ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸುವರ್ಣಮಹೋತ್ಸವ

11 months ago

5 ಜನಗಣ್ಯರಿಗೆ ಸನ್ಮಾನ, 8 ವಿದೇಶಿ ಭಾರತೀಯರುಸೇರಿ 63 ಸಾಧಕರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಭಾರತದ ಪ್ರಥಮ ಕೃತಕ ದೇಶೀಯ ಉಪಗ್ರಹ, ಭೂಮಿಯ ಕಕ್ಷೆಗೆ ಉಡಾವಣೆಯಾಗಿ 50 ವರ್ಷಗಳು ಸಂದಿವೆ.  ಇದರ ನೆನಪಿಗಾಗಿ ಅಂದೇ ಸ್ಥಾಪಿತವಾದದ್ದು ಆರ್ಯಭಟ ಸಾಂಸ್ಕೃತಿಕ ಸಂಸ್ಥೆ. ಸಂಗೀತ, ನೃತ್ಯ, ರಂಗಭೂಮಿ, ಜಾನಪದ ಲಲಿತಕಲೆ,  ಸಮಾಜಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿರುವ ದೇಶ ಮತ್ತು ವಿದೇಶಗಳಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಆರ್ಯಭಟ ಪ್ರಶಸ್ತಿ ನೀಡಲಾಗಿರುತ್ತಿದೆ. ದಿನಾಂಕ: 22.05.2025ರಂದು ಸಂಜೆ 5:30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪತ್ರಿಕೆ ಸಂಪಾದಕ ಡಾ.ಜಿ.ವೈ.ಪದ್ಮನಾಗರಾಜು, ಡಾ.ರಘುನಾಥ್, ವಿದ್ವಾನ್ ಹೆಚ್.ಎಸ್.ಮೇಣುಗೋಪಾಲ್ (ಕೊಳಲು) ಅಂಜು (ಭರತನಾಟ್ಯ), ವರಲಕ್ಷ್ಮಿ ಎನ್ ಗೋವಿಂದಸ್ವಾಮಿ, ಅಧ್ಯಕ್ಷರು,  ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ (ಸಮಾಜ ಸೇವೆ), ಚೆರ್ಕಾಡಿ ಸಚ್ಚಿದಾನಂದಶೆಟ್ಟಿ (ಸಾಹಿತ್ಯ) ಡಾ.ರಘುನಾಥ್ ಎಸ್ (ಉದ್ಯಮ ಮತ್ತು ಸಮಾಜಸೇವೆ) ಶೀಲಾ (ಇಂಜಿನಿಯರಿಂಗ್)  ಸೇರಿದಂತೆ 63 ಸಾಧಕರಿಗೆ ಪ್ರಸಕ್ತ ಸಾಲಿನ ಆರ್ಯಭಟ ಪ್ರಶಸ್ತಿ ಲಭಿಸಿದೆ. 

ಈ ಕಾರ್ಯಕ್ರಮದಲ್ಲಿ  ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಡಾ.ಜಯಮಾಲಾ, ರಾಜೇಂದ್ರಸಿಂಗ್ ಬಾಬು, ವಿಶ್ವೇಶ್ವರಭಟ್ ಹಾಗೂ ಕೆ.ಕಲ್ಯಾಣ್ ಅಲ್ಲದೆ ಈ ಕೆಳಕಂಡ ವಿದೇಶಿ ಭಾರತೀಯರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.  ಡಾ.ಸುಧಾಕರ್ರಾವ್ (ಬೊಸ್ಟನ್ ಅಮೆರಿಕ), ಮಂದಾರಶೆಟ್ಟಿ (ಲಂಡನ್), ಭಾವನ ಪ್ರದ್ಯುಮ್ನ (ಪ್ಯಾರಿಸ್), ನಿತಿನ್ ಶ್ರೀವಾಸ್ತವ (ಲಿಯಾನ್ ಫ್ರಾನ್ಸ್), ಎಸ್ ಡಿಟಿಪ್ರಸಾದ್ (ಮಸ್ಕಟ್), ಸುಮಾ ಮಹೇಶ್ ಗೌಡ (ಕತಾರ್), ಶ್ವೇತಾರಾಮ್ (ದುಬೈ), ದೀಪಕ್ ಎಸ್ ಪಿ(ದುಬೈ) ಹಾಗೂ 63 ನಮ್ಮ ದೇಶದ ಸಾಧಕರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಕಾರ್ಯಕ್ರಮವನ್ನು ನ್ಯಾಯಮೂರ್ತಿ ಡಾ.ಅಶೋಕ್ಬಿ. ಹಿಂಚಿಗೇರಿ, ಅಧ್ಯಕ್ಷರು ಕರ್ನಾಟಕ ಕಾನೂನು ಆಯೋಗ ಇವರು ಉದ್ಘಾಟಿಸಲಿದ್ದು,  ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಹಾಗೂ ಮಹೇಶ್ ಜೋಶಿ, ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹೆಚ್ಎಲ್ಎನ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ವಿಶೇಷವಾಗಿ 50 ಕೊಳಲುವಾದಕರಿಂದ ಸಾಮೂಹಿಕ ಕೊಳಲು ವಾದನವನ್ನು ವಿದ್ವಾನ್ ಎಚ್ಎನ್.ವೇಣುಗೋಪಾಲ್ರವರು ನಡೆಸಿಕೊಡಲಿದ್ದಾರೆ.

Leave a Reply