಯೋಜಿಸಿ ಕೆಲಸ ನಿರ್ವಹಿಸಿದ್ದಾರೆ.

ಸಮಾಜಸೇವೆ:
ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಅಲೆಮಾರಿ, ಬುಡಕಟ್ಟುಗಳ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ವಿವಿಧ ಹಂತಗಳಲ್ಲಿ ಸಹಾಯಹಸ್ತ ಚಾಚಿರುವುದು. ಶುಲ್ಕ ಪಾವತಿಸಿರುವುದು. ಉನ್ನತ ವ್ಯಾಸಂಗಕ್ಕೆ ಸಹಕಾರ ನೀಡಿರುವುದು ಮುಂತಾದವು.

• ರಂಗ ತರಬೇತಿ:
• ವಿವಿಧ ರಂಗ ಸಂಘಟನೆಗಳ ಪದಾಧಿಕಾರಿ/ ಸದಸ್ಯರಾಗಿ ಸೇವೆ.
• ಸಂಚಾಲಕರು: ಬಿ.ವಿ.ಕಾರಂತ್ ಇಂಡಿಯನ್ ಅಕ್ಟಿಂಗ್ ಅಕಾಡೆಮಿ, ಬೆಂಗಳೂರು.
• ಸಂಚಾಲಕರು: ರಂಗಭೂಮಿ ಕ್ರಿಯಾ ಸಮಿತಿ, ಬೆಂಗಳೂರು.
• ಸಂಚಾಲಕರು: ರಂಗಭೂಮಿ ಹಿತರಕ್ಷಣಾ ವೇದಿಕೆ (ರಾಜ್ಯ ರಂಗತಂಡಗಳ ಒಕ್ಕೂಟ).
• ಸಂಚಾಲಕರು: ರಂಗ ಜಾಗೃತಿ ವೇದಿಕೆ, ದೇಸಿರಂಗತಂಡ ಮುಂತಾದವು.

ನ್ಯಾಯಮೂರ್ತಿ ಡಾ. ಅಶೋಕ ಬಿ. ಹಿಂಚಿಗೇರಿ, ಅಧ್ಯಕ್ಷರು, ಕರ್ನಾಟಕ ಕಾನೂನು ಆಯೋಗ, ಮಹೇಶ್ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಡಾ. ಹೆಚ್. ಎಲ್. ಎನ್. ರಾವ್, ಸಂಸ್ಥಾಪಕ ಅಧ್ಯಕ್ಷರು, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಪ್ರಶಸ್ತಿ ವಿಜೇತರು ವರಲಕ್ಷ್ಮಿ, ಎನ್, ಗೋವಿಂದಸ್ವಾಮಿ, ಅಧ್ಯಕ್ಷರು, ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು, ಸಮಾರಂಭದಲ್ಲಿ ಪದ್ಮಶ್ರೀ ಭಾರತೀ ವಿಷ್ಣು ವರ್ಧನ್, ಹಿರಿಯ ನಟಿ ಡಾ.ಜಯಮಾಲ, ಪ್ರೇಮ ಕವಿ, ಸಂಗೀತ ನಿರ್ದೇಶಕ, ಕೆ. ಕಲ್ಯಾಣ್, ವಿದೇಶಿ ಗಣ್ಯರು ಹಾಗೂ ಇತರೆ ವಿವಿಧ ಕ್ಷೇತ್ರಗಳ ಸಾಧಕರು ಹಾಜರಿದ್ದರು.

Leave a Reply