ಬಂಜಾರ ಸಂಸ್ಕೃತಿ ಮತ್ತು  ಭಾಷಾ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆ

1 year ago

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, 2022, 2023 ಹಾಗೂ 2024 ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ  ರೂ 25,000 (ರೂಪಾಯಿ ಇಪ್ಪತ್ತೈದು ಸಾವಿರ ಮಾತ್ರ). ಪುರಸ್ಕೃತರಿಗೆ  ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಲ್ಲಿ ನಡೆದ ಪುಸ್ತಕಗಳ ಆಯ್ಕೆ ಸಮಿತಿ ಸಭೆಯಲ್ಲಿ ಈ ಕೆಳಕಂಡಂತೆ ಕೃತಿಗಳು 2022, 2023 ಹಾಗೂ 2024 ನೇ ಸಾಲಿನ ʻಪುಸ್ತಕ ಬಹುಮಾನ ಪ್ರಶಸ್ತಿʼ ಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

2022ನೇ ಸಾಲಿಗೆ ಆಯ್ಕೆಯಾದ ಪುಸ್ತಕಗಳು
ಕಲಬುರಗಿ ಜಿಲ್ಲೆಯ ಬಂಜಾರ ಮಹಿಳೆಯರ ಸ್ಥಿತಿ ಗತಿ (ಸಂಶೋಧನೆ): ಡಾ. ಶ್ರೀದೇವಿ ಎಲ್
ಜಾಗೋ ಬಂಜಾರ (ಬಂಜಾರ ಭಾಷೆ ಕವನ ಸಂಕಲನ): ರಾಮು ಎನ್‌. ರಾಠೋಡ್‌ ಮಸ್ಕಿ
ಶ್ರೀ ಪ್ರೋಮಾಸಾಧ (ಜೀವನ ಚರಿತ್ರೆ): ಕಾಂತ ರಾಮಪ್ಪ ಜಾಧವ

2023 ನೇ ಸಾಲಿಗೆ ಆಯ್ಕೆಯಾದ ಪುಸ್ತಕಗಳು
ಮಹಾ ಚಲನೆ (ಸಂಸ್ಕೃತಿ)‌: ಡಿ. ರಾಮಾನಾಯಕ್
ಮಠ (ಕಾದಂಬರಿ): ಇಂದುಮತಿ ಲಮಾಣಿ
ಗೋರ್ಬೋಲಿಯ ವೊಜಾಳೊ(ವಿಮರ್ಶೆ): ಉಮೇಶ್‌ ನಾಯ್ಕ್‌ ಎನ್‌ ಹುಳಿಯಾರ್‌

2024 ನೇ ಸಾಲಿಗೆ ಆಯ್ಕೆಯಾದ ಪುಸ್ತಕಗಳು
ವಲಸೆ ಹಕ್ಕಿಯ ಹಾಡು ( ಆತ್ಮಕತೆ): ಪ್ರೊ. ಕೃಷ್ಣನಾಯಕ್‌
ಸೋಸಿಯೋ ಎಕನಾಮಿಕ್ಸ್‌ ಕಲ್ಚರಲ್‌ ಅಂಡ್‌ ಪೊಲಿಟಿಕಲ್‌
ಡೈಮೆನ್ಸನ್‌ ಆಫ್‌ ಬಂಜಾರ (ಸಂಶೋಧನೆ): ಡಾ. ಪರಮೇಶ್‌ ನಾಯಕ್‌
ಘಣ್‌ ಊಪರ್‌ ( ಸೃಜನ ಶೀಲ ಕಾವ್ಯ): ಸಥೀಶಾ ಗಟ್ಟಿ ಮಂಡೆಲಾ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ 2022‌, 2023 ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ವಿತರಣಾ ಸಮಾರಂಭವನ್ನು ಮಾರ್ಚ್‌ ಮಾಹೆಯಲ್ಲಿ ಏರ್ಪಡಿಸಲಾಗುವುದು ಎಂದು ಬಂಜಾರ ಸಂಸ್ಕೃತಿ ಮತ್ತು  ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ ಎ.ಆರ್.‌ ಗೋವಿಂದಸ್ವಾಮಿ ತಿಳಿಸಿದ್ದಾರೆ.

Leave a Reply